ETV Bharat / state

ಕಾಂಗ್ರೆಸ್‌ನ ಜನಜಾಗೃತಿ ಸಮಾವೇಶದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ.. ಅದೇನ್‌ ಅಂದ್ರೇ..

author img

By

Published : Nov 21, 2021, 7:04 PM IST

congress programme in tumkur
ಕಾಂಗ್ರೆಸ್ ಜನಜಾಗೃತಿ ಸಮಾವೇಶ

ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ವೇದಿಕೆ ಮೇಲೆ ಯಾವುದೇ ಕಾಂಗ್ರೆಸ್ ನಾಯಕರಿಗೂ ಕುಳಿತುಕೊಳ್ಳಲು ಅವಕಾಶ ನೀಡಿರಲಿಲ್ಲ. ವೇದಿಕೆಯ ಕೆಳಭಾಗದಲ್ಲಿ ಕೂರಲು ಆಸನದ ವ್ಯವಸ್ಥೆ ಮಾಡಲಾಗಿತ್ತು..

ತುಮಕೂರು : ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ ನೂತನವಾದ ವೇದಿಕೆ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಗಿದೆ.

ಕಾಂಗ್ರೆಸ್ ಜನಜಾಗೃತಿ ಸಮಾವೇಶ..

ಸಮಾವೇಶದ ಸಮಾರಂಭದಲ್ಲಿ ವೇದಿಕೆ ಮೇಲೆ ಯಾರೊಬ್ಬ ಕಾಂಗ್ರೆಸ್ ನಾಯಕರಿಗೂ ಕುಳಿತುಕೊಳ್ಳಲು ಅವಕಾಶ ನೀಡಿರಲಿಲ್ಲ. ರಾಜ್ಯ ಮಟ್ಟದ ಎಲ್ಲಾ ಮುಖಂಡರಿಗೆ ವೇದಿಕೆಯ ಕೆಳಭಾಗದಲ್ಲಿ ಕೂರಲು ಆಸನದ ವ್ಯವಸ್ಥೆ ಮಾಡಲಾಗಿತ್ತು.

ವೇದಿಕೆ ಮೇಲೆ ಸರಕಾರದ ನೀತಿಗಳನ್ನು ವಿರೋಧಿಸುವ ಸ್ವರೂಪವನ್ನು ಪ್ರದರ್ಶಿಸಲಾಯಿತು. ಮಧ್ಯಭಾಗವನ್ನು ಪೋಡಿಯಂ ಬಳಿ ಬಂದು ನಾಯಕರು ಭಾಷಣ ಮಾಡಲು ಮಾತ್ರ ಸೀಮಿತಗೊಳಿಸಲಾಗಿತ್ತು.

ಅಲ್ಲದೆ ಕಾರ್ಯಕ್ರಮ ಅಂತಿಮ ಹಂತದವರೆಗೂ ಸರಕಾರ ನೀತಿಗಳನ್ನು ಯೋಜನೆಗಳನ್ನು ವಿರೋಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಮುಖ್ಯವಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ರೈತರ ಹೋರಾಟಕ್ಕೆ ದೊರೆತ ಜಯವನ್ನು ಹಸಿರು ಶಾಲು ಹಾಕಿಕೊಂಡಿದ್ದ ರೈತರು ಬ್ಯಾನರ್ ಹಿಡಿದು ಪ್ರದರ್ಶಿಸಿದ್ರು.

ಇನ್ನೊಂದೆಡೆ ಅಡುಗೆ ಅನಿಲ ಬೆಲೆ ಏರಿಕೆ ಕುರಿತು ಪೋಸ್ಟರ್​ಗಳನ್ನು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯ ಎರಡೂ ಬದಿಯಲ್ಲಿ ಸಮಾರಂಭದ ಅಂತಿಮ ಹಂತದವರೆಗೂ ಪ್ರದರ್ಶಿಸಿದ್ರು.

ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟನೆ ಮಾಡುವ ವೇಳೆ ಮಾತ್ರ ಎಲ್ಲಾ ಕಾಂಗ್ರೆಸ್ ಮುಖಂಡರು ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡರು. ಆ ನಂತರ ಎಲ್ಲರೂ ವಾಪಸ್ ಕೆಳಗೆ ಬಂದು ಕುಳಿತುಕೊಂಡರು.

ವೇದಿಕೆಯ ಕೆಳಗಭಾಗದಲ್ಲಿ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಾ ಜಿ. ಪರಮೇಶ್ವರ್ ಅವರುಗಳು ವೇದಿಕೆ ಮೇಲೆ ಬಂದು ತಮ್ಮ ಭಾಷಣ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.