ETV Bharat / state

ಹಣ್ಣುಗಳ ರಾಜನಿಗೆ ಹೊಡೆಯಿತು ಸನ್​ಸ್ಟ್ರೋಕ್​!​ ಮಾವುಪ್ರಿಯರಿಗೆ ಕಹಿಸುದ್ದಿ

author img

By

Published : Apr 11, 2019, 5:16 AM IST

ಹಣ್ಣುಗಳ ರಾಜ ಮಾವಿಗೆ ಕೀಟಬಾದೆ

ವಿಪರೀತ ತಾಪಮಾನದಿಂದ ಮಾವಿಗೆ ಹಸಿರು ಕೀಟಗಳ ಕಾಟ ಶುರುವಾಗಿರುವುದು ಬೆಳೆಗಾರರಿಗೆ ಸಂಕಷ್ಟ ಉಂಟುಮಾಡಿದೆ

ರಾಯಚೂರು: ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಹಣ್ಣಿನ ರಾಜ ಮಾವಿನದ್ದೇ ಅಬ್ಬರ. ಆದರೆ ಈ ಬೇಸಿಗೆಯಲ್ಲಿ ಸಿಹಿ ಮಾವಿನ ನಿರೀಕ್ಷೆಯಲ್ಲಿರುವ ಮಾವು ಪ್ರಿಯರಿಗೆ ಕಹಿ ಸುದ್ದಿಯೊಂದಿದೆ.

ಮಾರುಕಟ್ಟೆಯಲ್ಲಿ ರಾರಾಜಿಸಬೇಕಾದ ಮಾವಿನ ಹಣ್ಣು ಈ ಬಾರಿ ವಿಪರೀತ ತಾಪಮಾನದಿಂದ ರೋಗಗಕ್ಕೀಡಾಗಿವೆ. ಇದು ಮಾವು ಪ್ರಿಯರಿಗಿಂತ ಬೆಳೆಗಾರರಿಗಂತೂ ಭಾರಿ ಆತಂಕ ಉಂಟುಮಾಡಿದೆ.

ಹಣ್ಣುಗಳ ರಾಜ ಮಾವಿಗೆ ಕೀಟಬಾದೆ

ಈ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣಾಂಶ ಇರುವುದರಿಂದ ಮಾವಿನ ಮರದ ಎಲೆ ಹಾಗೂ ಹಣ್ಣುಗಳಿಗೆ ಹಸಿರು ಕೀಟ ತಗುಲಿದೆ. ಈ ಹಣ್ಣುಗಳು ಜನರ ಆರೋಗ್ಯದ ಮೇಲೂ ದುಷ್ಪರಿಣಾಮಗಳು ಬೀರುತ್ತವೆ.

ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುವ ಬಿಸಿಲಿನ ತಾಪಮಾನ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ತಂದೊಡ್ಡುವುದರೊಂದಿಗೆ ಈ ಬಾರಿ ಮಾವಿಗೂ ಏಟು ನೀಡಿದೆ. ಕಷ್ಟಪಟ್ಟು ಬೆಳೆದ ಮಾವಿನ ಬೆಳೆ ಕೀಟಗಳಿಗೆ ಬಲಿಯಾಗುತ್ತಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಇನ್ನು ಎಂತದ್ದೋ ಮಾವಿನ ಹಣ್ಣು ತಿಂದರೆ ನಮ್ಮ ಗತಿ ಏನು ಎಂದು ಜನರೂ ಯೋಚಿಸುವಂತಾಗಿದೆ. ಈ ಮಧ್ಯೆ ಗುಣಮಟ್ಟ ಮತ್ತು ರಾಸಾಯನಿಕ ಔಷಧ ಸಿಂಪಡಿಸಿದ ಹಣ್ಣುಗಳು ಸೇವಿಸುವುದು ಉತ್ತಮ ಎನ್ನುವುದು ಕೃಷಿ ವಿಜ್ಞಾನ ಸಲಹೆ.

ಒಟ್ಟಿನಲ್ಲಿ ಬಿರು ಬೇಸಿಗೆಯ ಎಫೆಕ್ಟ್​ನಿಂದ ನಲುಗುತ್ತಿರುವ ಮಾವಿನ ಹಣ್ಣುಗಳನ್ನು ಕೊಂಚ ಎಚ್ಚರಿಕೆಯಿಂದಲೇ ಸೇವಿಸುವುದು ಉತ್ತಮ.

Intro:ಬೇಸಿಗೆ ಕಾಲದಲ್ಲಿ ಬಂತು ಅಂದ್ರೆ ಸಾಕು, ಮಾರುಕಟ್ಟೆಗೆ ಎಲ್ಲಿ ನೋಡಿದ್ರೆ, ಹಣ್ಣಿನ ರಾಜ ಮಾವಿನ ಹಣ್ಣುಗಳು ಕಂಡು ಬರುತ್ತವೆ. ಯಾವಾಗ ಮಾವಿನ ಹಣ್ಣು ಮಾರುಕಟ್ಟೆ ಸಿಗುತ್ತೇವೆಯೋ, ಆಗ ಬೇರೆ ಹಣ್ಣಿಗಳಿಗೆ ಬೇಡಿಕೆ ಕಡಿಮೆಯಾಗಿತ್ತದೆ. ಆದ್ರೆ ಪ್ರಸಕ್ತ ಬೇಸಿಗೆಯಲ್ಲಿ ಮಾವು ಪ್ರೀಯರಿಗೆ ಕಹಿ ಸುದ್ದಿಗೆ ಎದುರಾಗಿದೆ. ಏನಾದು ಕಹಿ ಸುದ್ದಿ ಅಂತಿರಾ..ಹಾಗಿದ್ರೆ ಈ ಸ್ಟೋರಿ ನೋಡಿ. Body:ಪ್ರಕೃತಿ ಸೊಬಗಿನಲ್ಲಿ ಆಯಾ ಕಾಲಮಾನಕ್ಕೆ ತಕ್ಕಂತೆ ಹಣ್ಣುಗಳು ಫಲ ನೀಡುತ್ತೇವೆ. ವಿಶೇಷವಾಗಿ ವಸಂತ ಕಾಲ ಬಂದಾಗ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಮಾರುಕಟ್ಟೆ ಲಗ್ಗೆ ಹಾಕುತ್ತೇವೆ. ಆಗಾ ಯಾವ ಹಣ್ಣಿನ ಅಂಗಡಿಯಲ್ಲಿ ನೋಡಿದ್ರು, ಮಾವಿನ ಹಣ್ಣು ರಾರಾಜಿಸುವ ಜತೆಗೆ ಭರ್ಜರಿ ವ್ಯಾಪಾರ ಸಹ ನಡೆಯುತ್ತಿರುತ್ತದೆ. ಆದ್ರೆ ಈ ಬಾರಿ ಸತತ ಬರಗಾಲದಿಂದಾಗಿ ಬಿಸಿಲಿನ ತಾಪಮಾನ ಹೆಚ್ಚಳವಾಗಿ ಮಾವುವಿಗೆ ಸನ್ ಸ್ಟ್ರೋಕ್ ಬಿರುವ ಸಾಧ್ಯತೆ ಎದುರಾಗಿ, ಮಾವು ಪ್ರೀಯರಿಗೆ ಕಹಿ ಉಂಟು ಮಾಡಿದ್ದು, ಮಾವು ಬೆಳೆಗಾರರಿಗೆ ಆತಂಕವನ್ನ ಉಂಟು ಮಾಡಿದೆ.
ಮಾರುಕಟ್ಟೆಯಲ್ಲಿ ನಾನಾ ಬಗೆ ಹಣ್ಣುಗಳು ಸಿಗುತ್ತೇವೆ. ಆದ್ರೆ ಮಾವಿನ ಹಣ್ಣು ಮಾರುಕಟ್ಟೆ ಬಂದ್ರೆ, ಅದರ ಗಮತ್ತು ಬೇರೆಯಾಗಿರುವುದು ಸಾಮಾನ್ಯ ಯಾಕೆಂದ್ರೆ, ಆರೋಗ್ಯ ಉಪಯೋಗಿಕಾರಿಯಾಗಿರುವ ಈ ಮಾವುನ ಹಣ್ಣಿನ ರಾಜ ಎಂದೇ ಫೇಮಸ್ ಪಡೆದುಕೊಂಡಿದೆ. ಯಾವಾಗ ಮಾರುಕಟ್ಟೆಗೆ ಮಾವಿನ ಹಣ್ಣು ಎಂಟ್ರಿಯಾಗುತ್ತಾ ಆಗ ಬೇರೆ ಹಣ್ಣುಗಳ ವ್ಯಾಪಾರ ಕಡಿಮೆಯಾಗಿ, ಮಾವಿನ ಹಣ್ಣಿನ ಬೇಡಿಕೆ ಜಾಸ್ತಿಯಾಗುತ್ತದೆ. ಆದ್ರೆ ಈ ಬಾರಿ ಹೆಚ್ಚಿನ ಉಷ್ಣಾಂಶ ಕಂಡು ಬಂದಿರುವುದರಿಂದ ಮಾವಿನ ಹಣ್ಣಿ ಎಲೆಗಳಿಗೆ ಹಸಿರು ಕೀಟಾ ಮತ್ತು ಹಣ್ಣಿನೊಳಗೆ ಕೀಟಾ ತಗುಲಿಗೆ ಆರೋಗ್ಯದ ಮೇಲೆ ದುಷ್ಪಾರಿಣಮಗಳು ಬಿಳುವ ಆಂತಕ ಎದುರಾಗಿದ್ದರೆ, ಮಾವು ಬೆಳೆಗಾರರಿಗೆ ಇದ್ಯಾಂತಹ ಪರಿಸ್ಥಿತಿ ಎನ್ನುವ ಆತಂಕ ತದ್ದೊಡಿದೆ.
Conclusion:ಬಿರು ಬೇಸಿಗೆಯಿಂದ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗಿದ್ರೆ, ಇದೀಗ ಬಿರು ಬೇಸಿಗೆ ಎಫೆಕ್ಟ್ ಮಾವಿನ ಹಣ್ಣು ತಾಕಿರುವುದು ಮಾವು ಬೆಳಗಾರರಿಗೆ ನುಂಗಲಾರದ ತುತ್ತಾಗಿದ್ದು, ಮಾವಿನ ಹಣ್ಣಿನ ಪ್ರೀಯರು ಶಾಕ್ ನೀಡಿದ್ರೆ. ಏನ್ನೇ ಸಮಸ್ಯೆ ಎದುರಾದರೂ ಮಾವಿನ ಹಣ್ಣಿನ ಪ್ರೀಯರು ಮಾರುಕಟ್ಟೆಯಲ್ಲಿ ಮಾವು ಸಿಕ್ಕರೆ ತಿನ್ನುವುದು ಸಾಮಾನ್ಯ ಹೀಗಾಗಿ ಗುಣಮಟ್ಟ ಮತ್ತು ರಾಸಾಯಿಕ ಔಷಧಿ ಸಿಂಪಡಿಸದ ಹಣ್ಣುಗಳು ಸೇವಿಸದ್ರೆ ಉತ್ತಮ ಎನ್ನುವುದು ಕೃಷಿ ವಿಜ್ಞಾನ ಹೇಳುತ್ತಿದ್ದಾರೆ. ಒಟ್ನಿಲ್ಲಿ, ಬೇಸಿಗೆ ಬಿಲಿಸಿನ ಎಫೆಕ್ಟ್ ಹಣ್ಣಿನ ರಾಜ ಬಿರಿದು ಎಚ್ಚರಿಕೆಯಿಂದ ಹಣ್ಣು ಸೇವಿಸುವುದು ಉತ್ತಮವಾಗಿದೆ.
ಬೈಟ್.1: ಡಾ.ಅಜಯ್ ಕುಮಾರ, ಕೃಷಿ ಬೇಸಾಯ, ರಾಯಚೂರು ಕೃಷಿ ವಿವಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.