ETV Bharat / state

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ: 26 ಹುದ್ದೆಗಳಿಗೆ ಅರ್ಜಿ ಆಹ್ವಾನ

author img

By ETV Bharat Karnataka Team

Published : Dec 15, 2023, 3:58 PM IST

Peon and typist job in Raichur district court
Peon and typist job in Raichur district court

ಬೆರಳಚ್ಚುಗಾರ, ಜವಾನ ಸೇರಿದಂತೆ ಒಟ್ಟು 26 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆರಳಚ್ಚುಗಾರ, ಜವಾನ ಸೇರಿದಂತೆ ಒಟ್ಟು 26 ಹುದ್ದೆಗಳ ಭರ್ತಿ ನಡೆಯಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳು ಯಾವುವು?:

  • ಸ್ಟೆನೋಗ್ರಾಫರ್ ಗ್ರೇಡ್​ 3 - 1
  • ಟೈಪಿಸ್ಟ್​​ - 8
  • ಟೈಪಿಸ್ಟ್​- ಕಾಪಿಸ್ಟ್ - ​ 1
  • ಪ್ರೊಸೆಸ್​ ಸರ್ವರ್​​ - 5
  • ಜವಾನ - 10
  • ಚಾಲಕ - 1

ವಿದ್ಯಾರ್ಹತೆ: ಜವಾನ, ಚಾಲಕ ಹೊರತಾಗಿ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪರೀಕ್ಷೆಯಲ್ಲಿ ಟೈಪಿಂಗ್​ ಮತ್ತು ಶೀಘ್ರ ಲಿಪಿಗಾರ ಪರೀಕ್ಷೆಯಲ್ಲಿ ಸೀನಿಯರ್​​​ ಪರೀಕ್ಷೆ ಉತ್ತೀರ್ಣರಾಗಿರಬೇಕು. ಜವಾನ ಮತ್ತು ಚಾಲಕರ ಹುದ್ದೆಗೆ 10ನೇ ಪರೀಕ್ಷೆ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಪ್ರಕ್ರಿಯೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಟೈಪಿಂಗ್​ ಪರೀಕ್ಷೆ, ಕಂಪ್ಯೂಟರ್​ ಸಾಕ್ಷರತೆ ಮತ್ತು ಸಂದರ್ಶನ.

ನವೆಂಬರ್​ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಡಿಸೆಂಬರ್​ 21 ಕಡೇಯ ದಿನ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ raichur.dcourts.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಕೇಂದ್ರ ಗುಪ್ತಚರ ಇಲಾಖೆಯಲ್ಲಿ 995 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.