ETV Bharat / state

ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ: ಹೆಚ್​ಡಿಕೆ

author img

By

Published : Mar 9, 2023, 3:40 PM IST

ಮಾಜಿ ಮುಖ್ಯಮಂತ್ರಿ ಹೆಚ್​ ಡಿ  ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಬದಲಾವಣೆ ಬೇಕೆಂಬುದು ಜನಾಭಿಪ್ರಾಯ ಎಂಬುದು ನನ್ನ ಅಭಿಪ್ರಾಯ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಮಾತನಾಡಿದರು

ತುಮಕೂರು : ಮೂಡಬಿದರೆ ವಿಧನಾಸಭಾ ಕ್ಷೇತ್ರದ ಆಕಾಂಕ್ಷಿ, ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಅವರು ನಿನ್ನೆ (ಬುಧವಾರ) ಉಡುಪಿ ಶ್ರೀ ಕೃಷ್ಣಮಠದ ಜಾಗವನ್ನ ಮುಸ್ಲಿಂ ದೊರೆ ನೀಡಿದ್ದು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಿಪಟೂರು ತಾಲೂಕಿನ ಹೊನ್ನವಳ್ಳಿಯ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ನಂತರ ಈ ಕುರಿತಂತೆ ಮಾತನಾಡಿದ ಅವರು, ಧರ್ಮದ ಹೆಸರನ್ನ ಹೇಳಿಕೊಂಡು, ಜಾತಿಯ ಹೆಸರನ್ನ ಹೇಳಿಕೊಂಡು, ಇವರಿಗೆ ಜನರ ಕಷ್ಟದ ಬಗ್ಗೆ ಅರಿವಿದ್ಯೋ, ಇಲ್ವೋ ಗೊತ್ತಿಲ್ಲ. ಜನರಿಗೆ ಏನು ಬೇಕಿದೆ, ಅವರ ನಿರೀಕ್ಷೆ ಏನಿದೆ, ಅದನ್ನ ಬಿಟ್ಟು ಉಳಿದಿದ್ದನ್ನೆಲ್ಲ ಮಾತನಾಡ್ತಾರೆ ಎಂದು ಟೀಕಿಸಿದರು. ಇಲ್ಲಿ ಸಾರ್ವಜನಿಕವಾಗಿ ಸಂಘರ್ಷವನ್ನುಂಟು ಮಾಡಿ ಮತ ಪಡೆಯಲು ಹೊರಟಿದ್ದಾರೆ. ಈ ಬಾರಿ ಎರಡೂ ಪಕ್ಷಗಳ ನಡವಳಿಕೆಯನ್ನೇ ಗಮನಿಸಿ, ಎರಡೂ ಪಕ್ಷಗಳ ಸಹವಾಸ ಬೇಡ ಅಂತಾ ಜನ ಡಿಸೈಡ್ ಮಾಡಿದ್ದಾರೆ ಎಂದರು.

ಹೊಸ ಬದಲಾವಣೆ ಬೇಕೆಂಬುದು ಜನಾಭಿಪ್ರಾಯ-ಹೆಚ್​ಡಿಕೆ: ತಿಪಟೂರಿನ ಹಲವಾರು ಗ್ರಾಮಗಳಿಗೆ ಭೇಟಿ ಕೊಡುವಂತಹ ಪಂಚರತ್ನ ರಥಯಾತ್ರೆಗೆ ಇಲ್ಲೂ ಕೂಡಾ ಅಭೂತಪೂರ್ವವಾದ ಸ್ಪಂದನೆ ದೊರಕಿದೆ. ರಾಜ್ಯದಲ್ಲಿ ಹೊಸ ಬದಲಾವಣೆ ಬೇಕೆಂಬುದು ಜನಾಭಿಪ್ರಾಯ ಎಂಬುದು ನನ್ನ ಅಭಿಪ್ರಾಯ. ಈಗಾಗಲೇ ನಾನು ರಾಜ್ಯದ 78 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಈ ಭಾಗ ಆ ಭಾಗ ಅಂತಿಲ್ಲ. ರಾಜ್ಯದ ಬಹುತೇಕ ಎಲ್ಲ ಜನರ ಅಭಿಪ್ರಾಯವೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡುವುದೇ ಆಗಿದೆ ಎಂದು ಹೇಳಿದರು. ಆದ್ದರಿಂದ ಈ ಬಾರಿ ಜನತಾದಳದ ಪರವಾದ ಒಂದು ಅಲೆ ಪ್ರಾರಂಭವಾಗಿದೆ ಎಂದರು.

ಜಿಲ್ಲೆಯ ಉಳಿದ ಕ್ಷೇತ್ರಗಳನ್ನು ಹೋಲಿಸಿದರೆ ತಿಪಟೂರು ಕ್ಷೇತ್ರದ ಪಂಚರತ್ನ ಯಾತ್ರೆ ಸ್ವಲ್ಪ ಡಲ್​ ಆಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ಯಾರು ಹೇಳಿದ್ದು, ಎಲ್ಲ ಕಡೆಗಿಂತ ಇಲ್ಲೇ ಪಂಚರತ್ನ ರಥಯಾತ್ರೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಣೆಯಾಗಿದೆ. ಎಲ್ಲ ಕಡೆಯೂ ಅಂದರೆ ಕೊರಟಗೆರೆ, ಮುಧುಗಿರಿ, ಪಾವಗಿರಿಯಲ್ಲಿ ರಾತ್ರಿ 2 ಗಂಟೆ ಮೂರು ಗಂಟೆವರೆಗೆ ಸಭೆ ನಡೆದಿದೆ. ಜನ ಕಾಯುತ್ತಿದ್ದಾರೆ, ತುಮಕೂರು ಜಿಲ್ಲೆಯಲ್ಲಿ ಈ ಬಾರಿ 11 ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಜನತಾದಳ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದಾರಿ ತಪ್ಪಿ ಜನತಾ ದಳದ ಬಸ್ ಹತ್ತಿದ್ರು : ನಾರಾಯಣಗೌಡ ಬಿಜೆಪಿ ತೊರೆಯಲಿದ್ದಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವ್ರೇಲ್ಲೋ ಒಂದು ಬಸ್ ಹತ್ಕೊಂಡ್ರು. ದಾರಿ ತಪ್ಪಿ ಜನತಾ ದಳದ ಬಸ್ ಹತ್ತಿದ್ರು. ನಂತರ ದಾರಿ ತಪ್ಪಿ ಇಳಿದು ಹೋಗಿದ್ದಾರೆ. ನಾವು ಹಾಗೆ ಕಳಿಸಿ ಬಿಟ್ಟಿದ್ದೀವಿ. ಮತ್ತೆ ನಮ್ಮ ಬಸ್ ಹತ್ತಿಸ್ಕೊಳ್ಳೋ ಪ್ರಶ್ನೆಯೇ ಇಲ್ಲ ಎಂದರು.

ಅವರ ಸಹವಾಸ ಬೇಡ, ದೊಡ್ಡವ್ರು ಅವ್ರೆಲ್ಲ. ದೇವೇಗೌಡರಿಗೆ ಚಾಲೆಂಜ್ ಹಾಕಿದವರು ಅವ್ರು. ದೇವೇಗೌಡರೇ ಬಂದು ನಮ್ಮ ವಿರುದ್ಧ ನಿಲ್ಲಲಿ ಅಂತಾ ಹೇಳಿದ್ದಾರೆ ಎಂದರು. ಹಾಗಾಗಿ ಅವ್ರ ಬಗ್ಗೆ ಮಾತನಾಡೋಕಾಗುತ್ತಾ? ನಾವೆಲ್ಲ ಸಣ್ಣವರು ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್​ ನಾಯಕರ ವಿರುದ್ಧ ಸಿ ಟಿ ರವಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.