ETV Bharat / state

ರಾಮನಗರ: ಸಿಡಿಮದ್ದು ಸಿಡಿದು ಕಾರು ಭಸ್ಮ, ವ್ಯಕ್ತಿಯ ದೇಹ ಛಿದ್ರ

author img

By

Published : Aug 16, 2021, 7:34 PM IST

Updated : Aug 16, 2021, 9:27 PM IST

man Died after dynamite blast In Ramnagara
ಸಿಡಿಮದ್ದು ಸಿಡಿದು ಕಾರು ಭಸ್ಮ, ವ್ಯಕ್ತಿಯ ದೇಹ ಛಿದ್ರ

ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಗೊಂಡಿದೆ. ಈ ವೇಳೆ ಓರ್ವ ಸಾವಿಗೀಡಾಗಿದ್ದು, ಕಾರು ಭಸ್ಮವಾಗಿದೆ.

ರಾಮನಗರ: ಸಿಡಿ ಮದ್ದು ಸಿಡಿದು ಕಾರಿನಲ್ಲಿದ್ದವನೊಬ್ಬ ಸಜೀವವಾಗಿ ಸುಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆಗವಿ ಮಠದ ಬಳಿ ಈ ಘಟನೆ ನಡೆದಿದೆ.

ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಗೊಂಡಿದೆ. ಕನಕಪುರದಲ್ಲಿ ಗ್ರಾನೈಟ್ ಕಲ್ಲುಗಣಿಗಾರಿಕೆ ಯಥೇಚ್ಚವಾಗಿ ನಡೆಯುತ್ತಿದೆ. ಈ ಕಲ್ಲು ಗಣಿಗಾರಿಕೆಗೆ ಸಂಬಂಧಪಟ್ಟಂತೆ ಸಿಡಿಮದ್ದುಗಳನ್ನು ಸಾಗಿಸುತ್ತಿದ್ದ ಕೆ.ಎ. 51 ಪಿ 3384 ಸ್ವಿಫ್ಟ್ ಕಾರು ಸ್ಫೋಟಗೊಂಡಿದೆ.

ಸಿಡಿಮದ್ದು ಸಿಡಿದು ಕಾರು ಭಸ್ಮ, ವ್ಯಕ್ತಿಯ ದೇಹ ಛಿದ್ರ

ಸಿಡಿ ಮದ್ದು ಸಿಡಿತಕ್ಕೆ ಕಾರು ಸಂಪೂರ್ಣವಾಗಿ ಛಿದ್ರವಾಗಿ, ಕಾರಿನಲ್ಲಿದ್ದ ಓರ್ವ ಸಾವಿಗೀಡಾಗಿದ್ದಾನೆ. ಈತನನ್ನು ಮಹೇಶ್ ಎಂದು ಗುರುತಿಸಲಾಗಿದೆ. ಮೂಲತಃ ಮಹೇಶ್ ದೊಡ್ಡಾಲಹಳ್ಳಿ ಗ್ರಾಮದವನಾಗಿದ್ದು, ಕನಕಪುರದಲ್ಲಿ ಹಲವಾರು ವರ್ಷಗಳಿಂದ ವಾಸವಿದ್ದ ಎಂದು ಹೇಳಲಾಗುತ್ತಿದೆ. ಕಲ್ಲು ಗಣಿಗಾರಿಕೆಯ ಮಾಲೀಕರು ಶಿವರುದ್ರಪ್ಪ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಮನಗರ ಎಸ್.ಪಿ. ಗಿರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಐಜಿಪಿ , ಎಸ್​ಪಿ ಭೇಟಿ

ಘಟನಾ ಸ್ಥಳಕ್ಕೆ ಐಜಿಪಿ

ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದು ನಂತರ ಮಾದ್ಯಮದ ಜೊತೆ ಮಾತನಾಡಿದ ಅವರು, ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ನಂತರ ಘಟನೆ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.

ರಾಮನಗರ ಎಸ್​ಪಿ ಗಿರೀಶ್ ಮಾತನಾಡಿ, ಗಣಿಗಾರಿಕೆ ಸಾಮಾಗ್ರಿ ನೀಡಿ ಹಿಂತಿರುಗುವಾಗ ಈ ಸ್ಫೋಟ ನಡೆದಿದೆ ಎಂದು ಗಣಿಗಾರಿಕೆ ಮ್ಯಾನೆಜರ್ ಮಾಹಿತಿ ನೀಡಿದ್ದಾರೆ. ಈ ಗಣಿಗಾರಿಕೆ ಸ್ಥಳದಲ್ಲಿ ಸ್ಫೋಟ ನಡೆಯುತ್ತಿರಲಿಲ್ಲ. ಗಣಿ ಕೆಲಸ ಕೆಮಿಕಲ್​ನಿಂದ ನಡೆಯುತ್ತಿತ್ತು ಎನ್ನುವ ಮಾಹಿತಿ ಇದೆ. ಮೇಲ್ನೋಟಕ್ಕೆ ಇದೊಂದು ಜಿಲೆಟಿನ್ ಕಡ್ಡಿಗಳ ತೀವ್ರ ಸ್ಪೋಟ ಆಗಿಬಹುದೆಂದು ಶಂಕಿಸಲಾಗಿದೆ. ಎಫ್ ಎಲ್ ಎಸ್ ತನಿಖಾ ತಂಡದ ತನಿಖೆಯಿಂದ ಮತ್ತಷ್ಟು ಸತ್ಯಾಸತ್ಯತೆ ಹೊರಬರಲಿದೆ ಎಂದು ತಿಳಿಸಿದ್ದಾರೆ.

Last Updated :Aug 16, 2021, 9:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.