ETV Bharat / state

ತಗ್ಗಿದ ಕೃಷ್ಣಾ ಅಬ್ಬರ: ನದಿ ಪಾತ್ರದ ಜನರು ನಿರಾಳ

author img

By

Published : Aug 12, 2020, 9:14 AM IST

Reduced Krishna River Flood
ತಗ್ಗಿದ ಕೃಷ್ಣ ಅಬ್ಬರ: ನದಿ ಪಾತ್ರ ಜನರು ನಿರಾಳ..

ಮಹಾರಾಷ್ಟ್ರ ಹಾಗೂ ಮಲೆನಾಡು ಭಾಗದಲ್ಲಿ ಅತೀವ ಮಳೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಪ್ರಮಾಣ ಅಧಿಕವಾಗಿತ್ತು. ಹೀಗಾಗಿ ಜಲಾಶಯದ ಗೇಟ್‌ಗಳಿಂದ ಲಕ್ಷಾಂತರ ಕ್ಯೂಸೆಕ್​​​​​ ನೀರು ನದಿಗೆ ಹರಿ ಬಿಡಲಾಗಿತ್ತು. ಇದರಿಂದ ರಾಯಚೂರು ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿತ್ತು.

ರಾಯಚೂರು: ಕೃಷ್ಣಾ ನದಿಯಿಂದ ರಾಯಚೂರು ಜಿಲ್ಲೆಗೆ ಎದುರಾಗಿದ್ದ ಪ್ರವಾಹ ಭೀತಿ ಈಗ ತಗ್ಗಿದೆ

ಮಹಾರಾಷ್ಟ್ರ ಹಾಗೂ ಮಲೆನಾಡು ಭಾಗದಲ್ಲಿ ಅತೀವ ಮಳೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಪ್ರಮಾಣ ಅಧಿಕವಾಗಿತ್ತು. ಹೀಗಾಗಿ ಜಲಾಶಯದ ಗೇಟ್‌ಗಳಿಂದ ಲಕ್ಷಾಂತರ ಕ್ಯೂಸೆಕ್​​ ನೀರು ನದಿಗೆ ಹರಿ ಬಿಡಲಾಗಿತ್ತು. ಇದರಿಂದ ರಾಯಚೂರು ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿತ್ತು.

ಆದ್ರೆ ನಿನ್ನೆಯಿಂದ ಜಲಾಶಯಕ್ಕೆ ನೀರಿನ ಒಳ ಹರಿವು ಇಳಿಮುಖವಾಗಿದೆ. ಇಂದು ಬೆಳಗ್ಗೆ 6 ಗಂಟೆಗೆ ನಾರಾಯಣಪುರ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್​​​ ನೀರು ಹರಿದು ಬರುತ್ತಿದ್ದು, ನದಿಗೆ 30108 ಕ್ಯೂಸೆಕ್​​​​ ನೀರು ಹರಿಸಲಾಗುತ್ತದೆ. ಇದರಿಂದ ಜಿಲ್ಲೆಗೆ ಪ್ರವಾಹ ಭೀತಿ ದೂರವಾಗಿದೆ.

ಒಂದು ವೇಳೆ ಜಲಾಶಯಕ್ಕೆ ಒಳಹರಿವಿನ ಏರಿಕೆಯಾಗಿ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್​​​​​​​​​​​ ನದಿಗೆ ಹರಿ ಬಿಟ್ಟರೆ, ಮತ್ತೆ ಪ್ರವಾಹ ಭೀತಿ ಎದುರಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.