ETV Bharat / state

ಶಿವಮೊಗ್ಗದಲ್ಲಿ ಕಲ್ಲು ತೂರಾಟ: ಐಜಿಪಿ ತ್ಯಾಗರಾಜನ್​​ ಭೇಟಿ, ಪರಿಸ್ಥಿತಿ ಶಾಂತ

author img

By ETV Bharat Karnataka Team

Published : Oct 2, 2023, 7:12 AM IST

Updated : Oct 2, 2023, 3:47 PM IST

Stone pelting during procession  Stone pelting during procession in Shivamogga  IGP Thiagarajan visits  situation control  ಮೆರವಣಿಗೆಯ ವೇಳೆ ಕಲ್ಲು ತೂರಾಟ  ಐಜಿಪಿ ತ್ಯಾಗರಾಜನ್​​ ಭೇಟಿ ಪರಿಸ್ಥಿತಿ ಶಾಂತ  ಮೆರವಣಿಗೆಯ ವೇಳೆ ಕಲ್ಲು ತೂರಾಟ  ಸದ್ಯದ ಪರಿಸ್ಥಿತಿ ಶಾಂತ  ರಾಗಿಗುಡ್ಡದಲ್ಲಿ 144 ಸೆಕ್ಷನ್​ ಜಾರಿ  ಆರೋಪಿಗಳು ವಶಕ್ಕೆ  ಐಜಿಪಿ ತ್ಯಾಗರಾಜನ್ ಭೇಟಿ  ಸ್ಥಳಕ್ಕೆ ಶಾಸಕ ಭೇಟಿ  ಘಟನೆ ಬಗ್ಗೆ ಎಸ್​ಪಿ ಹೇಳಿದ್ದು ಹೀಗೆ
ಐಜಿಪಿ ತ್ಯಾಗರಾಜನ್​​ ಭೇಟಿ, ಪರಿಸ್ಥಿತಿ ಶಾಂತ

ಶಿವಮೊಗ್ಗದಲ್ಲಿ ಕಲ್ಲು ತೂರಾಟ ನಡೆದಿರುವ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಐಜಿಪಿ ತ್ಯಾಗರಾಜನ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಸ್​ಪಿ ಮತ್ತು ಶಾಸಕರ ಹೇಳಿಕೆ

ಶಿವಮೊಗ್ಗ: ಭಾನುವಾರ ಸಂಜೆ ನಗರದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದ ಘಟನೆ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಈಗ ಪರಿಸ್ಥಿತಿ ಶಾಂತವಾಗಿದೆ.

ರಾಗಿಗುಡ್ಡದಲ್ಲಿ 144 ಸೆಕ್ಷನ್​ ಜಾರಿ: ಕಲ್ಲು ತೂರಾಟ ಗಲಾಟೆಯಲ್ಲಿ ಐದಾರು ಜನರಿಗೆ ಗಾಯಗಳಾಗಿವೆ. ಎಸ್ಪಿ ಮಿಥುನ್ ಕುಮಾರ್​ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಲ್ಲು ತೂರಾಟ ಹತೋಟಿಗೆ ಬಾರದೇ ಹೋದಾಗ ಪೊಲೀಸರು ರಾಗಿಗುಡ್ಡಕ್ಕೆ ಸೀಮಿತವಾಗಿ 144 ಸೆಕ್ಷನ್ ಜಾರಿಗೊಳಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಮೇಲೆಯೂ ಕಲ್ಲು ತೂರಾಟ: ಗಲಾಟೆ ನಡೆದ ಸ್ಥಳಗಳಿಗೆ ಮಿಥುನ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಕೆಲ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಲಾಗುತ್ತಿತ್ತು. ಪೊಲೀಸರು ಹೋಗುತ್ತಿದ್ದಂತಯೇ ಅವರ ಮೇಲೆಯೂ ಕಲ್ಲು ಬೀಸಿದರು. ಇದರಿಂದ ಪೊಲೀಸರು ಅಲ್ಲಿಂದ ವಾಪಸ್ ಆಗಬೇಕಾಯಿತು. ಆದರೆ, ಹೆಚ್ಚುವರಿ ಪೊಲೀಸ್​ ಬಲಗಳೊಂದಿಗೆ ಉದ್ವಿಗ್ನ ಪರಿಸ್ಥಿತಿ ತಲೆದೊರಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ವಶಕ್ಕೆ: ಗಲಾಟೆಗೆ ಕಾರಣ ಯಾರು ಎಂಬುದನ್ನು ಗುರುತಿಸಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಅಷ್ಟೋತ್ತಿಗಾಗಲೇ ಸುಮಾರು 7 ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ ಆಟೋ, ಕಾರು, ಬೈಕ್​ಗಳಿಗೂ ಹಾನಿಯಾಗಿವೆ.

ಐಜಿಪಿ ತ್ಯಾಗರಾಜನ್ ಭೇಟಿ: ಸ್ಥಳಕ್ಕೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಭೇಟಿ ನೀಡಿದ್ದಾರೆ. ಅಲ್ಲದೇ ಆರ್​ಎಎಫ್ ತಂಡ ಸಹ ಸ್ಥಳದಲ್ಲಿ ಮೊಕ್ಕಾಂ ಹೊಡಿದೆ. ಈ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಗಾಜನ್ನು ಒಡೆದು ಕಾರನ್ನು ಜಖಂ ಮಾಡಿದ್ದಕ್ಕೆ ಅದರ ಮಾಲೀಕರು ಆಕ್ರೋಶ ಹೊರ ಹಾಕಿದರು.

ಸ್ಥಳಕ್ಕೆ ಶಾಸಕ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪನವರು, ರಾಗಿಗುಡ್ಡದಲ್ಲಿ ಕಳೆದ ಕೆಲ ದಿನಗಳಿಂದ ರಾಜ್ಯವೊಂದರ ಕಾರುಗಳು ಓಡಾಡುತ್ತಿದ್ದವು. ಇದರ ಬಗ್ಗೆ ಪೊಲೀಸರು ಗಮನ ಹರಿಸಬೇಕು. ಇಂದು ನಡೆದ ಘಟನೆಯು ಪೂರ್ವ ನಿಯೋಜಿತ ಎಂದು ಕಾಣುತ್ತದೆ. ಈ ಭಾಗದ ಯಾರು ಧೈರ್ಯಗೆಡುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ನಾವಿದ್ದೆವೆ ಎಂದು ಧೈರ್ಯ ತುಂಬಿದರು. ಈ ವೇಳೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ, ಪಾಲಿಕೆ ಸದಸ್ಯರಾದ ಪ್ರಭಾಕರ್ ಸೇರಿ ಇತರರಿದ್ದರು.

ಘಟನೆ ಬಗ್ಗೆ ಎಸ್​ಪಿ ಹೇಳಿದ್ದಿಷ್ಟು : ಘಟನೆ ಕುರಿತು ಮಾತನಾಡಿದ ಎಸ್ಪಿ ಮಿಥುನ್ ಕುಮಾರ್​ ಅವರು, ಮೆರವಣಿಗೆಯ ವೇಳೆ ದರ್ಷ್ಕಮಿಗಳು ಕಲ್ಲುತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂತರ ಸಣ್ಣ ಪ್ರಮಾಣದ ಘರ್ಷಣೆ ಉಂಟಾಗಿದೆ. ಮಾಹಿತಿ ಬಂದಾಕ್ಷಣ ನಮ್ಮ ಪೊಲೀಸ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಾನು ಎರಡು ಗುಂಪುಗಳ ಜೊತೆ ಮಾತನಾಡಿದ್ದೇನೆ. ಆದರೆ, ಮೆರವಣಿಗೆ ವೇಳೆ ಕೆಲ ಯುವಕರ ಗುಂಪು ದಾಂಧಲೆ ನಡೆಸಿದೆ. ನಂತರ ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು . ಘಟನೆಯಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದ್ದರ ಕುರಿತು ದೂರ ನೀಡಲು ತಿಳಸಲಾಗಿದೆ. ಘಟನೆಯಲ್ಲಿ ನಮ್ಮ ಕೆಲ ಸಿಬ್ಬಂದಿಗೂ ಗಾಯಗಳಾಗಿವೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ವಿಡಿಯೋ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಓದಿ: ಶಿವಮೊಗ್ಗದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ

Last Updated :Oct 2, 2023, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.