ETV Bharat / state

ಲಿಂಗಸುಗೂರಿನಲ್ಲಿ ಹೇಳೋರಿಲ್ಲ ಕೇಳೋರಿಲ್ಲ.. ಎಗ್ಗಿಲ್ಲದೆ ಸಾಗಿದೆ ಮರಳು ದಂಧೆ

author img

By

Published : Jul 5, 2020, 3:40 PM IST

sds
ಲಿಂಗಸುಗೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ

ಒಂದು ತಿಂಗಳಿಂದ ಇಲಾಖೆಯೊಂದರ ಹೆಸರು ಹೇಳಿ ಅಹೋರಾತ್ರಿ ಅಕ್ರಮ ಮರಳು ಸಾಗಣೆ ಮಾಡುವ ಟಿಪ್ಪರ್, ಟ್ರ್ಯಾಕ್ಟರ್​ಗಳಿಗೆ ಕಡಿವಾಣ ಹಾಕಬೇಕು. ಅನುಮತಿ ಪಡೆದು ರಾಜಸ್ವ ಹಣ ಪಾವತಿಸಿ ಕಡಿಮೆ ದರದಲ್ಲಿ ಮರಳು ಸಾಗಣೆ ಮಾಡಲು ಜಿಲ್ಲಾಡಳಿತ ಮುಂದಾಗಬೇಕು..

ರಾಯಚೂರು/ಲಿಂಗಸುಗೂರು : ತಾಲೂಕು ಕೇಂದ್ರ ಮತ್ತು ಸುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್ ಮಧ್ಯೆಯಊ ಅಹೋರಾತ್ರಿ ಅಕ್ರಮ ಮರಳು ಸಾಗಣೆಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗಸುಗೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ

ಕೊರೊನಾ ಲಾಕ್​ಡೌನ್​ ಹಿನ್ನೆಲೆ ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗಿನ ಜಾವ 5ರವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಆದರೆ, ದೇವದುರ್ಗ ತಾಲೂಕು ಕೃಷ್ಣಾ ನದಿಯಿಂದ ಮರಳು ಸಾಗಣೆ ಮಾಡುವ ಅಕ್ರಮ ಮರಳು ಟಿಪ್ಪರ್​ಗಳು ರಾಜಾರೋಷವಾಗಿ ತಿರುಗಾಟ ನಡೆಸಿವೆ. ಪೊಲೀಸರು ನೋಡಿಯಊ ನೋಡದಂತೆ ಕರ್ತವ್ಯ ಮರೆತು ಸುಮ್ಮನಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಲಾಕ್​ಡೌನ್ ಇದ್ದರು ಕೆಲವುರು ಔಷಧಿ ತರಲು, ಇಲಾಖೆ ಕರ್ತವ್ಯಕ್ಕೆ ಹೋಗುತ್ತಿದ್ದೇವೆ ಎಂಬಿತ್ಯಾದಿ ಕಾರಣ ಹೇಳಿದ್ರು. ಮಾಸ್ಕ್​ ಹಾಕದಿರುವ ಜನರಿಗೆ ದಂಡ ವಿಧಿಸಿ ಕೆಲವರನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಒಂದು ತಿಂಗಳಿಂದ ಇಲಾಖೆಯೊಂದರ ಹೆಸರು ಹೇಳಿ ಅಹೋರಾತ್ರಿ ಅಕ್ರಮ ಮರಳು ಸಾಗಣೆ ಮಾಡುವ ಟಿಪ್ಪರ್, ಟ್ರ್ಯಾಕ್ಟರ್​ಗಳಿಗೆ ಕಡಿವಾಣ ಹಾಕಬೇಕು. ಅನುಮತಿ ಪಡೆದು ರಾಜಸ್ವ ಹಣ ಪಾವತಿಸಿ ಕಡಿಮೆ ದರದಲ್ಲಿ ಮರಳು ಸಾಗಣೆ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.