ETV Bharat / state

ದರ ಏರಿಸಿದರೂ ಆಟೋ, ಜೀಪ್​ಗಳತ್ತ ಒಲವು ತೋರುತ್ತಿರುವ ಗ್ರಾಮೀಣ ಜನತೆ

author img

By

Published : Nov 24, 2020, 5:09 PM IST

people interested to shareauto
ಆಟೋ, ಜೀಪ್​ಗಳತ್ತ ಒಲವು ತೋರುತ್ತಿರುವ ಗ್ರಾಮೀಣ ಜನತೆ

ಆಟೋ, ಜೀಪ್, ಟಂಟಂ ವಾಹನಗಳು ಟಿಕೆಟ್​ ದರ ಏರಿಸಿದರೂ ಹಳ್ಳಿ ಜನತೆ ನಗರಗಳತ್ತ ಪ್ರಯಾಣ ಬೆಳೆಸಲು ಅವುಗಳನ್ನೇ ಬಳಸುತ್ತಿದ್ದಾರೆ. ಬಸ್​​ನಲ್ಲಿ ಪ್ರಯಾಣಿಸಲು ಜನರು ಹೆಚ್ಚು ಆಸಕ್ತಿ ತೋರುತ್ತಿಲ್ಲ.

ರಾಯಚೂರು: ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕೂ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರವಿದ್ದರೂ ಆಟೋ, ಜೀಪ್, ಟಂಟಂ ವಾಹನಗಳತ್ತ ಹಳ್ಳಿ ಜನತೆ ಒಲವು ತೋರುತ್ತಿದ್ದಾರೆ. ಆದರೀಗ ಆಟೋ, ಜೀಪ್​​ಗಳೂ ಟಿಕೆಟ್​​ ದರ ಏರಿಸಿ ಜನರಿಗೆ ಶಾಕ್​ ನೀಡಿವೆ.

ಲಾಕ್​ಡೌನ್​​ನಲ್ಲಿ ಸ್ಥಗಿತಗೊಂಡಿದ್ದ ಬಸ್​​ ಸಂಚಾರ ಅನ್​ಲಾಕ್​ ಬಳಿಕ ಆರಂಭವಾಯಿತು. ಆದರೆ, ಗ್ರಾಮೀಣ ಭಾಗಕ್ಕೆ ಬಸ್​ ಸಂಚಾರ ಬಿಟ್ಟಿರಲಿಲ್ಲ. ಹೀಗಾಗಿ, ಹಳ್ಳಿ ಜನರು ಆಟೋ, ಜೀಪ್​ಗಳನ್ನೇ ಹೆಚ್ಚು ಬಳಸುತ್ತಿದ್ದರು. ಅವುಗಳನ್ನೇ ಈಗಲೂ ಮುಂದುವರೆಸಿದ್ದಾರೆ.

ಇದನ್ನೂ ಓದಿ...ಆರನೇ ದಿನ ಸ್ವಲ್ಪ ಚೇತರಿಕೆಯಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ಪ್ರಮಾಣ

ಸರ್ಕಾರ ಆದೇಶದ ಬಳಿಕ ಗ್ರಾಮೀಣ ಭಾಗಕ್ಕೂ ಬಸ್​​ ಸಂಚಾರ ಆರಂಭವಾಯಿತು. ರಾಯಚೂರಿನಿಂದ ಚಂದ್ರಬಂಡಾ ಗ್ರಾಮಕ್ಕೆ ಬಸ್ ಟಿಕೆಟ್ ದರ ₹ 20-22 ಇದೆ. ಆದರೆ, ಆಟೋದವರು ₹ 25-30 ದರ ನಿಗದಿಪಡಿಸಿದ್ದಾರೆ. ದರ ಹೆಚ್ಚಿಸಿದ್ದರ ಕುರಿತು ಕಾರಣ ಹೇಳುತ್ತಿದ್ದರೂ ಆಟೋದವರು ಮಾತ್ರ ಬಾಯಿ ಬಿಡುತ್ತಿಲ್ಲ.

ಆಟೋ, ಜೀಪ್​ಗಳತ್ತ ಒಲವು ತೋರುತ್ತಿರುವ ಗ್ರಾಮೀಣ ಜನತೆ

ಗ್ರಾಮೀಣ ಜನರು ಕೂಲಿಗಾಗಿ ನಗರದತ್ತ ಹೋಗುತ್ತಾರೆ. ರೈತರು ಬೆಳೆದಂತಹ ತರಕಾರಿಯನ್ನು ಮಾರುಕಟ್ಟೆಗೆ ಕೊಂಡುಯ್ಯುತ್ತಾರೆ. ಆದರೆ, ಸರುಕು ಸಾಗಿಸುವ ವಾಹನಗಳು ದರ ಏರಿಸಿವೆ. ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ಓಡಾಟಕ್ಕೆ ಅನುಕೂಲವಾಗಿರುವ ವಾಹನಗಳು ದರ ಏರಿಸುವ ಮೂಲಕ ಮತ್ತಷ್ಟು ತೊಂದರೆ ಉಂಟು ಮಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.