ETV Bharat / state

ದೇಶಕ್ಕೊಂದು ರಾಜ್ಯಕ್ಕೊಂದು ಕಾನೂನು ಮಾಡಲು ಸಾಧ್ಯವೇ: ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಕಿಡಿ

author img

By

Published : Sep 30, 2019, 1:56 PM IST

ಉಪ ಚುನಾವಣೆಯಲ್ಲಿ ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ, ದೇಶಕ್ಕೆ ಒಂದು ಕಾನೂನು, ರಾಜ್ಯಕ್ಕೆ ಒಂದು ಕಾನೂನು ಮಾಡಲು ಸಾಧ್ಯವೇ, ಅವರು ಸೋತ ತಕ್ಷಣ ಈ ರೀತಿಯ ಹೇಳಿಕೆ ನೀಡಬಾರದು. ಇದು ಮಾಜಿ ಸಿಎಂಗೆ ಶೋಭೆ ತರುವಂತದ್ದಲ್ಲ ಎಂದು ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಹೇಳಿಕೆಗೆ ಸಿಎಂ ಕಿಡಿ

ಶಿವಮೊಗ್ಗ: ಬಿಬಿಎಂಪಿ ಸಮಿತಿಗಳ ರಚನೆ ಕುರಿತು ಹೈಕೋರ್ಟ್​ನಲ್ಲಿ​ ಪ್ರಕರಣ ಇರುವುದರಿಂದ ಮೇಯರ್ ಚುನಾವಣೆ ಸಮಿತಿಗಳಿಗೆ ನಡೆಯುವ ಚುನಾವಣೆ ಜೊತೆಯೇ ನಡೆಸಬೇಕು ಎಂಬ ಕಾರಣಕ್ಕೆ ಒಂದೂವರೆ ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಶಿಕಾರಿಪುರದಲ್ಲಿ ಮಾತನಾಡಿದ ಅವರು, ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯನ್ನು ಬಿಬಿಎಂಪಿ ಸಮಿತಿಗಳ ಚುನಾವಣೆ ಜೊತೆಯೇ ನಡೆಸಲಾಗುವುದು ಎಂದ ಅವರು, ಅನರ್ಹ ಶಾಸಕರ ಕುರಿತು ಹೇಳಿಕೆ ನೀಡಿದ್ದ ಉಮೇಶ್​ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವುದೇ ರೀತಿಯ ಹೇಳಿಕೆ ನೀಡಬಾರದೆಂದು ಸೂಚನೆ ನೀಡಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದರು.

ಶಿಕಾರಿಪುರದಲ್ಲಿ ಸಿಎಂ ಸುದ್ದಿಗೋಷ್ಟಿ

ಇನ್ನು ಉಪ ಚುನಾವಣೆಯಲ್ಲಿ ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ, ದೇಶಕ್ಕೆ ಒಂದು ಕಾನೂನು, ರಾಜ್ಯಕ್ಕೆ ಒಂದು ಕಾನೂನು ಮಾಡಲು ಸಾಧ್ಯವೇ, ಅವರು ಸೋತ ತಕ್ಷಣ ಈ ರೀತಿಯ ಹೇಳಿಕೆ ನೀಡಬಾರದು. ಇದು ಮಾಜಿ ಸಿಎಂಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

ನೆರೆ ಪರಿಹಾರ ಇನ್ನು ಮೂರು ನಾಲ್ಕು ದಿನಗಳಲ್ಲಿ ಬರಲಿದೆ. ಅಕ್ಟೊಂಬರ್ 4 ರಿಂದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ ಎಂದ ಅವರು, ಎಲ್ಲ ಸಮಾಜಕ್ಕೂ ಅನುದಾನ ಸರಿಯಾಗಿ ನೀಡಬೇಕು. ಒಂದು ಸಮಾಜಕ್ಕೆ ಕೊಟ್ಟು ಇನ್ನೊಂದು ಸಮಾಜಕ್ಕೆ ಅನುದಾನ ನೀಡದೇ ಇದ್ದರೆ ಬೇಸರ ಆಗುತ್ತದೆ. ಇದರಿಂದ ಎಲ್ಲ ಸಮಾಜವನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಅವಶ್ಯಕತೆ ಇದೆ. ಇದರಿಂದ ಯಾರು ಹೆಚ್ಚಿನ ಅನುದಾನ ಕೇಳಬಾರದು ಇದರಿಂದ ನನ್ನದು ತಂತಿ‌‌ ಮೇಲಿನ ನಡಿಗೆ ಆಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

Intro:ಬಿಬಿಎಂಪಿಯ ಸಮಿತಿಗಳ ರಚನೆ ಕುರಿತು ಹೈ ಕೋರ್ಟ್ ನಲ್ಲಿ ಇರುವುದರಿಂದ ಮೇಯರ್ ಚುನಾವಣೆಯನ್ನು ಸಮಿತಿಗಳ ಜೊತೆ ನಡೆಯಬೇಕು ಎಂಉ ಉದ್ದೇಶದಿಂದ ಮೇಯರ್, ಉಪ ಮೇಯರ್ ಸ್ಥಾನಗಳ ಚುನಾವಣೆಯನ್ನು ಒಂದೂವರೆ ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿಕಾರಿಪುರದಲ್ಲಿ ಮಾತನಾಡಿದ ಅವರು, ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯನ್ನು ಬಿಬಿಎಂಪಿಯ ಸಮಿತಿಗಳ ನಡೆಯಲಿದೆ ಎಂದರು.


Body:ಇನ್ನೂ ಅನರ್ಹ ಶಾಸಕರ ಕುರಿತು ಯಾವುದೇ ರೀತಿಯ ಹೇಳಿಕೆ ನೀಡಬಾರದೆಂದು ಉಮೇಶ್ ಕತ್ತಿರವರಿಗೆ ಕರೆದು ಮಾತನಾಡಿದ್ದೆನೆ, ಅವರು ಒಪ್ಪಿದ್ದಾರೆ ಎಂದರು. ಉಪ ಚುನಾವಣೆಯಲ್ಲಿ ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ, ದೇಶಕ್ಕೆ ಒಂದು ಕಾನೂನು, ರಾಜ್ಯಕ್ಕೆ ಒಂದು ಕಾನೂನು ಮಾಡಲು ಸಾಧ್ಯವೆ, ಅವರು ಸೋತ ತಕ್ಷಣ ಈ ರೀತಿಯ ಹೇಳಿಕೆ ನೀಡಬಾರದು ಇದು ಮಾಜಿ ಸಿಎಂ ರವರಿಗೆ ಶೋಭೆತರುವಂತದ್ದು ಅಲ್ಲ ಎಂದರು.


Conclusion:ನೆರೆ ಪರಿಹಾರ ಇನ್ನೂ ಮೂರು ನಾಲ್ಕು ದಿನಗಳಲ್ಲಿ ಬರಲಿದೆ. ಅಕ್ಟೊಂಬರ್ 4 ರಿಂದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದೆನೆ ಎಂದರು. ಎಲ್ಲಾ ಸಮಾಜಕ್ಕೂ ಅನುದಾನ ಸರಿಯಾಗಿ ನೀಡಬೇಕು. ಒಂದು ಸಮಾಜಕ್ಕೆ ಕೊಟ್ಟು ಇನ್ನೂಂದು ಸಮಾಜಕ್ಕೆ ಅನುದಾನ ನೀಡದೆ ಇದ್ದರೆ ಬೇಸರ ಆಗುತ್ತದೆ. ಇದರಿಂದ ಎಲ್ಲಾ ಸಮಾಜವನ್ನು ಕರೆದು ಕೊಂಡು ಹೋಗುವ ಅವಶ್ಯಕತೆ ಇದೆ. ಇದರಿಂದ ಯಾರು ಹೆಚ್ಚಿನ ಅನುದಾನ ಕೇಳಬಾರದು ಇದರಿಂದ ನನ್ನದು ತಂತಿ‌‌ಮೇಲಿನ ನಡಿಗೆ ಆಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಇನ್ನೂ ಶ್ಯಾಮನೂರು ಶಿವಶಂಕರಪ್ಪನವರು ವೀರಶೈವ ಸಮಾಜದ ಕುರಿತ ತಮ್ಮ ಹೇಳಿಕೆಯನ್ನು ಪುನರ್ ಉಚ್ಚರಿಸಿದ್ದಾರೆ ಎಂದರು. ಅಕ್ಟೋಂಬರ್ 10 ರಿಂದ 13 ರ ತನಕ ಅಧಿವೇಶನ ನಡೆಸಲಾಗುವುದು ಎಂದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಹಾಜರಿದ್ದರು.

ಬೈಟ್: .ಬಿ.ಎಸ್.ಯಡಿಯೂರಪ್ಪ. ಸಿಎಂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.