ETV Bharat / state

ಶಿವಮೊಗ್ಗ: ಪಥಸಂಚಲನದಲ್ಲಿ ಪೊಲೀಸರೂಂದಿಗೆ ಹೆಜ್ಜೆ ಹಾಕಿದ 5 ವರ್ಷದ ಬಾಲಕ

author img

By

Published : Apr 25, 2023, 3:38 PM IST

Updated : Apr 25, 2023, 8:08 PM IST

shivamogga-4-year-old-boy-who-walked-in-police-parade
ಶಿವಮೊಗ್ಗ: ಪಥಸಂಚಲದಲ್ಲಿ ಪೊಲೀಸರೂಂದಿಗೆ ಹೆಜ್ಜೆ ಹಾಕಿದ 4 ವರ್ಷದ ಪುಟ್ಟ ಬಾಲಕ

ಸಮರ್ಥ ಗೌಡ ಎಂಬ ಪುಟ್ಟ ಬಾಲಕ ಇಂದು ಪುರಲೆ ಬಡಾವಣೆಯಲ್ಲಿ ಪೊಲೀಸರ​​ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ.

ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಪ್ರತಿ ವಾರ್ಡ್​ನಲ್ಲೂ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಯುತ್ತಿದೆ. ಅದೇ ರೀತಿ ಇಂದು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಪೊಲೀಸರ ಪಥ ಸಂಚಲನದಲ್ಲಿ ಪುಟ್ಟ ಬಾಲಕನೊಬ್ಬ ಪೊಲೀಸರೊಂದಿಗೆ ಹೆಜ್ಜೆ ಹಾಕಿದ್ದಾನೆ. ಶಿವಮೊಗ್ಗದ ಪುರಲೆ ಬಡಾವಣೆಯಲ್ಲಿ ನಡೆದ ಪಥ ಸಂಚಲನದಲ್ಲಿ 5 ವರ್ಷದ ಬಾಲಕ ಸಮರ್ಥ ಗೌಡ ಪೊಲೀಸರ ಜೊತೆ ಪಥಸಂಚಲನದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾನೆ.

ಪುಟ್ಟ ಬಾಲಕನ ತಂದೆ ಶಿವಮೊಗ್ಗ ಗ್ರಾಮಂತರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಬಾಲಕನು ತನ್ನ ತಂದೆಯಂತೆ ಪೊಲೀಸ್ ಇಲಾಖೆಯ ಮೇಲೆ ಅಪಾರ ಗೌರವವನ್ನು ಹೊಂದಿದ್ದಾನೆ. ಸಮರ್ಥ ಗೌಡ ತನ್ನ ತಂದೆಯಂತೆಯೇ ಪೊಲೀಸ್ ಇಲಾಖೆ ಸೇರಬೇಕೆಂಬ ಬಯಕೆಯನ್ನು ಹೊಂದಿದ್ದಾನೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರತಿದಿನ ಪೊಲೀಸರು ನಡೆಸುವ ಪಥ ಸಂಚಲನವನ್ನು ಕಲ್ಲನಗೌಡ ಎಂಬುವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡು ಹೋಗುತ್ತಿದ್ದರು. ಇದರಿಂದ ಸ್ಫೂರ್ತಿ ಪಡೆದ ಬಾಲಕ ಸಮರ್ಥ ಗೌಡ ಇಂದು ಖಾಕಿ ಡ್ರೆಸ್​​​ ಧರಿಸಿ ಪೊಲೀಸರೊಂದಿಗೆ ಪಥ‌ಸಂಚಲನದಲ್ಲಿ ಭಾಗಿಯಾಗಿದ್ದಾನೆ.

ಇಂದು ಪೊಲೀಸರು ಕೇಂದ್ರ ಮೀಸಲು ಪಡೆಯ ಸಹಯೋಗದೊಂದಿಗೆ ಪಥ ಸಂಚಲನ ನಡೆಸಿದ್ದಾರೆ. ಪುರಲೆ ಬಡಾವಣೆಯ ಹತ್ತಕ್ಕೂ ಹೆಚ್ಚು ತಿರುವುಗಳಲ್ಲಿ ಪಥ ಸಂಚಲನ‌ ನಡೆಸಿದ್ದಾರೆ. ಇವರೂಂದಿಗೆ ಸಮರ್ಥ ಗೌಡ ಸ್ವಲ್ಪವು ಸುಸ್ತಾಗದೆ ಪಥಸಂಚಲನದಲ್ಲಿ ಭಾಗಿಯಾಗಿದ್ದಾನೆ. ಬಾಲಕನು ಸಂಪೂರ್ಣವಾಗಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದು, ಆತನ ಕುಟುಂಬದವರಿಗೆ ಹಾಗೂ ಪೊಲೀಸರಿಗೆ ಅಚ್ಚರಿಯನ್ನು ತಂದಿದೆ.

ಇದನ್ನೂ ಓದಿ: ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಯಾಚಿಸಬೇಕು: ಬಿಎಸ್ ವೈ

ದಾಖಲೆ ಇಲ್ಲದ‌ 3 ಕೋಟಿ ರೂ ವಶ: ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೆಕ್‌ಪೊಸ್ಟ್​​​ನಲ್ಲಿ ದಾಖಲೆ ಇಲ್ಲದ ಸಾಗುಸುತ್ತಿದ್ದ 3,07,50,000 ಕೋಟಿ ರೂ. ಹಣ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಣವು ಎಟಿಎಂಗೆ ಸಾಗಿಸುವ ವಾಹನದಲ್ಲಿ ಪತ್ತೆಯಾಗಿದ್ದು, ಯಾವ ಕಡೆಯಿಂದ ಯಾವ ಎಟಿಎಂಗೆ ತೆರಳುತ್ತಿತ್ತು ಎಂಬ ಮಾಹಿತಿಯ ದಾಖಲೆ ಇಲ್ಲದ ಕಾರಣ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಸೂಕ್ತ ದಾಖಲೆ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 5.40 ಲಕ್ಷ ರೂ. ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್‌ಪೊಸ್ಟ್​​​ನಲ್ಲಿ ದಾಖಲೆ ಇಲ್ಲದ ಸಾಗುಸುತ್ತಿದ್ದ 3 ಕೋಟಿ ರೂ ವಶಕ್ಕೆ
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್‌ಪೊಸ್ಟ್​​​ನಲ್ಲಿ ದಾಖಲೆ ಇಲ್ಲದ ಸಾಗುಸುತ್ತಿದ್ದ 3 ಕೋಟಿ ರೂ ವಶಕ್ಕೆ

ಶಿಕಾರಿಪುರದಲ್ಲಿ ದಾಖಲೆ ಇಲ್ಲದ 98 ಲಕ್ಷ ರೂ. ವಶಕ್ಕೆ: ಶಿಕಾರಿಪುರ ಟೌನ್ ಚೆಕ್​​ಪೋಸ್ಟ್​​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 98 ಲಕ್ಷ ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ 59 ಲಕ್ಷ ರೂ. ಮೌಲ್ಯದ ಅಕ್ರಮ ಸೀರೆಯನ್ನು ವಶಕ್ಕೆ ಪಡೆಯಲಾಗಿದೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಲಿಂಗಾಯತರ ಮತ ಸೆಳೆಯಲು ಬಿಎಸ್​​ವೈ ಪ್ಲಾನ್​​: ವೀರಶೈವ ಸಮಾಜದ ಸ್ನೇಹಮಿಲನ

Last Updated :Apr 25, 2023, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.