ETV Bharat / state

ತ್ಯಾಜ್ಯ ನೀರಿನಿಂದ ಜಲಚರಗಳ ಮಾರಣ ಹೋಮ... ಕೃಷಿ ಮಾಡಲು ರೈತರಿಗೂ ಸಂಕಷ್ಟ!

author img

By

Published : Jul 26, 2019, 10:50 AM IST

ತ್ಯಾಜ್ಯ ನೀರಿನಿಂದ ಜಲಚರಗಳ ಮಾರಣಹೋಮ

ಶಕ್ತಿನಗರದಿಂದ ಗುಜಳ್ಳಿಗೆ ತೆರಳುವ ಮಾರ್ಗ ಮಧ್ಯೆ ಬರುವಂತಹ ನಾನಾ ಫ್ಯಾಕ್ಟರಿಗಳು ತ್ಯಾಜ್ಯ ನೀರನ್ನು ಕೆರೆ ಹಾಗೂ ನದಿಗಳಿಗೆ ಬಿಟ್ಟು ಸಾರ್ವಜನಿಕರ ಹಾಗೂ ಜಲಚರಗಳ ಜೀವಕ್ಕೆ ಕುತ್ತು ತರುತ್ತಿದ್ದಾರೆ.

ರಾಯಚೂರು: ಇವರೆಲ್ಲರೂ ನದಿ ಪಾತ್ರದಲ್ಲಿ ವಾಸಿಸುವ ಜನರು. ಇವರಿಗೆ ಮಳೆಗಾಲದಲ್ಲಿ ಹರಿಯುವ ಹಳ್ಳ - ಕೊಳ್ಳ ಹಾಗೂ ನದಿಯ ನೀರು ವ್ಯವಸಾಯಕ್ಕೆ ಆಸರೆ. ಆದ್ರೆ, ಕಾರ್ಖಾನೆಯಿಂದ ಹೊರ ಬರುವಂತಹ ರಾಸಾಯನಿಕ ಮಿಶ್ರಿತ ನೀರು ಈಗ ಇವರಿಗೆ ಕಂಟಕವಾಗಿದೆ.

ಹರಿದು ಬರುತ್ತಿರುವ ಕೆಮಿಕಲ್ ಮಿಶ್ರಿತ ನೀರಿನಿಂದ ಕೃಷಿಗೆ ಅಡಚಣೆ ಉಂಟಾಗಿ, ಜನ-ಜಾನುವಾರುಗಳಿಗೆ ಕಂಟಕವಾಗಿದೆ. ಈ ನೀರಿನಿಂದ ಸಾವಿರಾರು ಮೀನುಗಳು ಹಾಗೂ ಇತರ ಜಲಚರಗಳು ಸಾವಿಗೀಡಾಗುತ್ತಿವೆ.

ತ್ಯಾಜ್ಯ ನೀರಿನಿಂದ ಜಲಚರಗಳ ಮಾರಣಹೋಮ

ರಾಯಚೂರು ತಾಲೂಕಿನ ಶಕ್ತಿನಗರದ ಸುತ್ತಮುತ್ತಲಿನ ಪರಿಸರದಲ್ಲಿ ಈ ಅವ್ಯವಸ್ಥೆ ತಾಂಡವವಾಡುತ್ತಿದೆ. ಶಕ್ತಿನಗರದಿಂದ ಗುಜಳ್ಳಿಗೆ ತೆರಳುವ ಮಾರ್ಗ ಮಧ್ಯೆ ಬರುವಂತಹ ನಾನಾ ಫ್ಯಾಕ್ಟರಿಗಳು ತ್ಯಾಜ್ಯ ನೀರನ್ನು ಕೆರೆ ಹಾಗೂ ನದಿಗಳಿಗೆ ಬಿಟ್ಟು ಸಾರ್ವಜನಿಕರ ಹಾಗೂ ಜಲಚರಗಳ ಜೀವಕ್ಕೆ ಕುತ್ತು ತರುತ್ತಿದ್ದಾರೆ.

ವಡ್ಲೂರು, ಹನುಮದೊಡ್ಡಿ, ಗುಜಳ್ಳಿ, ಕೊರವಿಹಾಳ, ಕೊರ್ತಕುಂದ ರಾಂಪುರ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಮತ್ತು ರೈತರಿಗೆ ತೊಂದರೆ ಇಲ್ಲಿನ ನದಿ ಹಾಗೂ ಕೆರೆಗಳೇ ನೀರಿನ ಮೂಲವಾದ್ದರಿಂದ ಜನರು ಈ ನೀರು ಸೇವಿಸಿ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ.

Intro:ಸ್ಲಗ್: ಕೆಮಿಕಲ್ ಮಿಶ್ರಿತ ನೀರಿನಂದ ರೈತರಿಗೆ, ಮೀನುಗಾರರಿಗೆ ತೊಂದರೆ.
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-೦7-2019
ಸ್ಥಳ: ರಾಯಚೂರು
ಆಂಕರ್: ಅವರೆಲರೂ ನದಿ ಪಾತ್ರದ ವಾಸಿಸುವ ಜನರು. ಅವರಿಗೆ ಮಳೆಗಾಲದಲ್ಲಿ ಹರಿಯುವ ಹಳ್ಳ-ಕೊಳ್ಳ ಹಾಗೂ ನದಿಗೆ ನೀರೆ ವ್ಯವಸಾಯ ಕೃಷಿಗೆ ಆಸರೆ. ಆದ್ರೆ ಕಾರ್ಖಾನೆಯಿಂದ ಹೊರ ಬರುವಂತಹ ರಾಸಾಯನಿಕ ಮಿಶ್ರಿತ ನೀರು ಈಗ ಗ್ರಾಮಸ್ಥರಿಗೆ ಕಂಟಕವಾಗಿದೆ. ಕೆಮಿಕಲ್ ಮಿಶ್ರಿತ ಹರಿದು ಬರುತ್ತಿರುವ ನೀರಿನಿಂದ ಜಲಚರ ಪ್ರಾಣಿಗಳು ಸಾಯುವ ವೊಂದೇ ಅಲ್ಲದೆ, ಕೃಷಿಗೂ ಅಡಚಣೆ ಉಂಟಾಗಿ, ಜನ-ಜಾನುವಾರುಗಳಿಗೆ ಕಂಟಕವಾಗಿದೆ.
Body:ವಾಯ್ಸ್ ಓವರ್.೧: ಹೀಗೆ ಒಂದು ಕಡೆ ರಾಸಾಯನಿಕ ಮಿಶ್ರಿತ ಹರಿದು ಬಂದ ನೀರಿನಿಂದ ಮೃತಪಟ್ಟ ಸಾವಿರಾರು ಮೀನುಗಳು. ಮತ್ತೊಂದು ಕಡೆ ನಾಟಿ ಮಾಡಿದ ಭತ್ತ ಪೈರು ಕದ್ದು ಬಣ್ಣಕ್ಕೆ ತಿರುಗಿ ಬಾಡಿ ಹೋಗುತ್ತಿದೆ. ಈ ಎಲ್ಲಾ ದೃಶ್ಯಗಳು ಕಂಡು ಬಂದಿರುವುದು ರಾಯಚೂರು ಜಿಲ್ಲೆಯಲ್ಲಿ. ಹೌದು, ರಾಯಚೂರು ತಾಲೂಕಿನ ಶಕ್ತಿನಗರದ ಸುತ್ತಮುತ್ತಲಿನ ಫ್ಯಾಕ್ಟರಿಗಳಿಂದ ಹರಿದು ಬಿಡುತ್ತಿರುವ ಕೆಮಿಕಲ್ ನೀರು, ಹಳ್ಳ-ಕೊಳ್ಳ ಹಾಗೂ ಕರೆಗಳಿಗೆ ಸೇರಿಕೊಂಡು ಮೀನುಗಳು ಸ್ವಾನ್ನಪ್ಪುತ್ತಿದ್ದರೆ, ಭತ್ತದ ಗದ್ದಗೆ ನೀರು ನುಗ್ಗಿ ಬೆಳೆಯ ಸಹ ನಷ್ಟ ಆಗುತ್ತದೆ ಎನ್ನುವ ಎಂದು ರೈತರು ಗ್ರಾಮಸ್ಥರು ದೂರಿದ್ರೆ.
ವಾಯ್ಸ್ ಓವರ್.2: ಇನ್ನು ಫ್ಯಾಕ್ಟರಿಗಳು ಬಳಸುವ ಕೆಮಿಕಲ್ ನೀರಿನ್ನ ಸಾರ್ವಜನಿಕರು ನೀರು ಬಳಸುವಂತಹ, ಕೆರೆ, ಹಳ್ಳ-ಕೊಳ್ಳ, ನದಿಗಳಿಗೆ ಹರಿದು ಬಿಡದೆ, ಅ ನೀರಿನ್ನ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆದ್ರೆ ಶಕ್ತಿನಗರದಿಂದ ಗುಜಳ್ಳಿ ತೆರಳುವ ಮಾರ್ಗ ಮಧ್ಯ ಬರುವಂತಹ ನಾನಾ ಫ್ಯಾಕ್ಟರ್ ಗಳಿಂದ ಹರಿದು ಬಿಟ್ಟ ನೀರಿನಿಂದ ಭತ್ತದ ಬೆಳೆ ಹಾಗೂ ಮೀನುಗಳು ಸ್ವಾನ್ನಪಿವೆ. ಇದರಿಂದ ಭತ್ತ ನಾಟಿದ ರೈತನಿಗೆ, ಮೀನುಗಾರಿಕೆ ಮಾಡುವ ಮೀನುಗಾರರಿಗೆ ಲಕ್ಷಾಂತರ ನಷ್ಟ ಉಂಟಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ವಾಯ್ಸ್ ಓವರ್.3: ಇನ್ನು ಈ ಫ್ಯಾಕ್ಟರಿಗಳಲ್ಲಿ ಬಳಸುವಂತಹ ರಾಸಾಯನಿಕಗಳನ್ನು ನೀರಿನ ಜತೆಯಲ್ಲಿ ಹರಿದು ಬಿಡುವುದರಿಂದ ಹಳ್ಳ-ಕೊಳ್ಳದ ಮೂಲಕ ನದಿ ಸೇರುತ್ತಿವೆ. ಈ ನೀರನ್ನ ಬಳಸುವ ವಡ್ಲೂರು, ಹನುಮದೊಡ್ಡಿ, ಗುಜಳ್ಳಿ, ಕೊರವಿಹಾಳ, ಕೊರ್ತಕುಂದ ರಾಂಪುರ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಮತ್ತು ರೈತರಿಗೆ ತೊಂದರೆ ಉಂಟಾಗಿ, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಫ್ಯಾಕ್ಟರಿ ರಾಸಾಯಿನಿಕ ನೀರು ಹರಿದು ಬಿಡುತ್ತಿರುವ ಕಾರ್ಖಾನೆ ಮಾಲೀಕರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ, ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುಂಜಳ್ಳಿ ಗ್ರಾಮಸ್ಥರು ದೂರಿದ್ರೆ. ಒಟ್ನಿಲ್ಲಿ, ಫಾಕ್ಟರಿ ಮಾಲೀಕರು ತಮ್ಮ ಲಾಭಕ್ಕಾಗಿ ಫಾಕ್ಟರಿಯ ಸುತ್ತಮುತ್ತಲಿನ ರೈತರು ಹಾಗೂ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವ ಮೂಲಕ ನಮ್ಮಗೆ ತೊಂದರೆಯಾಗದಂತೆ ಫ್ಯಾಕ್ಟರಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಾ ಎನ್ನುವುದು ಕಾದು ನೋಡಬೇಕಾಗಿದೆ.
Conclusion:ಬೈಟ್.1: ಜಂಬಣ್ಣ, ಗುಂಜಳ್ಳಿ ಗ್ರಾಮಸ್ಥ(ಸ್ಕೈ ಬ್ಲ್ಯೂ ಶಾರ್ಟ್ ಧರಿಸಿದ ವ್ಯಕ್ತಿ)
ಬೈಟ್.2: ಲಿಂಗಪ್ಪ, ಸ್ಥಳೀಯ(ಜೇಬಿನಲ್ಲಿ ಮೊಬೈಲ್ ಇರಿಸಿಕೊಂಡಿರುವ ವ್ಯಕ್ತಿ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.