ETV Bharat / state

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರ ಆರೋಪ

author img

By

Published : Mar 10, 2021, 7:14 AM IST

Updated : Mar 10, 2021, 1:15 PM IST

Accused of corruption at Kollur Mookambika Temple
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರದ ಆರೋಪ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಹಗರಣಗಳ ಸರಮಾಲೆ ಮತ್ತೊಮ್ಮೆ ಸದ್ದು ಮಾಡಿದೆ. ದೇವಾಲಯಗಳ ರಕ್ಷಣೆಗೆ ಹೋರಾಟ ನಡೆಸುವ ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಆರೋಪಗಳ ಸುರಿಮಳೆಯನ್ನೇ ಹರಿಸಿದೆ. ಎರಡು ವರ್ಷಗಳಷ್ಟು ಹಳೆಯ ದಾಖಲೆಗಳ ಆಧಾರದಲ್ಲಿ ಮಹಾಸಂಘವು ಈ ಆರೋಪ ಮಾಡಿದೆ.

ಉಡುಪಿ : ದೇಶದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಹಗರಣಗಳ ಸರಮಾಲೆ ಮತ್ತೊಮ್ಮೆ ಸದ್ದು ಮಾಡಿದೆ. ದೇವಾಲಯಗಳ ರಕ್ಷಣೆಗೆ ಹೋರಾಟ ನಡೆಸುವ ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಆರೋಪಗಳ ಸುರಿಮಳೆಯನ್ನೇ ಹರಿಸಿದೆ. ಮಾಹಿತಿ ಹಕ್ಕಿನಡಿಯಲ್ಲಿ ಪಡೆದ ದಾಖಲೆಗಳ ಆಧಾರದಲ್ಲಿ 2018-19 ಸಾಲಿನವರೆಗೆ ನಡೆದ ಅನೇಕ ಹಗರಣಗಳನ್ನು ಬಯಲು ಮಾಡಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರ ಆರೋಪ

ಕೊಲ್ಲೂರು ಮುಕಾಂಬಿಕಾ ಕ್ಷೇತ್ರವೆಂದರೆ ಭಕ್ತರಿಗೆ ಎಲ್ಲಿಲ್ಲದ ಶೃದ್ಧೆ ಮತ್ತು ಅಭಿಮಾನ. ದೇಶದ ನಾನಾ ಭಾಗಳಿಂದ ಬರುವ ಭಕ್ತರು ಈ ಕ್ಷೇತ್ರದ ಬಗ್ಗೆ ಅಪಾರ ಭಕ್ತಿಯನ್ನು ವ್ಯಕಪಡಿಸುತ್ತಾರೆ. ಆದರೆ, ಭ್ರಷ್ಟಾಚಾರಿಗಳಿಗೆ ಜನರ ಭಕ್ತಿಯೇ ಬಂಡವಾಳ ಆಗ್ತಾ ಇದ್ಯಾ? ಹೀಗೊಂದು ಸಂಶಯ ಬರೋದಕ್ಕೆ ಕಾರಣವಾಗಿದೆ. ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಕೆಲವೊಂದು ದಾಖಲೆಗಳನ್ನು ಬಹಿರಂಗ ಮಾಡಿದೆ. ಅವರ ಪ್ರಕಾರ ದೇವಸ್ಥಾನದ ವ್ಯವಹಾರದಲ್ಲಿ 21.80 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಸಂಶಯಾಸ್ಪದವಾಗಿದೆ. ಇದು ಕೇವಲ ಮಹಾಸಂಘದವರು ಮಾಡಿದ ಆರೋಪವಲ್ಲ, ಬದಲಿಗೆ ಸ್ವತಃ ಸರ್ಕಾರಿ ಲೆಕ್ಕಪರಿಶೋಧಕರು ಮಾಹಿತಿ ನೀಡಿದ್ದಾರೆ.

ದೇವರಿಗೆ ಅರ್ಪಣೆಯಾದ ಕಿಲೋಗಟ್ಟಲೆ ಚಿನ್ನ ಕಾಣೆ :

ಹೌದು, ದೇವಸ್ಥಾನಗಳ ರಕ್ಷಣೆಯ ಉದ್ದೇಶ ಇರಿಸಿಕೊಂಡ ಮಹಾಸಂಘಟವು ಮಾಡಿರುವ ಆರೋಪಗಳು ಒಂದಕ್ಕಿಂತ ಇನ್ನೊಂದು ಗುರುತರವಾಗಿವೆ. 2016 ರಲ್ಲಿ ಕೊಲ್ಲೂರಮ್ಮನ ಚಿನ್ನವನ್ನು ದೇವಳದ ಸಿಬ್ಬಂದಿಗಳೇ ಕದ್ದು ಮಾರಿದ್ದು ಸುದ್ದಿಯಾಗಿತ್ತು. 4.20 ಕಿಲೋ ತೂಕದ ಬಂಗಾರ ದೇವಳದ ಇಇಒ ಸೇರಿದಂತೆ ಸಿಬ್ಬಂದಿಗಳ ಬೊಕ್ಕಸ ಸೇರಿತ್ತು. ಈ ಸಂಬಂಧ ಹಲವರ ಬಂಧನವಾಗಿದ್ದರೂ ಚಿನ್ನ-ಬೆಳ್ಳಿಯ ಲೆಕ್ಕಾಚಾರ ಇನ್ನೂ ಸರಿಯಾಗಿಲ್ಲ. 2018-19 ರ ವರೆಗೆ ಪಡೆದ ಚಿನ್ನದ ದೇಣಿಗೆಯ ಲೆಕ್ಕಾಚಾರವೇ ಇಲ್ಲ. ಹಾಗಾಗಿ ಹೊಸದಾಗಿ ನಡೆಸಿದ ಲೆಕ್ಕಪರಿಶೋಧನೆಯಲ್ಲೂ ಚಿನ್ನಾಭರಣದ ಮೌಲ್ಯ ತಾಳೆಯಾಗುತ್ತಿಲ್ಲ. ಆರೋಪಿಗಳು ಜಾಮೀನು ಪಡೆದು ಹೊರಬಂದು ಸುಖವಾಗಿದ್ದಾರೆ.

ಬಾಕಿ ವಸೂಲಿಯೇ ಲಕ್ಷಾಂತರ ಬಾಕಿ ಇಟ್ಟುಕೊಂಡ ದೇವಸ್ಥಾನ :

ಅಚ್ಚರಿಯ ವಿಚಾರ ಅಂದ್ರೆ ದೇವಸ್ಥಾನವು ತನಗೆ ವಿವಿಧ ಮೂಲಗಳಿಂದ ಬರಬೇಕಾಗಿರುವ 84.96 ಲಕ್ಷ ರೂಪಾಯಿ ಯನ್ನು ಇನ್ನೂ ವಸೂಲಾತಿ ಮಾಡಿಲ್ಲ. ದೇವಸ್ಥಾನದ ವಿಶ್ರಾಂತಿ ಗೃಹದಿಂದಲೇ 21.52 ಲಕ್ಷ ರೂಪಾಯಿ ದೇವಳದ ಭೊಕ್ಕಸಕ್ಕೆ ಪಾವತಿ ಬಾಕಿಯಿದೆ.

ಜಿಲ್ಲಾಧಿಕಾರಿ ಮನೆಯ ಟೆಲಿಫೋನ್ ಬಿಲ್ ಗೂ ಕೊಲ್ಲೂರಮ್ಮನ ಕಾಣಿಕೆ ಬಳಕೆ

2019 ನೇ ಇಸವಿಯಲ್ಲಿ ಜಿಲ್ಲಾಧಿಕಾರಿಗಳ ನಿವಾಸದ ದೂರವಾಣಿ ಬಿಲ್, 23,363 ರೂಪಾಯಿಗಳನ್ನು,ದೇವಸ್ಥಾನದ ನಿಧಿಯಿಂದಲೇ ಭರಿಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.

ಓದಿ :ಕೇಸ್ ನಿಲ್ಲುವ ದಾಖಲೆ ಸಿಗುತ್ತಿದ್ದಂತೆ ದೂರು ದಾಖಲು: ಬಾಲಚಂದ್ರ ಜಾರಕಿಹೊಳಿ‌

ಆರೋಪಗಳ ಸರಣಿ ಇಷ್ಟಕ್ಕೇ ಮುಗಿಯೋದಿಲ್ಲ. ದೇವಸ್ಥಾನದ ಸಿಬ್ಬಂದಿಗಳ ಸುಳ್ಳುಲೆಕ್ಕ ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆ, ಸಿಬ್ಬಂದಿಗಳ ಕೆವೈಸಿ ವಿವರ, ಜನನ ದಿನಾಂಕ ಇತ್ಯಾದಿ ಪ್ರಾಥಮಿಕ ವಿವರಗಳನ್ನೂ ಕೂಡಾ ದೇವಸ್ಥಾನ ಇರಿಸಿಕೊಂಡಿಲ್ಲ. ದೇವಾಲಯದ ಸಾಕಷ್ಟು ಭೂಮಿ ಅತಿಕ್ರಮಣವಾಗಿದ್ದು, ಆಸ್ತಿ ನೋಂದಣಿಯೂ ಸರಿಯಾಗಿ ಇಟ್ಟಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯವರು ನೀಡಿರುವ ಕಾನೂನು ಬಾಹಿರ ದೇಣಿಗೆಗಳು, ಒಂದೇ ವರ್ಷಕ್ಕೆ ಪಾವತಿಸಿದ 1.45 ಲಕ್ಷದಷ್ಟು ಟೆಲಿಫೋನ್ ಬಿಲ್ ಮೊತ್ತ, 2005-18 ರವರೆಗೆ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ 53 ಲಕ್ಷ ರೂ.ಮೌಲ್ಯದ ಸಮವಸ್ತ್ರ, ದೇವಸ್ಥಾನದ ವಿಶ್ರಾಂತಿ ಗೃಹಕ್ಕೆ ಬೇಕಾದ ಬಕೆಟ್, ಡಸ್ಟ್ ಬಿನ್ ಖರೀದಿಗೆ 2.35 ಲಕ್ಷ ರೂ. ಬಳಸಿದ್ದು, ಹೀಗೆ ಪ್ರತಿಯೊಂದು ಲೆಕ್ಕಾಚಾರವೂ ಸಂಶಯಗಳಿಗೆ ಎಡೆಮಾಡಿದೆ. ಈ ಎಲ್ಲ ಬೆಳವಣಿಗೆಗಳು ಶ್ರದ್ಧಾಳುಗಳು ಕೋಪಕ್ಕೂ ಕಾರಣವಾಗಿದೆ.

ಎರಡು ವರ್ಷಗಳಷ್ಟು ಹಳೆಯ ದಾಖಲೆಗಳ ಆಧಾರದಲ್ಲಿ ಮಹಾಸಂಘವು ಈ ಆರೋಪಗಳನ್ನು ಮಾಡಿದೆ. ಈಗ ಭ್ರಷ್ಟಾಚಾರದ ಪ್ರಮಾಣ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯೂ ಇದೆ. ಹಿಂದೂ ದೇವಾಲಯಗಳನ್ನು ಸರ್ಕಾರದ ಸ್ವಾಮ್ಯದಿಂದ ಬಿಡಿಸಿ ಭಕ್ತರ ವಶಕ್ಕೆ ನೀಡಬೇಕು ಅನ್ನೋದು ಈ ಹೋರಾಟಗಾರರ ಆಗ್ರಹವಾಗಿದೆ.

Last Updated :Mar 10, 2021, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.