ETV Bharat / state

2 ದಿನದ ಹಿಂದೆ ನಾಪತ್ತೆಯಾಗಿದ್ದ ಯುವತಿ ಭೂತ ಬೆಟ್ಟುವಿನ ಬಾವಿಯಲ್ಲಿ ಶವವಾಗಿ ಪತ್ತೆ

author img

By

Published : Jul 10, 2020, 5:35 PM IST

missing-girl-dead-body-found-udupi
ಶವ ಪತ್ತೆ

ಉಡುಪಿ ಜಿಲ್ಲೆಯ ಕಾಪು ಶಿರ್ವದ ಭೂತ ಬೆಟ್ಟುವಿನ ಬಾವಿಯೊಂದರಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.

ಉಡುಪಿ: ನಾಪತ್ತೆಯಾಗಿದ್ದ ಯುವತಿ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಾಪು ಶಿರ್ವದ ಭೂತ ಬೆಟ್ಟು ಎಂಬಲ್ಲಿ ನಡೆದಿದೆ.

ಸೌಭಾಗ್ಯ(18) ಮೃತ ಯುವತಿ. ಬುಧವಾರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ ಈಕೆ ಸಂಜೆಯಾದರೂ ಮರಳಿ ಬಾರದ ಹಿನ್ನೆಲೆ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು.

ಇಂದು ಮನೆ ಸಮೀಪದ ಬಾವಿಯಲ್ಲಿ ಯುವತಿಯ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.