ETV Bharat / state

ಕಾರ್ಯನಿರ್ವಹಿಸದ ಘನ ತ್ಯಾಜ್ಯ ಘಟಕ: ಶಿವಮೊಗ್ಗ ಪಾಲಿಕೆ ವಿರುದ್ಧ ಆಕ್ರೋಶ

author img

By

Published : Sep 10, 2019, 11:44 PM IST

ಕಾಣಿಕೆಯಾಗಿ ಕೊಟ್ಟ ಘನ ತ್ಯಾಜ್ಯ ಘಟಕ ಸರಿಯಾಗಿ ನಿರ್ವಹಿಸದ ಶಿವಮೊಗ್ಗ ಪಾಲಿಕೆ: ಸ್ಥಳೀಯರಿಂದ ಆಕ್ರೋಶ

ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು 2015 ರಲ್ಲಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘವು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತ್ತು. ಇದನ್ನು ಪಾಲಿಕೆ ಸರಿಯಾಗಿ ನಿರ್ವಹಿಸಿಲ್ಲ. ಪರಿಣಾಮವಾಗಿ ಕೇವಲ ನಾಲ್ಕು ವರ್ಷದಲ್ಲಿ ಘಟಕ ಮೂಲೆ ಸೇರುವಂತಾಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ.

ಶಿವಮೊಗ್ಗ: ನಗರದ ಸ್ವಚ್ಚತೆ ಕಾಪಾಡುವ ಉದ್ದೇಶದಿಂದ ಸ್ಥಾಪಿಸಿದ್ದ 27 ಲಕ್ಷ ರೂ. ವೆಚ್ಚದ ಘನ ತ್ಯಾಜ್ಯ ವಸ್ತು ನಿರ್ವಹಣಾ ಘಟಕವನ್ನು ಮಹಾನಗರ ಪಾಲಿಕೆ ಸರಿಯಾಗಿ ನಿರ್ವಹಿಸಿಲ್ಲ. ಇದರಿಂದ ಅದು ಗುಜರಿ ಸೇರುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾಣಿಕೆಯಾಗಿ ಕೊಟ್ಟ ಘನ ತ್ಯಾಜ್ಯ ಘಟಕ

ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು 2015 ರಲ್ಲಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘವು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತ್ತು. ಇದನ್ನು ಪಾಲಿಕೆ ಸರಿಯಾಗಿ ನಿರ್ವಹಿಸಿಲ್ಲ. ಪರಿಣಾಮವಾಗಿ ಕೇವಲ ನಾಲ್ಕು ವರ್ಷದಲ್ಲಿ ಘಟಕ ಮೂಲೆ ಸೇರುವಂತಾಗಿದೆ ಅನ್ನೋದು ಸ್ಥಳೀಯರ ಆರೋಪ.

2015ರಲ್ಲಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷರಾಗಿದ್ದ ಡಿ.ಎಸ್.ಅರುಣ್ ಅವರು ಕಸ ವಿಲೇವಾರಿ ಸಮಸ್ಯೆಯನ್ನು ಮನಗಂಡು, ಇದಕ್ಕೆ ನಮ್ಮ ಸಂಘದಿಂದ ಏನಾದರೂ ಪರಿಹಾರ ಕಂಡು ಕೊಳ್ಳಬೇಕೆಂದಿದ್ದರು.
ಬೆಂಗಳೂರಿನ ವಾರ್ಡ್​ಗಳಲ್ಲಿ ಕಸ ವಿಲೇವಾರಿಗೆ ಹಾಕಿದ್ದ ಘಟಕವನ್ನು ಅದೇ ರೀತಿಯ ಘಟಕವನ್ನು ಮಹಾನಗರ ಪಾಲಿಕೆಗೆ ಕಾಣಿಕೆ ನೀಡಲು ಮುಂದಾಗಿ, ಸುಮಾರು 27 ಲಕ್ಷ ರೂ ಹಣ ಸಂಗ್ರಹಣೆ ಮಾಡಿ ಇದನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿದ್ದರು.

ಘನ ತ್ಯಾಜ್ಯವಸ್ತು ವಿಲೇವಾರಿ ಘಟಕದ ಕಾರ್ಯನಿರ್ವಹಣೆ:

ಇದು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಘಟಕ. ಹೆಚ್ಚು ವಿದ್ಯುತ್ ಪಡೆಯುವುದಿಲ್ಲ. ಇದು ಪೈರಾಲಿಸಿಸ್ ಸಿಸ್ಟಂನಲ್ಲಿ ನಡೆಯುತ್ತದೆ. ಪವರ್ ಇಲ್ಲದೆ ಮ್ಯಾಗ್ನಟಿಕ್ ವ್ಹೀಲ್​ನಲ್ಲಿ ನಡೆಯುತ್ತದೆ. ಪ್ಲಾಸ್ಟಿಕ್ ಹಾಗೂ ಇತರೆ ವಸ್ತುಗಳನ್ನು ಸುಟ್ಟು ಹಾಕುತ್ತದೆ. ಇದರಿಂದ ಹೆಚ್ಚು ಹೊಗೆ ಹೊರ ಸೂಸದಂತೆ ಸ್ಕಬ್ಬರ್ ಯೂನಿಟ್​ನ್ನು ಅಳವಡಿಸಲಾಗಿದೆ. ಈ ಯಂತ್ರ ಚಲಿಸಲು ಕೇವಲ 2 ಕಿಲೋ ವ್ಯಾಟ್ ವಿದ್ಯುತ್ ಸಾಕು. ಅಷ್ಟು ಕಡಿಮೆ ವಿದ್ಯುತ್​ನಲ್ಲಿ ಇದು ರನ್ ಆಗುತ್ತದೆ. ಇಲ್ಲಿ ಕಸ ಪೈರಾಲಿಸಿಸ್ ಸಿಸ್ಟಂನಲ್ಲಿ ಬರ್ನ್ ಮಾಡಿದ ನಂತ್ರ ಒಂದು ರೀತಿಯ ಪುಡಿ ಬರುತ್ತದೆ. ಇದನ್ನು ಸೆರಾಮಿಕ್ ಟೆಲ್ಸ್ ಗೆ ಹಾಕಬಹುದಾಗಿದೆ. ಅಲ್ಲದೆ ಈ ಯಂತ್ರದಲ್ಲಿ ಪ್ಲಾಸ್ಟಿಕ್ ಹಾಕಿದ್ದರಿಂದ ಲಿಕ್ಟಿಟ್ ರೀತಿಯ ಗ್ರೀಸ್ ಹೊರ ಬರುತ್ತದೆ. ಇದನ್ನು ಟಾರ್​ಗೆ ಬಳಸಬಹುದಾಗಿದೆ. ಇದನ್ನು ವಾಣಿಜ್ಯ ಹಾಗೂ ಕೈಗಾರಿಕ ಸಂಘ ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿ ಪಾಲಿಕೆಗೆ ನೀಡಿತ್ತು.

ಪಾಲಿಕೆಯ ನಿರ್ಲಕ್ಷ್ಯ:

ದಾನಕ್ಕೆ ನೀಡಿದ ಘಟಕವನ್ನು ಪಾಲಿಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಘಟಕಕ್ಕೆ ಪ್ರತಿ ತಿಂಗಳು 700 ರಿಂದ 800 ರೂ. ಮಾತ್ರ ವಿದ್ಯುತ್ ಬಿಲ್ ಬರುತ್ತದೆ. ಇದನ್ನು ಕಳೆದ ಐದಾರು ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟದೆ ಹಾಗೆಯೇ ಬಿಟ್ಟಿದ್ದಾರೆ. ಈ ಘಟಕ ಪ್ರತಿ ದಿನ 3-4 ಟನ್ ಕಸವನ್ನು ಬರ್ನ್ ಮಾಡುತ್ತದೆ. ಆದ್ರೆ, ಪಾಲಿಕೆಯ ಸಿಬ್ಬಂದಿ 6 ಟನ್ ತನಕ ಹಾಕುತ್ತಿದ್ದಾರೆ. ಅಲ್ಲದೆ ಸರಿಯಾದ ನಿರ್ವಹಣೆ ಇಲ್ಲದೆ ಹೆಚ್ಚು ಹೊಗೆ ಹೊರ ಸೂಸುವಂತೆ ಮಾಡಿದ್ದು ಸ್ಥಳೀಯರು ಆಕ್ರೋಶ ಕಾರಣವಾಗಿದೆ.

Intro:ಅದು ನಗರದ ಸ್ವಚ್ಚತೆ ಕಾಪಾಡಲು ಹಾಗೂ ಮಹಾನಗರ ಪಾಲಿಕೆಯ ಶ್ರಮ ಕಡಿಮೆ ಮಾಡಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ 27 ಲಕ್ಷ ರೂ ವೆಚ್ಚದ ಘನ ತ್ಯಾಜ್ಯವಸ್ತು ನಿರ್ವಹಣಾ ಘಟಕವನ್ನು ಮಹಾನಗರ ಪಾಲಿಕೆಗೆ ನೀಡಲಾಗಿತ್ತು. ಮಹಾನಗರ ಪಾಲಿಕೆಯ ಸರಿಯಾದ ನಿರ್ವಹಣೆ ಇಲ್ಲದೆ ಗುಜರಿ ಸೇರುವಂತೆ ಆಗಿದೆ. ಇದು ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕ. ಇದನ್ನು 2015 ರಲ್ಲಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ ಮಹಾ ನಗರ ಪಾಲಿಕೆಗೆ ಹಸ್ತಾಂತರ ಮಾಡಿತ್ತು. ಇದನ್ನು ಪಾಲಿಕೆ ಸರಿಯಾಗಿ ನಿರ್ವಹಿಸದೆ ಕೇವಲ ನಾಲ್ಕು ವರ್ಷದಲ್ಲಿ ಮೂಲೆ ಸೇರುವಂತೆ ಮಾಡಿದ್ದಾರೆ.


Body:ಮಹಾನಗರ ಪಾಲಿಕೆ ಅಧಿಕಾರಿಗಳ ದಿವ್ಯನಿರ್ಲಕ್ಷ್ತ ದಿಂದ ವಿಲೇವಾರಿ ಘಟಕ ಗುಜರಿ ಸೇರುವಂತೆ ಆಗಿದೆ. 2015 ರಲ್ಲಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಘದ ಅಧ್ಯಕ್ಷರಾಗಿದ್ದ ಡಿ.ಎಸ್.ಅರುಣ್ ರವರು ಶಿವಮೊಗ್ಗ ಮಹಾನಗರ ಪಾಲಿಕೆಯಾದ ನಂತ್ರ ಕಸ ವಿಲೇವಾರಿ ಆಗುವ ಸಮಸ್ಯೆಯನ್ನು ಮನಗಂಡು ಇದಕ್ಕೆ ನಮ್ಮ ಸಂಘದಿಂದ ಏನಾದರೂ ಪರಿಹಾರ ಕಂಡು ಕೊಳ್ಳಬೇಕು ಎಂದು ಯೋಚಿಸಿ ಬೆಂಗಳೂರಿನಲ್ಲಿ ವಾರ್ಡ್ ಗಳಲ್ಲಿ ಕಸ ವಿಲೇವಾರಿಗೆ ಹಾಕಿದ್ದ ಘಟಕವನ್ನು ನೋಡಿ ಕೊಂಡಿ ಬಂದಿದ್ದರು. ಇದನ್ನು ನಮ್ಮ ಶಿವಮೊಗ್ಗದಲ್ಲಿ ಹಾಕಿದ್ರೆ ಶಿವಮೊಗ್ಗದ ಕಸ ವಿಲೇವಾರಿಯ ಸಮಸ್ಯೆ ಪರಿಹಾರಕ್ಕೆ ತಮ್ಮ ಅಲ್ಪ ಕಾಣಿಕೆ ನೀಡುತ್ತದೆ ಆಗುತ್ತದೆ ಎಂದು ತಿಳಿದು ತಮ್ಮ ಸಂಘ ಸೇರಿದಂತೆ ಇತರೆ ಸಂಸ್ಥೆಗಳಿಂದ ಸುಮಾರು 27 ಲಕ್ಷ ರೂ ಹಣ ಸಂಗ್ರಹಣೆ ಮಾಡಿ ಇದನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿದರು. ಕಸ ನಿರ್ವಹಣೆ ಸಮಸ್ಯೆ ಎದುರಿಸುತ್ತಿದ್ದ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದರೆ ಅವರಿಗೆ ಸಹಾಯಕವಾಗುತ್ತದೆ ಎಂದು ತೀರ್ಮಾನಿಸಿ, ಮಹಾನಗರ ಪಾಲಿಕೆಗೆ 2015 ರಲ್ಲಿಯೇ ಹಸ್ತಾಂತರ ಮಾಡಿದರು. ವಾಣಿಜ್ಯ ಹಾಗೂ ಕೈಗಾರಿಕಾ ಸಂಘದಿಂದ ದಾನವಾಗಿ ಪಡೆದ ಮಹಾನಗರ ಪಾಲಿಕೆ ಈಗ ಅದನ್ನು ಸರಿಯಾಗಿ ನಿರ್ವಹಿಸದೆ ಘಟಕವನ್ನೆ ಕಸಕ್ಕೆ ಹಾಕುವಂತೆ ಮಾಡಿದೆ.




Conclusion:ಘನ ತ್ಯಾಜ್ಯವಸ್ತು ವಿಲೇವಾರಿ ಘಟಕದ ಕಾರ್ಯನಿರ್ವಹಣೆ-

ಇದು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಘಟಕ ಹೆಚ್ಚು ವಿದ್ಯುತ್ ಪಡೆಯುವುದಿಲ್ಲ. ಇದು ಪೈರಾಲಿಸಿಸ್ ಸಿಸ್ಟಂನಲ್ಲಿ ನಡೆಯುತ್ತದೆ.ಇದಕ್ಕೆ ಪವರ್ ಇಲ್ಲದೆ ಮ್ಯಾಗ್ನಟಿಕ್ ವೀಲ್ ನಲ್ಲಿ ನಡೆಯುತ್ತದೆ. ಇದು ಪ್ಲಾಸ್ಟಿಕ್ ಹಾಗೂ ಇತರೆ ವಸ್ತುಗಳನ್ನು ಬರ್ನ್ ಮಾಡುತ್ತದೆ. ಇದರಿಂದ ಹೆಚ್ಚು ಹೊಗೆ ಹೊರ ಸೂಸದಂತೆ ಸ್ಕಬ್ಬರ್ ಯೂನಿಟ್ ನ್ನು ಅಳವಡಿಸಲಾಗಿದೆ. ಈ ಯಂತ್ರ ಚಲಿಸಲು ಕೇವಲ ಎರಡು ಕಿ.ಲೋ ವ್ಯಾಟ್ ವಿದ್ಯುತ್ ಸಾಕು. ಅಷ್ಟು ಕಡಿಮೆ ವಿದ್ಯುತ್ ನಲ್ಲಿ ಇದು ರನ್ ಆಗುತ್ತದೆ. ಇಲ್ಲಿ ಕಸ ಪೈರಾಲಿಸಿಸ್ ಸಿಸ್ಟಂನಲ್ಲಿ ಬರ್ನ್ ಮಾಡಿದ ನಂತ್ರ ಒಂದು ರೀತಿಯ ಪುಡಿ ಬರುತ್ತದೆ. ಇದನ್ನು ಸೆರಾಮಿಕ್ ಟೆಲ್ಸ್ ಗೆ ಹಾಕಬಹುದಾಗಿದೆ. ಅಲ್ಲದೆ ಈ ಯಂತ್ರದಲ್ಲಿ ಪ್ಲಾಸ್ಟಿಕ್ ಹಾಕಿದದ್ದರಿಂದ ಲಿಕ್ಟಿಟ್ ರೀತಿಯ ಗ್ರೀಸ್ ಹೊರ ಬರುತ್ತದೆ. ಇದನ್ನು ಟಾರ್ ಗೆ ಬಳಸಬಹುದಾಗಿದೆ. ಇದನ್ನು ವಾಣಿಜ್ಯ ಹಾಗೂ ಕೈಗಾರಿಕ ಸಂಘ ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿ ಪಾಲಿಕೆಗೆ ನೀಡಿತ್ತು.

ಪಾಲಿಕೆಯ ನಿರ್ಲಕ್ದ್ಯ- ದಾನಕ್ಕೆ ನೀಡಿದ ಘಟಕವನ್ನು ಪಾಲಿಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.ಘಟಕಕ್ಕೆ ಪ್ರತಿ ತಿಂಗಳು 700 ರಿಂದ 800 ರೂ ಮಾತ್ರ ವಿದ್ಯುತ್ ಬಿಲ್ ಬರುತ್ತದೆ. ಇದನ್ನು ಕಳೆದ ಐದಾರು ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟದೆ ಹಾಗೆ ಬಿಟ್ಟಿದ್ದಾರೆ. ಈ ಘಟಕ ಪ್ರತಿ ದಿನ 3-4 ಟನ್ ಕಸವನ್ನು ಬರ್ನ್ ಮಾಡುತ್ತದೆ. ಆದ್ರೆ, ಪಾಲಿಕೆಯ ಸಿಬ್ಬಂದಿಯವರು 6 ಟನ್ ತನಕ ಹಾಕುತ್ತಿದ್ದಾರೆ. ಅಲ್ಲದೆ ಸರಿಯಾದ ನಿರ್ವಹಣೆ ಇಲ್ಲದೆ ಹೆಚ್ಚು ಹೊಗೆ ಹೊರ ಸೂಸುವಂತೆ ಮಾಡಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ. ಈಗಾಲಾದರೂ ಪಾಲಿಕೆ ಎಚ್ಚೆತ್ತು ಕೊಳ್ಳಬೇಕಿದೆ. ಪಾಲಿಕೆ ಸರಿಯಾಗಿ ನಿರ್ವವಣೆ ಮಾಡಿದ್ರೆ, ನಮ್ಮ ಸಂಘ ಇನ್ನೂ ಹೆಚ್ಚು ಘಟಕ ನೀಡಲು ತಯಾರ್ ಎನ್ನುತ್ತಾರೆ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೆಶಕ ಡಿ.ಎಸ್.ಅರುಣ್ ಕುಮಾರ್ ರವರು.

ಬೈಟ್: ಡಿ.ಎಸ್.ಅರುಣ್ ಕುಮಾರ್. ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರು. ವಾಣಿಜ್ಯ‌ ಮತ್ತು ಕೈಗಾರಿಕ ಸಂಘ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.