ETV Bharat / state

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಜನಸಾಗರ

author img

By

Published : Sep 8, 2022, 5:38 PM IST

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು. ಗಣಪತಿ ರಾಜಬೀದಿ ಉತ್ಸವದಲ್ಲಿ 25 ಸಾವಿರ ಲಾಡು ಹಂಚಿಕೆ

ಶಿವಮೊಗ್ಗ: ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿಯ ನಿಮಜ್ಜನ ಮೆರವಣಿಗೆ ಪ್ರಾರಂಭವಾಗಿದ್ದು, ಸಂಸದ ಬಿ ವೈ ರಾಘವೇಂದ್ರ, ಶಾಸಕ ಸಂಗಮೇಶ್ವರ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದಾರೆ.

ಹಿಂದೂ ಮಹಾಸಭಾ ಗಣಪತಿ ನಿಮಜ್ಜನ.. ಹೊಸಮನೆಯಿಂದ ತರಿಕೆರೆ ರಸ್ತೆಯ ಮೂಲಕ ಹಾಲಪ್ಪ ವೃತ್ತ, ಹಳೆ ಬ್ರಿಡ್ಜ್, ಅಂಡರ ಪಾಸ್ ಮೂಲಕ ಬಸ್ ನಿಲ್ದಾಣದ ಮುಂಭಾಗದಿಂದ ಬಿ.ಹೆಚ್. ರಸ್ತೆಯ ಹುತ್ತ ಕಾಲೋನಿವರೆಗೆ ಮೆರವಣಿಗೆ ಸಾಗಿ ಅಲ್ಲಿಂದ ಪುನಃ ಅದೇ ಮಾರ್ಗವಾಗಿ ನಗರಸಭೆ ಮುಂಭಾಗದಿಂದ ಭದ್ರಾ‌ನದಿಯಲ್ಲಿ ನಿಮಜ್ಜನ ಮಾಡಲಾಗುತ್ತದೆ.

ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ, ಶಾಸಕ ಸಂಗಮೇಶ್ವರ ಭಾಗಿ
ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ, ಶಾಸಕ ಸಂಗಮೇಶ್ವರ ಭಾಗಿ

ಕಳೆದ 50 ವರ್ಷಗಳಿಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಗಣಪತಿ ರಾಜಬೀದಿ ಉತ್ಸವದಲ್ಲಿ 25 ಸಾವಿರ ಲಾಡುವನ್ನು ಹಂಚಲಾಗುತ್ತಿದೆ. ಇನ್ನೂ ಅಲ್ಲಲ್ಲಿ ಉಪಹಾರ, ನೀರಿನ ವ್ಯವಸ್ಥೆಯನ್ನು ಭಕ್ತರು ಮಾಡಿದ್ದಾರೆ. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದು, ಕುಣಿಯುತ್ತ ಸಾಗುತ್ತಿದ್ದಾರೆ. ಜೊತೆಗೆ ನಟ ಪುನೀತ್ ರಾಜಕುಮಾರ್ ಹಾಗೂ ಕೊಲೆಯಾದ ಹರ್ಷ ಭಾವಚಿತ್ರಗಳು ಮೆರವಣಿಗೆಯಲ್ಲಿ ರಾರಾಜಿಸುತ್ತಿವೆ.

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ

ಪೊಲೀಸ್ ಬಿಗಿ ಬಂದೋಬಸ್ತ್: ಗಣಪತಿಯ ರಾಜಬೀದಿ ಉತ್ಸವಕ್ಕೆ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗಣಪತಿ ನಿಮಜ್ಜನೆ ಗುರುವಾರ ರಾತ್ರಿ ನಡೆಯಲಿದೆ.‌

(ಇದನ್ನೂ ಓದಿ: ಮುಂಬೈನ ಪ್ರಸಿದ್ಧ ರಾಜ ಗಣೇಶನ ಹುಂಡಿಯಲ್ಲಿ 2 ಕೆಜಿ ಬೆಳ್ಳಿ, ಬಂಗಾರ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.