ETV Bharat / state

ರಾಜ್ಯ ಸರ್ಕಾರದ ಒಳಮೀಸಲಾತಿ ಚುನಾವಣೆ ಗಿಮಿಕ್: ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್

author img

By

Published : Mar 25, 2023, 11:06 PM IST

ಕೊನೆಯ ಕ್ಯಾಬಿನೆಟ್​ದಲ್ಲಿ ಮೀಸಲಾತಿ ನಿರ್ಧರಿಸಿರುವ ಉದ್ದೇಶವೇನು. ಒಳಮೀಸಲಾತಿ ಇಂಪ್ಲಿಮೆಂಟ್ ಆಗದಿರಲಿ ಅಂತ. ಮಾಡಿದಂಗೂ ಇರಬೇಕು, ಆಗದಂಗೂ ಇರಬೇಕು. ಅಂತಹ ತೀರ್ಮಾನ ಬಿಜೆಪಿ ಸರ್ಕಾರ ಕೈಗೊಂಡಿದೆ ಎಂದು ಪರಮೇಶ್ವರ್ ತಿಳಿಸಿದರು.

Former DCM Dr G Parameshwar
ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್

ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್

ತುಮಕೂರು: ರಾಜ್ಯ ಸರ್ಕಾರದಿಂದ ಒಳಮೀಸಲಾತಿ ಹೆಚ್ಚಳ ವಿಚಾರವನ್ನು ನಾನು ಸ್ವಾಗತಿಸಿದ್ರೂ ಕೂಡ ಇದು ಚುನಾವಣಾ ಗಿಮಿಕ್ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ. ಕೊರಟಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಬೇಡಿಕೆ ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ, ಈಗಿನ ಸರ್ಕಾರದ ಆರಂಭದಲ್ಲೂ‌ ಇತ್ತು. ಒಳಮೀಸಲಾತಿ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ ಎಂದು ತಿಳಿಸಿದರು.

ಆದರೆ ನಾಲ್ಕು ವರ್ಷ ತೆಗೆದುಕೊಳ್ಳದ ತೀರ್ಮಾನ ಕೊನೆ ಕ್ಯಾಬಿನೆಟ್​​​ನಲ್ಲಿ ತೆಗೆದುಕೊಳ್ಳುವುದರ ಉದ್ದೇಶವೇನು. ಅಂದರೆ ಇದು ಇಂಪ್ಲಿಮೆಂಟ್ ಆಗದೇ ಇರಲಿ ಅಂತಾನಾ ಎಂದು ಪ್ರಶ್ನಿಸಿದ ಅವರು, ಮಾಡಿದಂಗೂ ಇರಬೇಕು, ಆಗದಂಗೂ ಇರಬೇಕು. ಅಂತಹ ತೀರ್ಮಾನವನ್ನು ಈ ಸರ್ಕಾರ ತೆಗೆದುಕೊಂಡಿದೆ ಎಂದು ಆರೋಪಿಸಿದರು.

ಇದು ಚುನಾವಣಾ ಗಿಮಿಕ್ ಅಲ್ಲದೇ ಬೇರೆ ಏನು‌ ಇಲ್ಲ. ಇದನ್ನು ಕಾನೂನಾತ್ಮಕವಾಗಿ ನೋಡೋದಾದ್ರೇ. ಒಳಮೀಸಲಾತಿಯನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ತಾರೆ ಗೊತ್ತಿಲ್ಲಾ. ಅದು ಮುಂದೆ ಬರೋ ದಿನಗಳಲ್ಲಿ ತೀರ್ಮಾನ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಷೇತ್ರ ಬಿಡುವ ಉಹಾಪೋಹಗಳಿಗೆ ತೆರೆ: ನಾನು ಕೊರಟಗೆರೆ ಕ್ಷೇತ್ರವನ್ನು ತೊರೆಯುತ್ತೇನೆ ಎಂಬ ಊಹಾಪೋಹಗಳಿಗೆ ಕಾಂಗ್ರೆಸ್ ಘೋಷಿತ ಪಟ್ಟಿ ಉತ್ತರಿಸಿದೆ. ಹೈಕಮಾಂಡ್​​ನಿಂದ ಬಿಡುಗಡೆಗೊಂಡಿರುವ 124 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ನನ್ನ ಹೆಸರನ್ನು ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನಾನು ಕೊರಟಗೆರೆ ಬಿಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವೆನೆಂಬ ಊಹಾಪೋಹಗಳಿಗೆ ಸಂಪೂರ್ಣ ತೆರೆ ಬಿದ್ದಿದೆ. ನಾನು ಕೋರಟಗೆರೆ ವಿಧಾನಸಭಾ ಕ್ಷೇತ್ರವನ್ನು ತೊರೆದು ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ಸುದ್ದಿಗಳಿಗೆ ಕಡಿವಾಣ ಬಿದ್ದಿದೆ ಎಂದು ಹೇಳಿದರು.

ನಾನು ಕೂಡ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ಇರುವುದರಿಂದ ಇನ್ನುಳಿದ ನೂರು ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಆದಷ್ಟು ಬೇಗ ಹೈಕಮಾಂಡ್ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು. ಬಿಡುಗಡೆಗೊಂಡಿರುವ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದ್ದಂತೆ, ಎರಡನೇ ಪಟ್ಟಿಯಲ್ಲಿಯೂ ಇದೇ ರೀತಿ ಇರಲಿದೆ. ಮೊದಲ ಪಟ್ಟಿಯನ್ನು ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಆಕಾಂಕ್ಷಿತರು ನಿರಾಶೆ ಪಡುವ ಅಗತ್ಯವಿಲ್ಲ: ಇನ್ನು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ನಂತರ ಕೆಲ ಟಿಕೆಟ್ ಆಕಾಂಕ್ಷಿತರಿಗೆ ನಿರಾಶೆ ಆಗಿರಬಹುದು. ಅಲ್ಲದೇ ಕಾಂಗ್ರೆಸ್ ಟಿಕೆಟ್​ಗಾಗಿ 2 ಲಕ್ಷ ರೂ ಹಣವನ್ನು ಆಧರಿಸಿ ಅರ್ಜಿ ಸಲ್ಲಿಸಿದ್ದ ಟಿಕೆಟ್ ಆಕಾಂಕ್ಷಿತರು ನಿರಾಶೆ ಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ಅವರಿಗೆ ಸೂಕ್ತ ಸ್ಥಾನಮಾನವನ್ನು ಪಕ್ಷವು ನೀಡಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿರುವ ಅಧಿಕೃತ ಅಭ್ಯರ್ಥಿಗಳ ಪರವಾಗಿ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಶ್ರಮಿಸಬೇಕೆಂದು ತಿಳಿಸಿದರು.

ಇದನ್ನೂಓದಿ:ನಾಳೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ಅಭ್ಯರ್ಥಿಗಳ ಆಯ್ಕೆ ಕುರಿತು ಅಮಿತ್ ಶಾ ಮಹತ್ವದ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.