ETV Bharat / state

ಅಬ್ಬಾ ಏನ್‌ ಬಿಸಿಲು! ಬ್ಯಾಂಕ್​​ ಮುಂದೆ ಸಾಮಾಜಿಕ ಅಂತರದಲ್ಲಿ ಚಪ್ಪಲಿ ಇರಿಸಿದ ರೈತರು

author img

By

Published : May 27, 2021, 1:18 PM IST

Tumakur
ತುಮಕೂರು

ಬಿಸಿಲ ಬೇಗೆಯಲ್ಲಿ ಬ್ಯಾಂಕ್​​ ಮುಂದೆ ಕ್ಯೂನಲ್ಲಿ ನಿಲ್ಲಲು ಸಾಧ್ಯವಾಗದೇ ರೈತರು ಬ್ಯಾಗ್​, ಚಪ್ಪಲಿಗಳನ್ನು ತಮ್ಮ ಸ್ಥಳದಲ್ಲಿ ಇರಿಸಿರುವ ದೃಶ್ಯ ತುಮಕೂರಿನಲ್ಲಿ ಕಂಡು ಬಂದಿದೆ.

ತುಮಕೂರು: ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯಡಿ ಹಣ ಪಡೆಯಲು ರೈತ ಫಲಾನುಭವಿಗಳು ಬೆಳಗ್ಗೆಯಿಂದಲೂ ಡಿಸಿಸಿ ಬ್ಯಾಂಕ್​​ ಮುಂದೆ ಸಾಲುಗಟ್ಟಿ ನಿಲ್ಲಲು ಸಾಧ್ಯವಾಗದೇ ಚಪ್ಪಲಿಗಳನ್ನು ಇರಿಸಿ ಬೇರೆಡೆ ಕುಳಿತು ಕಾಯುತ್ತಿರುವ ಘಟನೆ ತುರುವೇಕೆರೆ ತಾಲೂಕಿನಲ್ಲಿ ಸಾಮಾನ್ಯವಾಗಿದೆ.

ಕ್ಯೂನಲ್ಲಿ ನಿಲ್ಲಲು ಸಾಧ್ಯವಾಗದೇ ಚಪ್ಪಲಿ ಇರಿಸಿದ ರೈತರು..

ಬೆಳಿಗ್ಗೆ 6 ಗಂಟೆಗೆ ಬ್ಯಾಂಕುಗಳಿಗೆ ಬರುವ ರೈತರು ಸುಮಾರು 8 ಗಂಟೆ ವೇಳೆಗೆ ಬಿಸಿಲೇರುತ್ತಿದ್ದಂತೆ ಸರತಿ ಸಾಲಲ್ಲಿ ನಿಲ್ಲಲು ಸಾಧ್ಯವಾಗದೇ ಬ್ಯಾಗ್​, ಚಪ್ಪಲಿಗಳನ್ನು ತಮ್ಮ ಸ್ಥಳದಲ್ಲಿರಿಸುತ್ತಾರೆ. ಬ್ಯಾಂಕ್‌ನಲ್ಲಿ ಎರಡು ಕೌಂಟರ್​​ಗಳನ್ನು ತೆರೆದರೂ ಸಾಕಷ್ಟು ಸಂಖ್ಯೆಯ ರೈತರು ಇರುವುದರಿಂದ ಬೇಗ ಹಣ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಕೊರೊನಾ ಸೋಂಕು ಪ್ರಸರಣ ಭೀತಿ ನಡುವೆಯೂ ರೈತರು 2 ಸಾವಿರ ರೂ. ಹಣ ಪಡೆಯಲು ಮುಂಜಾನೆಯೇ ಬ್ಯಾಂಕ್​​ ಮುಂದೆ ಜಮಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: ಆಟೋ, ಕ್ಯಾಬ್ ಚಾಲಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಹಣ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.