ETV Bharat / state

ಯತ್ನಾಳ್​​​ಗೆ ಯಾರು ಒತ್ತಡ ಹಾಕಿದ್ದರು, ಹಣ ಕೇಳಿದ್ದರು ಎಂದು ಅವರೇ ಹೇಳಬೇಕು: ಬಿ.ವೈ.ವಿಜಯೇಂದ್ರ

author img

By

Published : May 7, 2022, 3:30 PM IST

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಸುವರ್ಣ ಅವಕಾಶ ಇದೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಯಾವಾಗಲೂ ಗೆದ್ದಿರಲಿಲ್ಲ. ಮತದಾರರು ಅಲ್ಲಿಯೂ ಆರ್ಶೀವಾದ ಮಾಡಿದ್ದಾರೆ. ಇಲ್ಲಿ ಈಗಿನಿಂದಲೇ ಕೆಲಸ‌ ಮಾಡಿದರೆ ಇತಿಹಾಸ ಸೃಷ್ಟಿಸಬಹುದು ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

BJP State Vice President B. Y. Vijayendra
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ಮುಖ್ಯಮಂತ್ರಿ ಹುದ್ದೆಗೆ ಹಣ ಕೇಳಿದ್ದರು ಎಂಬ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಕೇಂದ್ರದ ವರಿಷ್ಠರು, ರಾಜ್ಯದ ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಗಮಿಸಿದ್ದಾರೆ. ಈ ಕುರಿತು ಹಿರಿಯ ನಾಯಕರೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೆಸರನ್ನು ಪ್ರಸ್ತಾಪಸಿದೇ ಅವರು ಹಿರಿಯ ನಾಯಕರಿದ್ದಾರೆ. ಅವರಿಗೆ ಯಾರು ಒತ್ತಡ ಹಾಕಿದ್ದರು ಮತ್ತು ಹಣ ಕೇಳಿದ್ದರು ಎಂಬುವುದನ್ನು ಅವರೇ ಹೇಳಬೇಕು. ಅವರ ಹೇಳಿಕೆಯನ್ನು ಪಕ್ಷದ ಎಲ್ಲರೂ ಗಮಸಿದ್ದಾರೆ. ಪಕ್ಷದ ಹಿರಿಯ ಮುಖಂಡರು, ರಾಜ್ಯಾಧ್ಯಕ್ಷರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಕೊಟ್ಟಿರುವ ಹೇಳಿಕೆ ಬಹಳ ಗಂಭೀರವಾದದ್ದು ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಸರ್ಕಾರದ ವಿರುದ್ದ ಕಾಂಗ್ರೆಸ್​ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಲ್ಲ- ಸಲ್ಲದ ಆರೋಪ ಮಾಡುತ್ತಿದ್ದರು. ಕಮಿಷನ್ ಬಗ್ಗೆಯಾಗಲಿ, ಭ್ರಷ್ಟಾಚಾರದ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿಲ್ಲ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಕೆಳಮಟ್ಟಕ್ಕೆ ಹೋಗಿದೆ. ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಉಳಿಸಿಕೊಳ್ಳಲು ಆಗಿಲ್ಲ. ಇದು ಚುನಾವಣಾ ವರ್ಷ ಅಗಿರುವುದರಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಪಿಎಸ್ಐ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರ ತಿಳಿಸಿದೆ ಎಂದರು.

ನಾನು ಸಂಪುಟ ಸೇರುವ ಚರ್ಚೆ ಆಗಿಲ್ಲ: ನಾನು ಸಂಪುಟ ಸೇರುವ ಯಾವುದೇ ಚರ್ಚೆ ನಡೆದಿಲ್ಲ. ನಾನಾಗಲಿ, ನಮ್ಮ ತಂದೆ ಯಡಿಯೂರಪ್ಪನವರಾಗಲಿ ಯಾವುದೇ ಒತ್ತಡ ಹಾಕಿಲ್ಲ. ಹಾಲಿ ನಾನು ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಬರುವಂತಹ ದಿನಗಳಲ್ಲಿ ನಾನು ಯಾವ ಸ್ಥಾನದಲ್ಲಿದ್ದರೆ ಉತ್ತಮ ಎಂಬುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

ಹಿಂದೂ-ಮುಸ್ಲಿಂ ಒಟ್ಟಾಗಿದ್ದರು‌: ಶಿವಮೊಗ್ಗದಲ್ಲಿ ನಿನ್ನೆ ಕಾರಿನ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ ಸಣ್ಣದಲ್ಲ, ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿವಮೊಗ್ಗ ಶಾಂತಿಯುತವಾಗಿತ್ತು. ಹಿಂದೂ - ಮುಸ್ಲಿಮರು ಒಟ್ಟಾಗಿದ್ದರು‌. ವಾತಾವರಣ ಹದಗೆಡಿಸುವ ನಿಟ್ಟಿನಲ್ಲಿ ಕೆಲ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ. ಎಲ್ಲವನ್ನೂ ಸಿಎಂ ಹಾಗೂ ಗೃಹ ಸಚಿವರು ಗಮನಿಸಿದ್ದಾರೆ ಎಂದರು.

ಶಿವಮೊಗ್ಗ, ಶಿಕಾರಿಪುರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಹಿರಿಯರು ತೀರ್ಮಾನ ಮಾಡುತ್ತಾರೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಅಭಿಲಾಷೆ ಇದೆ. ಪಕ್ಷ ಏನೇ ತೀರ್ಮಾನ ಮಾಡಿದರೂ ಅದರ ಪ್ರಕಾರ ನಡೆದು ಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಶಾಸಕ ಯತ್ನಾಳ್​ ಹೇಳಿಕೆ : ಶಿಸ್ತು ಸಮಿತಿಯಿಂದ ವಿವರಣೆ ಕೇಳ್ತಾರೆ ಎಂದ ಕಟೀಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.