ETV Bharat / state

ATM theft attempt: ಶಿವಮೊಗ್ಗ: ಕದ್ದು ತಂದ ಜೆಸಿಬಿ ಮೂಲಕ ಎಟಿಎಂ ಕಳ್ಳತನಕ್ಕೆ ಯತ್ನ!

author img

By

Published : Jul 26, 2023, 9:30 AM IST

crime-attempt-to-theft-atm-by-using-jcb-shivamogga
ಶಿವಮೊಗ್ಗ: ಕದ್ದು ತಂದ ಜೆಸಿಬಿ ಮೂಲಕ ಎಟಿಎಂ ಕಳ್ಳತನಕ್ಕೆ ಯತ್ನ!

Shivamogga Crime: ಖತರ್ನಾಕ್​ ಕಳ್ಳನೋರ್ವ ಎಸಿಬಿ ಮೂಲಕ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ: ಕಬ್ಬಿಣದ ರಾಡ್, ಸುತ್ತಿಗೆ ಹಾಗು ಇತರೆ ಸಾಮಗ್ರಿ ಬಳಸಿ ಎಟಿಎಂ‌ ಒಡೆದು ಹಣ ಕಳ್ಳತನ ಮಾಡಿರುವ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಶಿವಮೊಗ್ಗದಲ್ಲೊಬ್ಬ ಚಾಲಾಕಿ ಕಳ್ಳ ಜೆಸಿಬಿ ಮಷಿನ್‌ ತೆಗೆದುಕೊಂಡು ಬಂದು ಎಟಿಎಂ ಕಳ್ಳತನಕ್ಕೆ ಬಂದಿದ್ದು, ಪೊಲೀಸರು ಬರುತ್ತಿರುವುದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿನೋಬನಗರ ನಗರದಲ್ಲಿನ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

crime-Thief attempt-to-theft-atm-by-using-jcb-shivamogga
ಕಳ್ಳತನಕ್ಕೆ ಬಳಸಿದ ಜೆಸಿಬಿ

ಶಿವಮೊಗ್ಗದ ವಿನೋಬನಗರ ನಗರದ ಮುಖ್ಯರಸ್ತೆಯ ಶಿವಾಲಯದ ಮುಂಭಾಗದ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳ್ಳ ಜೆಸಿಬಿ ಬಳಸಿ ಎಟಿಎಂನ ಮುಂಭಾಗದ ಗಾಜು ಪುಡಿ ಮಾಡಿದ್ದಾನೆ. ಬಳಿಕ ಜೆಸಿಬಿಯ ಮುಂದಿನ ಬಕೆಟ್​ನಿಂದ​ ಎಟಿಎಂ‌ ಮಷಿನ್ ಎತ್ತಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಆದರೆ ಮಷಿನ್ ನೆಲದಿಂದ ಹೊರಕ್ಕೆ ಬಂದಿಲ್ಲ.

ಇದನ್ನೂ ಓದಿ: ಎಟಿಎಂಗೆ ನುಗ್ಗಿದ ಬುಸ್​ ಬುಸ್​ ನಾಗಪ್ಪ.. ಈ ಹಾವಿನಿಂದ ಮಹಿಳೆ ಬಚಾವ್ ಆಗಿದ್ದು ಹೇಗೆ?

ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಕಂಡು ಪರಾರಿ: ಎಟಿಎಂ ಮಷಿನ್ ಕದಿಯುವ ಪ್ರಯತ್ನದಲ್ಲಿ ಇರುವಾಗಲೇ ಗಸ್ತಿನಲ್ಲಿದ್ದ ವಿನೋಬನಗರ ಪೊಲೀಸರನ್ನು‌ ಕಂಡು ಕಳ್ಳ‌ ಕಾಲ್ಕಿತ್ತಿದ್ದಾನೆ. ಪೊಲೀಸರನ್ನು ಕಂಡೊಡನೆ ಜೆಸಿಬಿಯನ್ನು ಎಟಿಎಂ ಬಳಿಯೇ ಬಿಟ್ಟೋಡಿದ್ದಾನೆ. ಸಾಮಾನ್ಯವಾಗಿ ಇಲ್ಲಿನ ಎಟಿಎಂ ಪಕ್ಕದ ಪೆಟ್ರೋಲ್ ಬಂಕ್​ನಲ್ಲಿ ಜೆಸಿಬಿಗಳನ್ನು ನಿಲುಗಡೆ ಮಾಡಲಾಗುತ್ತದೆ. ಚಾಲಾಕಿ‌ ಖದೀಮ ನಿಲ್ಲಿಸಿದ್ದ ಜೆಸಿಬಿಯನ್ನೇ ಕದ್ದು ಚಲಾಯಿಸಿಕೊಂಡು​ ತಂದು ಹಣ ದೋಚಲು‌ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

attempt-to-theft-atm-by-using-jcb
ಜೆಸಿಬಿ ಮೂಲಕ ಎಟಿಎಂ ಕಳ್ಳತನಕ್ಕೆ ಯತ್ನ

ಇದನ್ನೂ ಓದಿ: Watch Video: ಹಣ ಕದಿಯಲು ವಿಫಲ.. ಎಟಿಎಂ ಯಂತ್ರವನ್ನೇ ಎಗರಿಸಿದ ಖದೀಮರು!

ಆದರೆ ಗಸ್ತಿನಲ್ಲಿದ್ದ ಪೊಲೀಸರು ಅದೇ ಸಮಯಕ್ಕೆ ಬಂದಿದ್ದರಿಂದ ದುಷ್ಕೃತ್ಯ ವಿಫಲವಾಗಿದೆ. ಸದ್ಯ ಜೆಸಿಬಿಯನ್ನು ವಿನೋಬನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಬರಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳ ಎಟಿಎಂ ಕೇಂದ್ರದೊಳಗೆ ಹೋಗದ ಕಾರಣ ಆತನ ವಿಡಿಯೋ ಲಭ್ಯವಾಗುವುದು ಕಷ್ಟಕರವಾಗಿದೆ. ಉಳಿದಂತೆ ಅಕ್ಕಪಕ್ಕದ ಸಿಸಿ ಕ್ಯಾಮರಾ ಪರಿಶೀಲಿಸಿ ತನಿಖೆ ಮುಂದುವರೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡಿಪಾಸಿಟ್ ಬಟನ್ ಒತ್ತದ ಕಾರಣ ಮಿಷನ್​ನಲ್ಲೇ ಉಳಿದಿದ್ದ 52 ಸಾವಿರ ರೂ. ದೋಚಿದ ವ್ಯಕ್ತಿ : ಸಿಸಿಟಿವಿ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.