ETV Bharat / state

ರಾಯಚೂರು: ಜಲ ಜೀವನ್ ಮಿಷನ್‌ ಕಾಮಗಾರಿಗೆ ತಂದಿದ್ದ ಪೈಪ್​ ಬಂಡಲ್‌ಗಳಿಗೆ ಬೆಂಕಿ

author img

By ETV Bharat Karnataka Team

Published : Oct 25, 2023, 9:17 PM IST

Updated : Oct 25, 2023, 10:09 PM IST

ಜೆಎಂಎಂ ಕಾಮಗಾರಿ ಪೈಪ್​ಗಳು ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿವೆ.

ಪೈಪ್​ಗೆ ತಗುಲಿದ​ ಬೆಂಕಿ
ಪೈಪ್​ಗೆ ತಗುಲಿದ​ ಬೆಂಕಿ

ರಾಯಚೂರು: ಜಲ ಜೀವನ್ ಮೀಷನ್‌ (ಜೆಎಂಎಂ) ಕಾಮಗಾರಿಗಾಗಿ ತಂದು ಹಾಕಿದ್ದ ಪೈಪ್​ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ರಾಯಚೂರಿನ ದೇವಸೂಗೂರು ಗ್ರಾಮದಲ್ಲಿ ಬುಧವಾರ ಜರುಗಿದೆ. ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಜಿಲ್ಲೆಯ ಮನೆ ಮನೆಗೆ ನೀರು ಪೂರೈಕೆ ಮಾಡಲು ಜೆಎಂಎಂ ಕಾಮಗಾರಿ ನಡೆಯುತ್ತಿದೆ. ದೇವಸೂಗೂರು ಗ್ರಾಮ ಪಂಚಾಯತಿ ಕಚೇರಿಯ ಹತ್ತಿರದ ಹಿಂಬದಿಯ ಖಾಲಿ ಜಾಗದಲ್ಲಿ ಪೈಪ್‌ಗಳನ್ನು ಗುತ್ತಿಗೆದಾರರು ತಂದು ಹಾಕಿದ್ದರು. ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡು ಭಾರಿ ಪ್ರಮಾಣದಲ್ಲಿ ಪೈಪ್​ ನಾಶವಾಗಿದೆ ಎಂದು ದೇವಸೂಗೂರು ಗ್ರಾ.ಪಂ.ಪಿಡಿಒ ದೂರವಾಣಿ ಮೂಲಕ ತಿಳಿಸಿದರು.

ಇದನ್ನೂ ಓದಿ : ಅತ್ತಿಬೆಲೆ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಅವಘಡ: ಮೃತರ ಸಂಖ್ಯೆ 12ಕ್ಕೆ ಏರಿಕೆ

ಒಟ್ಟು 3 ಕಿ.ಮೀಗೆ ಆಗುವಷ್ಟು ಸುಮಾರು 12 ಪೈಪ್​ ಬಂಡಲ್‌ಗಳು ಆಹುತಿಯಾಗಿವೆ. ಅಂದಾಜು 10 ಲಕ್ಷ ರೂ. ಗಳಿಗೂ ಹೆಚ್ಚು ನಷ್ಟವಾಗಿದೆ. ಪೈಪ್‌ಗಳನ್ನು ಹಾಕಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಒಣ ಹುಲ್ಲು ಬೆಳೆದಿದ್ದು, ಅದಕ್ಕೆ ಕಿಡಿ ತಾಗಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶಕ್ತಿನಗರ ಪೊಲೀಸ್ ಠಾಣೆ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಟ್ಟೆ ಅಂಗಡಿ ಬೆಂಕಿಗಾಹುತಿ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿರುವ ಬಾಂಬೆ ಬಿಗ್ ಬಜಾರ್ ಅಂಗಡಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಪೂರ್ಣ ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಆಹುತಿಯಾಗಿವೆ. ಬುಧವಾರ ಮುಂಜಾನೆ 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: ದಾವಣಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಬಟ್ಟೆ ಅಂಗಡಿ

Last Updated : Oct 25, 2023, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.