ETV Bharat / state

ರಾಮನಗರ: ಮತ್ತೆ ಕೇಳಿ ಬಂತು ಮತಾಂತರದ ಆರೋಪ

author img

By

Published : Nov 2, 2022, 6:47 AM IST

Etv Bharat
ರಾಮನಗರ : ಮತ್ತೆ ಮತಾಂತರದ ಮಾಡುವ ಬಗ್ಗೆ ಆರೋಪ

ಕನಕಪುರದಲ್ಲಿ ಕೆಲವು ಬಡ ಜನರನ್ನು ಗುರಿಯಾಗಿಸಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಮನಗರ: ಕನಕಪುರ ಪಟ್ಟಣದ ನವಾಜಿಬಾರೆ ಬಡಾವಣೆಯ ಮನೆಯೊಂದರಲ್ಲಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಕೆಲವು ಕ್ರೈಸ್ತ ಸಮುದಾಯದವರು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಯತ್ನಿಸಿದ್ದಾರೆ. ಇದಕ್ಕಾಗಿ ಅವರನ್ನು ತಡರಾತ್ರಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕನಕಪುರ ಟೌನ್ ಪೊಲೀಸರು 12 ಮಂದಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಮಾಹಿತಿ ಕಲೆಹಾಕಿದ ಬಳಿಕ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, "ಮತಾಂತರ ತಡೆಯಲು ಕಾಯ್ದೆ ತರಲಾಗಿದೆ. ಧರ್ಮದ ಬದಲಾವಣೆಗೆ ಅವಕಾಶ ಕೊಡಬಾರದು. ಜನತೆಯ ಭಾವನೆಗೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆ ರೀತಿ ಮತಾಂತರದಲ್ಲಿ ತೊಡಗಿದ್ದರೆ ಕಾನೂನಿನ ಬಿಸಿ ಮುಟ್ಟಿಸಲಾಗುವುದು" ಎಂದರು.

ಕಪಾಲಿ ಬೆಟ್ಟದ ಯೇಸು ಪ್ರತಿಮೆ ವಿಚಾರ ಕೋರ್ಟ್‍ನಲ್ಲಿದೆ. ಪಡಿತರ ಚೀಟಿ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು.

ಇದನ್ನೂ ಓದಿ: ಮತಾಂತರ ನಿಷೇಧದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ: ರಾಜ್ಯದಲ್ಲಿ ಅಧಿಕೃತವಾಗಿ ಕಾಯ್ದೆ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.