ETV Bharat / state

ಸ್ಮಾರ್ಟ್​ ಸಿಟಿ-ಮಹಾನಗರ ಪಾಲಿಕೆಯ ವೈಶಮ್ಯಕ್ಕೆ ತುಮಕೂರು ಜನತೆ ಬಲಿ!

author img

By

Published : Nov 21, 2019, 9:13 PM IST

ತುಮಕೂರು ನಗರದ ಜನರ ಗೋಳು

ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್​ ಸಿಟಿ ಅಧಿಕಾರಿಗಳ ಒಳ ವೈಶಮ್ಯದಿಂದಾಗಿ ನಗರದ ಜನತೆ ರಸ್ತೆಯಲ್ಲಿ ಸಂಚಾರ ಮಾಡಲಾರದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತುಮಕೂರು: ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ನಡುವೆ ಹೊಂದಾಣಿಕೆ ಕೊರತೆಯಿಂದ ಕಾಮಗಾರಿಗಳು ಕುಂಟುತ್ತಾ ಸಾಗಿದ್ದು, ನಗರದ ಬಾರ್ ಲೈನ್ ರಸ್ತೆಯಲ್ಲಿ ರಸ್ತೆ ಕಾಮಗಾರಿಯಿಂದಾಗಿ ಸಂಚಾರವೇ ಸ್ಥಗಿತಗೊಂಡಿದೆ.

ತುಮಕೂರು ನಗರದ ಜನರ ಗೋಳು

ಈ ಮೊದಲು ಮೊದಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಪೈಪ್ ಲೈನ್ ಅಳವಡಿಸಲು ರಸ್ತೆ ಅಗಿದಿದ್ದರು, ತದನಂತರ ಮಹಾನಗರಪಾಲಿಕೆ ಅದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಳವಡಿಸಿದ್ದ ಪೈಪ್​​ಲೈನ್​​ಗಳೆಲ್ಲಾ ಸಂಪೂರ್ಣವಾಗಿ ಹಾಳಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಭಾಗದ ಜನರ ದಿನನಿತ್ಯದ ಸಂಚಾರವೇ ಸ್ಥಗಿತಗೊಂಡಿದೆ.

ಈ ಕುರಿತು ಸಾರ್ವಜನಿಕರು, ಅಧಿಕಾರಿಗಳನ್ನ ಪ್ರಶ್ನಿಸಿದರೆ ನಮಗೆ ಸಂಬಂಧವೇ ಇಲ್ಲದಂತೆ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತಿದೆ. ಆದರೆ ಇಲ್ಲಿ ಇಬ್ಬರ ಜಗಳದಿಂದಾಗಿ ಮೂರನೆಯವನಿಗೆ ನಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.

Intro:ತುಮಕೂರು: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬ ಮಾತು ಜನಜನಿತವಾಗಿದೆ, ಆದರೆ ಇಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಹೇಳುವುದಾದರೆ ಎರಡು ಸಂಸ್ಥೆಗಳ ಜಗಳ ನಗರದ ಜನರಿಗೆ ಪರದಾಟ ಎಂಬ ಪರಿಸ್ಥಿತಿ ತುಮಕೂರು ನಗರದಲ್ಲಿ ಕಾಣಬಹುದಾಗಿದೆ.


Body:ಹೌದು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ನಡುವೆ ಹೊಂದಾಣಿಕೆ ಕೊರತೆಯಿಂದಲೋ ಏನೋ ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಕುಂಟುತ್ತಾ ಸಾಗಿವೆ, ಜೊತೆಗೆ ಜನರು ನಿತ್ಯ ಪರದಾಡುವಂತಾಗಿದೆ. ೧೬ನೇ ವಾರ್ಡ್ನ ಈ ರಸ್ತೆಯಲ್ಲಿ ಕಾಮಗಾರಿಗಳಿಂದ ಕಳೆದ ಮೂರು ತಿಂಗಳಿನಿಂದಲೂ ಈ ರಸ್ತೆಯಲ್ಲಿ ವಾಹನಗಳು ಓಡಾಡುವುದನ್ನು ನಿಲ್ಲಿಸಿ ಬಿಟ್ಟಿವೆ, ಅಷ್ಟಕ್ಕೂ ಅದು ಯಾವ ರಸ್ತೆ ಅಂತೀರಾ ಅದೇ ಬಾರ್ ಲೈನ್ ರಸ್ತೆ.
ಈ ರಸ್ತೆಯಲ್ಲಿ ಮೊದಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಪೈಪ್ ಲೈನ್ ಅಳವಡಿಸಲು ರಸ್ತೆ ಅಗಿದಿದ್ದರು, ಆಗ ಯಾವುದೇ ಸಮಸ್ಯೆಯಾಗಲಿಲ್ಲ, ಅಳವಡಿಸಿದ ನಂತರ ಮಹಾನಗರಪಾಲಿಕೆ ಅದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿತು. ಈಗಾಗಲೇ ಅಳವಡಿಸಲಾಗಿದ್ದ ಯುಜಿಡಿ ಪೈಪ್ ಲೈನ್ ಅನ್ನು ತೆಗೆದುಹಾಕಿ ಹೊಸದನ್ನು ಹಾಕಲು ಮುಂದಾದ ಮಹಾನಗರ ಪಾಲಿಕೆ ರಸ್ತೆಯನ್ನು ಜೆಸಿಬಿ ಮೂಲಕ ಅಗೆಯತೊಡಗಿತು, ಆಗ ನಿಜವಾದ ಸಮಸ್ಯೆ ಇಲ್ಲಿನ ನಿವಾಸಿಗಳಿಗೆ ಪ್ರಾರಂಭವಾಯಿತು.
ಜೆಸಿಬಿಯಲ್ಲಿ ಅಗೆದಂತೆಲ್ಲ ಅದರ ಪಕ್ಕದಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಸಿಟಿಯ ಪೈಪ್ ಲೈನ್ ಗಳು ಕಿತ್ತು ಬರತೊಡಗಿದವು, ಮಹಾನಗರ ಪಾಲಿಕೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಯುಜಿಡಿ ಕಾಮಗಾರಿ ಮಾಡಿಕೊಂಡು ಮುಂದೊಯಿತು, ಆದರೆ ಸ್ಮಾರ್ಟ್ ಸಿಟಿ ಕಡೆಯಿಂದ ಅಳವಡಿಸಲಾಗಿದ್ದ ಪೈಪ್ ಲೈನ್ ಗಳು ಕಿತ್ತು ಹೋದವು. ಅದನ್ನು ಸರಿಪಡಿಸುವ ಗೋಜಿಗೆ ಹೋಗದ ಅಧಿಕಾರಿಗಳು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಅವರೇ ಮಾಡಿಕೊಳ್ಳಲಿ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಜಾರಿಕೊಂಡರು, ಇತ್ತ ಕಿತ್ತು ಹಾಕಿರುವವರು ಸರಿಪಡಿಸಲೆಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಒತ್ತಾಯಿಸಿದರು ಇವರ ಪ್ರತಿಷ್ಠೆಗೆ ಇಲ್ಲಿನ ನಿವಾಸಿಗಳು ಮಾತ್ರ ನಿತ್ಯ ಪರದಾಡುವಂತಾಗಿದೆ.
ಬೈಟ್: ಶಾಂತಕುಮಾರಿ, ಸ್ಥಳೀಯ ನಿವಾಸಿ.


Conclusion:ಇನ್ನು ಈ ಬಗ್ಗೆ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಏನನ್ನೂ ಹೇಳುತ್ತಿಲ್ಲ. ರಸ್ತೆ ಅಧ್ವಾನದಿಂದ ಜನರು ಪರದಾಡುತ್ತಿದ್ದಾರಲ್ಲಾ ಯಾವಾಗ ಕಾಮಗಾರಿ ಮುಗಿಸುತ್ತೀರಾ ಎಂದು ಜನರು ಕೇಳಿದರೂ ಉತ್ತರಿಸುವವರು ಇಲ್ಲವಾಗಿದ್ದಾರೆ. ಇದರಿಂದ ಬೇಸತ್ತ ಜನರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.


ವರದಿ
ಸುಧಾಕರ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.