ETV Bharat / state

ಉತ್ತರ ಕನ್ನಡ ಜಿಲ್ಲೆಯ 108 ಗ್ರಾಮಗಳಲ್ಲಿ ಪ್ರವಾಹ: ನಾಲ್ವರು ಸಾವು, ಮೂವರು ನಾಪತ್ತೆ

author img

By

Published : Jul 25, 2021, 12:08 PM IST

4-people-died-3-missing-in-uttara-kannada-causing-heavy-rain
ಉ.ಕ ಭಾಗದ 108 ಗ್ರಾಮಗಳಲ್ಲಿ ಪ್ರವಾಹ:

ಅಂಕೋಲಾ ತಾಲೂಕಿನ ಹೆಗ್ಗಾರ ಮತ್ತು ಕಲ್ಲೇಶ್ವರ ಸಂಪರ್ಕ ಕಲ್ಪಿಸುವ ಗುಳ್ಳಾಪುರ ಸೇತುವೆ ನಿನ್ನೆ ಗಂಗಾವಳಿ ನದಿ ಪ್ರವಾಹದಿಂದಾಗಿ ಕೊಚ್ಚಿಹೋಗಿದೆ. ಇದರಿಂದ ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಸದ್ಯ ಸೇತುವೆ ಕೊಚ್ಚಿಹೋಗಿದ್ದರಿಂದ ಗ್ರಾಮಗಳಿಗೆ ಸಂಪರ್ಕ ಇಲ್ಲದೆ ನಡುಗಡ್ಡೆಯಂತಾಗಿವೆ.

ಕಾರವಾರ (ಉ.ಕ): ಈ ಬಾರಿಯೂ ಮಳೆ-ಪ್ರವಾಹ ಉತ್ತರ ಕನ್ನಡ ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡಿದೆ. ಪ್ರವಾಹದಿಂದ 108 ಗ್ರಾಮಗಳಿಗೆ ಹಾನಿಯಾಗಿದ್ದು, 15,077 ಜನರು ನೆರೆಯಿಂದ ಸಮಸ್ಯೆಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಕಾಳಿ, ಗಂಗಾವಳಿ, ಅಘನಾಶಿ ನದಿಗಳು ತುಂಬಿ ಹರಿದ ಪರಿಣಾಮ ಪ್ರವಾಹ ಸೃಷ್ಟಿಯಾಗಿತ್ತು. ಪ್ರವಾಹದಿಂದ ಯಲ್ಲಾಪುರ, ಶಿರಸಿ, ಸಿದ್ಧಾಪುರ ಹಾಗೂ ಹೊನ್ನಾವರದಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದು, ಅಂಕೋಲಾದಲ್ಲಿ 2, ಯಲ್ಲಾಪುರದಲ್ಲಿ ಓರ್ವ ಸೇರಿ 3 ಮಂದಿ ಕಣ್ಮರೆಯಾಗಿದ್ದಾರೆ‌.

ಉ.ಕ ಭಾಗದ 108 ಗ್ರಾಮಗಳಲ್ಲಿ ಪ್ರವಾಹ

ಪ್ರವಾಹದಲ್ಲಿ ಒಟ್ಟು 50 ಮನೆಗಳು ಪೂರ್ಣ, 146 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಜಿಲ್ಲೆಯಾದ್ಯಂತ 94 ಕಾಳಜಿ ಕೇಂದ್ರಗಳಲ್ಲಿ 9,655 ಮಂದಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಪ್ರವಾಹದಿಂದಾಗಿ 28 ಸೇತುವೆ ಹಾಗೂ ಕಾಲುಸಂಕಗಳಿಗೆ ಹಾನಿಯಾಗಿದ್ದು, 148.2 ಕಿ.ಮೀ ರಸ್ತೆಗೆ ಹಾನಿಯಾಗಿದೆ. ಅಲ್ಲದೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೂಕುಸಿತದಿಂದ ಸಂಚಾರ ಸ್ಥಗಿತವಾಗಿದೆ. ಜೊತೆಗೆ ಗಂಗಾವಳಿ ನದಿ ಹರಿವು ಕಡಿಮೆಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ 66 ಸಂಚಾರಕ್ಕೆ ಮುಕ್ತವಾಗಿರುವುದಾಗಿ ತಿಳಿಸಿದ್ದಾರೆ.

ಜನರ ಓಡಾಟಕ್ಕೆ ಬೋಟ್ ವ್ಯವಸ್ಥೆ

ಗಂಗಾವಳಿ ಪ್ರವಾಹಕ್ಕೆ ಗುಳ್ಳಾಪುರ-ಹಳವಳ್ಳಿ ಸೇತುವೆ ಕೊಚ್ಚಿ ಹೋಗಿ ದ್ವೀಪದಂತಾದ ಗ್ರಾಮಗಳಲ್ಲಿ ತುರ್ತು ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ವಿಶೇಷ ಯಾಂತ್ರೀಕೃತ ಬೋಟ್ ಒಂದನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ವ್ಯವಸ್ಥೆ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಹೆಗ್ಗಾರ ಮತ್ತು ಕಲ್ಲೇಶ್ವರ ಸಂಪರ್ಕ ಕಲ್ಪಿಸುವ ಗುಳ್ಳಾಪುರ ಸೇತುವೆ ನಿನ್ನೆ ಗಂಗಾವಳಿ ನದಿ ಪ್ರವಾಹದಿಂದಾಗಿ ಕೊಚ್ಚಿಹೋಗಿದೆ. ಇದರಿಂದ ಈ ಭಾಗದ ಹೆಗ್ಗಾರ್, ಕಲ್ಲೇಶ್ವರ, ಸೇವಕಾರ, ಕೊನಾಳ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಸದ್ಯ ಸೇತುವೆ ಕೊಚ್ಚಿಹೋಗಿದ್ದರಿಂದ ಗ್ರಾಮಗಳಿಗೆ ಸಂಪರ್ಕ ಇಲ್ಲದೆ ನಡುಗಡ್ಡೆಯಂತಾಗಿವೆ.

ಬಳಿಕ ಸಚಿವ ಶಿವರಾಮ್ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಸ್ಥರ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸಚಿವರ ಬಳಿ ಮನವಿ ಮಾಡಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಆ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಅತೀ ಶೀಘ್ರವಾಗಿ ವಿಶೇಷ ಯಾಂತ್ರೀಕೃತ ಬೋಟ್ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: ಕೊಚ್ಚಿ ಹೋದ ಮನೆಗಳು: ಅಕ್ಕಿ ಬಟ್ಟೆ ಎಲ್ಲ ನೀರುಪಾಲು.. ಉತ್ತರ ಕನ್ನಡ ಮಂದಿ ಬದುಕು ಅತಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.