ETV Bharat / state

ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಸೀಲ್​ಡೌನ್

author img

By

Published : Jul 23, 2020, 5:06 PM IST

Shimoga
ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸೀಲ್​ಡೌನ್

ಶಿವಮೊಗ್ಗದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳನ್ನು ಸೀಲ್​ಡೌನ್ ಮಾಡಲಾಗಿದೆ.

ಶಿವಮೊಗ್ಗ: ಮಹಾನಗರ ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಪಾಲಿಕೆಯನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ.

Shimoga
ಕಚೇರಿಗಳಿಗೂ ಸಹ ಸ್ಯಾನಿಟೈಸರ್

ಸದ್ಯ ಪಾಲಿಕೆಯ ಎಲ್ಲ ವಿಭಾಗದ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಮೇಯರ್, ಉಪಮೇಯರ್ ಹಾಗೂ ಆಯುಕ್ತರ ಕಚೇರಿಗಳಿಗೆ ಸ್ಯಾ‌ನಿಟೈಸರ್ ಸಿಂಪಡಣೆ ಮಾಡಲಾಯಿತು. ಇದರಿಂದ ಪಾಲಿಕೆಯಲ್ಲಿ ಇಂದು ಕೆಲಸ ಬಂದ್ ಆಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸೀಲ್​ಡೌನ್

ಅದೇ ರೀತಿ ಜಿಲ್ಲಾ ಪಂಚಾಯತ್​ನ ಎಫ್​ಡಿಎ ಒಬ್ಬರಿಗೂ ಸೋಂಕು ಕಂಡು ಬಂದ ಕಾರಣ ಜಿಲ್ಲಾ ಪಂಚಾಯತ್​ನ ಎಲ್ಲಾ ವಿಭಾಗಗಳನ್ನು ಸೀಲ್​ಡೌನ್ ಮಾಡಲಾಗಿದೆ. ಇದರಿಂದಾಗಿ ಜಿಲ್ಲಾ‌ ಪಂಚಾಯತ್​ನ ಎಲ್ಲಾ ವಿಭಾಗಗಳನ್ನು ಸಹ ಬಂದ್ ಮಾಡಲಾಗಿದೆ. ಜಿಲ್ಲಾ‌ ಪಂಚಾಯತ್ ನಿನ್ನೆ ಮಧ್ಯಾಹ್ನದಿಂದ ಬಂದ್ ಮಾಡಲಾಗಿದೆ. ಇಂದು ಸಹ ಸೀಲ್​ಡೌನ್​ನಲ್ಲಿ ‌ಇರಲಿದ್ದು, ನಾಳೆ ಕಚೇರಿಗಳು ಕಾರ್ಯಾರಂಭ ಮಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.