ETV Bharat / state

ವಾಮಮಾರ್ಗದಲ್ಲಿ ಬಂದ ಬಿಜೆಪಿ ಸರಕಾರಕ್ಕೆ ಭವಿಷ್ಯವಿಲ್ಲ: ಡಿಕೆಶಿ

author img

By

Published : Mar 7, 2021, 1:37 PM IST

Updated : Mar 7, 2021, 2:30 PM IST

KPCC president D K Sivakumar slams BJP government
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ

ಅಧಿಕಾರವನ್ನು ನಿಮ್ಮ ಕೈಗೆ ಕಾಂಗ್ರೆಸ್ ಕೊಟ್ಟಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ದೇಶಕ್ಕೆ ಮಾದರಿಯಾಗಿ ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ತುಮಕೂರು: ವಾಮಮಾರ್ಗದಲ್ಲಿ ಬಂದ ಬಿಜೆಪಿ ಸರಕಾರಕ್ಕೆ ಭವಿಷ್ಯವಿಲ್ಲ. ಜನರ ಆಶೀರ್ವಾದವಿಲ್ಲ. ಶಾಸಕರಿಗೆ ಅವಮಾನ ಮಾಡುವ ವ್ಯವಸ್ಥೆಯನ್ನು ಬಿಜೆಪಿ ಶಾಸಕರು ತಂದಿಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಧುಗಿರಿಯಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂಧನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದಲ್ಲಿ ಎನ್‌ಡಿಎ ಸರಕಾರ ಬಂದ ನಂತರ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿಲ್ಲ. ದೇಶದಲ್ಲಿ ತೈಲ ಬೆಲೆ ಜಾಸ್ತಿಯಾಗಿದೆ. ಎಲ್ಲಾ ಪದಾರ್ಥಗಳು ಜೀವನಕ್ಕೆ ತೊಂದರೆಯಾಗುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯಬೇಕೆಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ

ಇದನ್ನೂ ಓದಿ: 'ಟೆಕ್ನಾಲಜಿ ತುಂಬಾ ಬೆಳೆದಿದೆ, ಜಾರಕಿಹೊಳಿ ವಿಷಯದಲ್ಲಿ ಏನೇನು‌ ಮಾಡಿದ್ದಾರೆ ಗೊತ್ತಿಲ್ಲ'

ಮುಂಬರುವ ದಿನಗಳಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿಯವರು ಗೆಲ್ಲುವುದಕ್ಕೆ ಬದಲಾಗಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಅಧಿಕಾರವನ್ನು ನಿಮ್ಮ ಕೈಗೆ ಕಾಂಗ್ರೆಸ್ ಕೊಟ್ಟಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ದೇಶಕ್ಕೆ ಮಾದರಿಯಾಗಿ ಕೆಲಸ ಮಾಡಿ.

ಕಾಂಗ್ರೆಸ್ ಕೊಟ್ಟಿರೋ ಯೋಜನೆಗಳನ್ನು ಅನುಷ್ಠಾನಗೊಳಿಸಿ. 100 ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಪ್ರವಾಸ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸ್ವಾತಂತ್ರ್ಯ ಬಂದ ಮೇಲೆ ಇಷ್ಟು ಜನ ರೈತರು ಸತ್ತಿರಲಿಲ್ಲ. ಪ್ರಧಾನಿಗೆ ರೈತರ ಸಮಸ್ಯೆಯನ್ನು ಕೇಳುವ ವ್ಯವಧಾನ ಇಲ್ಲದಂತಾಗಿದೆ. ಅನ್ನದಾತನ ಪರವಾಗಿ ಧ್ವನಿ ಎತ್ತಬೇಕು ಎಂದು ಗುಡುಗಿದರು.

Last Updated :Mar 7, 2021, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.