ETV Bharat / state

ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರೀಯಗೊಂಡಿದೆ: ವಿಪಕ್ಷ ನಾಯಕರ ಆರೋಪ

author img

By

Published : Dec 6, 2019, 8:55 PM IST

Opposition leader accused against Shimoga Municipality
ಶಿವಮೊಗ್ಗ ಪಾಲಿಕೆ ಆಡಳಿತ ವಿಪಕ್ಷ ನಾಯಕರ ಆಕ್ರೋಶ

ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ಬಂದು ಒಂದು ವರ್ಷ ಕಳೆದರೂ ನಗರದ ಅಭಿವೃದ್ಧಿ ಶೂನ್ಯವಾಗಿದೆ. ವಾರ್ಡ್ ಸದಸ್ಯರ ನಾಮಫಲಕ ಬದಲಾವಣೆ ಆಗದೆ ಇರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ವಿಪಕ್ಷ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.

ಶಿವಮೊಗ್ಗ: ಬಿಜೆಪಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯಗೊಂಡಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.

ಶಿವಮೊಗ್ಗ ಪಾಲಿಕೆ ಆಡಳಿತ ವಿರುದ್ಧ ವಿಪಕ್ಷ ನಾಯಕರ ಆಕ್ರೋಶ

ಈ ಬಗ್ಗೆ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ಬಂದು ಒಂದು ವರ್ಷ ಕಳೆದರೂ ನಗರದ ಅಭಿವೃದ್ಧಿ ಶೂನ್ಯವಾಗಿದೆ. ವಾರ್ಡ್ ಸದಸ್ಯರ ನಾಮಫಲಕ ಬದಲಾವಣೆ ಆಗದೆ ಇರುವುದೇ ಇದಕ್ಕೆ ಉತ್ತಮ ಉದಾಹರಣೆ. ಪಾಲಿಕೆಗೆ ಸಂಬಂಧಿಸಿದ ಎಲ್ಲಾ ಪ್ರಗತಿ ಪರಿಶೀಲನಾ ಸಭೆಗಳು, ಚರ್ಚೆಗಳು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದೆ. ನೆಪಮಾತ್ರಕ್ಕೆ ಪಾಲಿಕೆ ಆಡಳಿತ ಇದೆ. ಸರ್ಕಾರದಿಂದ ಬಂದಿರುವ ಅನುದಾನ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಆಡಳಿತ ಅಸಮರ್ಥವಾಗಿದೆ. 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಹಣ ಕೂಡ ಸದ್ಬಳಕೆಯಾಗಿಲ್ಲ. ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ 30 ಜನ ಇಂಜಿನಿಯರ್​ಗಳು ಕೆಲಸ ಮಾಡುತ್ತಿದ್ದಾರೆ, ಆದರೂ ನಗರದ ರಸ್ತೆ ಗುಂಡಿಗಳು ಮುಚ್ಚಲು ಸಾಧ್ಯವಾಗಿಲ್ಲ ಎಂದು ಕುಟುಕಿದರು.

ಸ್ವಚ್ಛತಾ ಯೋಜನೆಯಡಿ 22 ಕೋಟಿ ರೂ. ಹಣ ಬಂದಿದ್ದು, ಈ ಹಣದಲ್ಲಿ ಕಸ ಸಂಗ್ರಹಣೆ ವಾಹನಗಳು, ಮನೆ ಮನೆಗೆ ಕೊಡುವ ಸುಮಾರು 1.68 ಲಕ್ಷದ ಕಸದ ಡಬ್ಬಿಗಳು ,3 ಟಿಪ್ಪರ್ ಗಳು, ಮೂರು ಚಕ್ರದ ವಾಹನಗಳು ಸೇರಿದಂತೆ ಕಸ ವಿಲೇವಾರಿ ಮತ್ತು ಸಂಗ್ರಹಣೆಗೆ ಸಾಕಷ್ಟು ಅವಕಾಶವಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಬಂದಿದ್ದು, ಇದುವರೆಗೆ ಸಮರ್ಪಕವಾಗಿ ನಿರ್ವಹಿಸಲು ಆಗಿಲ್ಲ. ಅಷ್ಟೇ ಅಲ್ಲದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಸುಮಾರು 125 ಕೋಟಿ ರೂ. ಬಿಡುಗಡೆಯಾಗಿತ್ತು. ಆ ಹಣವೂ ಬಳಕೆಯಾಗಿಲ್ಲ. ನೀರು ಪೂರೈಕೆ ಕಾಮಗಾರಿ, ಒಳಚರಂಡಿ, ಬಾಕ್ಸ್ ಚರಂಡಿ , ರಸ್ತೆ ರಿಪೇರಿ ಎಲ್ಲಾ ಕೆಲಸಗಳು ಕೂಡ ಮೊಟಕಾಗಿದೆ ಎಂದರು.

Intro:ಶಿವಮೊಗ್ಗ,
ಬಿಜೆಪಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯ ಗೊಂಡಿದೆ ಎಂದು ಮಹಾನಗರ ಪಾಲಿಕೆ ವಿರೋದ ಪಕ್ಷದ ನಾಯಕ ರಮೇಶ್ ಹೆಗ್ಡೆ ಅವರು ಆರೋಪಿಸಿದರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಮಹಾನಗರ ಪಾಲಿಕೆ ಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ಬಂದು ಒಂದು ವರ್ಷಕಳೆದರೂ ನಗರದ ಅಭಿವೃದ್ಧಿ ಸುನ್ಯಾ , ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ವರ್ಷ ಕಳೆದರೂ ಇನ್ನು ವಾರ್ಡ್ ಸದಸ್ಯರ ನಾಮಫಲಕ ಬದಲಾವಣೆ ಆಗದೇ ಇರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಗೆ ಸಂಬಂಧಿಸಿದ ಎಲ್ಲಾ ಪ್ರಗತಿಪರಿಶೀಲನಾ ಸಭೆಗಳು ಚರ್ಚೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಗೊಂಡಿದೆ. ನೆಪಮಾತ್ರಕ್ಕೆ ಪಾಲಿಕೆ ಆಡಳಿತ ಇದೆ ಎಂದು ಆರೋಪಿಸಿದರು.
ಸರ್ಕಾರದಿಂದ ಬಂದಿರುವ ಮತ್ತು ಬರಲಿರುವ ಯಾವುದೇ ಅನುದಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಆಡಳಿತ ಅಸಮರ್ಥವಾಗಿದೆ.
14ನೇ ಹಣಕಾಸು ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಹಣ ಕೂಡ ಸದ್ಬಳಕೆಯಾಗಿಲ್ಲ.
ಸ್ಮಾರ್ಟ್ ಸಿಟಿ ಗೆ ಸಂಬಂಧಿಸಿದಂತೆ 30 ಜನ ಇಂಜಿನಿಯರ್ಗಳು ಕೆಲಸ ಮಾಡುತ್ತಿದ್ದರು ಕೂಡ ನಗರದ ರಸ್ತೆ ಗುಂಡಿಗಳು ಮುಚ್ಚಲು ಆಗಿಲ್ಲ.
ಜನಪರ ಆಡಳಿತ ನೀಡು ತ್ತೇವೆ ಎಂದ ಬಿಜೆಪಿಯವರ ಆಡಳಿತ ಶೂನ್ಯವಾಗಿದೆ ಎಂದು ಕುಟುಕಿದರು.


ಸ್ವಚ್ಛತಾ ಯೋಜನೆ ಅಡಿಯಲ್ಲಿ 22 ಕೋಟಿ ರೂ ಹಣ ಬಂದಿದ್ದು ಈ ಹಣದಲ್ಲಿ ಕಸ ಸಂಗ್ರಹಣೆ ವಾಹನಗಳು, ಮನೆಮನೆಗೆ ಕೊಡುವ ಸುಮಾರು 1 . 68 ಲಕ್ಷ ಕಸದ ಡಬ್ಬಿಗಳು ,3 ಟಿಪ್ಪರ್ ಗಳು ,ಮೂರು ಚಕ್ರದ ವಾಹನಗಳು ಸೇರಿದಂತೆ ಕಸ ವಿಲೇವಾರಿ ಮತ್ತು ಸಂಗ್ರಹಣೆಗೆ ಸಾಕಷ್ಟು ಅವಕಾಶವಿತ್ತು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಬಂದಿದ್ದು ಇದುವರೆಗೆ ಇದನ್ನು ಸಮರ್ಪಕವಾಗಿ ನಿರ್ವಹಿಸಲು ಆಗಿಲ್ಲ.
ಅಷ್ಟೇ ಅಲ್ಲದೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ಸುಮಾರು 125 ಕೋಟಿ ರೂ ಬಿಡುಗಡೆಯಾಗಿತ್ತು. ಈ ಹಣ ಸ್ವಲ್ಪವೂ ಬೆಳಕೆ ಆಗಿಲ್ಲ,
ನೀರು ಪೂರೈಕೆ ಕಾಮಗಾರಿ, ಒಳಚರಂಡಿ,ಬಾಕ್ಸ್ ಚರಂಡಿ ,ರಸ್ತೆ ರಿಪೇರಿ ಎಲ್ಲಾ ಕೆಲಸಗಳು ಕೂಡ ಮೊಟಕಾಗಿದೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ


Body:ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.