ETV Bharat / state

ಹಣ ತೂರಿದ್ದಕ್ಕೆ ದೂರು... ಮಂತ್ರಾಲಯ ಮಠದ ಸ್ಪಷ್ಟನೆ ಏನು?

author img

By

Published : Aug 23, 2019, 9:17 PM IST

ಸುಬುಧೇಂದ್ರ ತೀರ್ಥರ ವಿರುದ್ಧ ದೂರು

ಮಂತ್ರಾಲಯದಲ್ಲಿ 348 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆಯ ಮಹಾ ರಥೋತ್ಸವದಂದು 100 ರೂಪಾಯಿ ಮುಖ ಬೆಲೆಯ ನೋಟು ತೂರಿದ ಘಟನೆಗೆ ಸಂಬಂಧಿಸಿದಂತೆ ಶ್ರೀಮಠದ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.

ರಾಯಚೂರು: ರಾಯರ ಅಂತರಂಗದ ಭಕ್ತರೊಬ್ಬರು 100 ರೂಪಾಯಿ ನೋಟುಗಳನ್ನ ಶ್ರೀ ಸುಬುದೇಂದ್ರ ತೀರ್ಥರಿಗೆ ನೀಡಿ, ಅನುಗ್ರಹ ಸಂದೇಶ ಮುಗಿದ ಬಳಿಕ ರಥೋತ್ಸವಕ್ಕೆ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವಂತೆ ಕೋರಿದ್ದರು. ಇದನ್ನು ಶ್ರೀಗಳು ನೀಡಿದ್ದಾರಷ್ಟೆ ಎಂದು ಮಂತ್ರಾಲಯದ ರಾಘವೇಂದ್ರ ಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್‌ರಾವ್ ಸ್ಪಷ್ಟಪಡಿಸಿದ್ದಾರೆ.

ಶ್ರೀಗಳು ನೋಟ್ ನೀಡುವಾಗ ಬಹಳಷ್ಟು ಜನ ಬರುವಾಗ ಅಹಿತಕರ ಘಟನೆ ನಡೆಯುವ ಮುಂಚೆ ಅದನ್ನ ಮೊಟಕುಗೊಳಿಸಲಾಗಿತ್ತು. ರಥೋತ್ಸವಕ್ಕೆ ಭಕ್ತರು ಬಾಳೆ ಹಣ್ಣು ಎಸೆಯುವುದು, ಹಣ ಎಸೆಯುವುದು ಹಳೆ ಸಂಪ್ರದಾಯ. ಇದೇನು ಹೊಸ ಸಂಪ್ರದಾಯವಲ್ಲ, ಹಲವು ಮಠಗಳ ರಥೋತ್ಸವ ವೇಳೆ ಹಣ ನೀಡಿರುವ ಉದಾಹರಣೆ ಇದೆ. ಶ್ರೀಗಳು ಹಣ ತೂರುವಾಗ ಯಾವುದೇ ಅಹಿಕರ ಘಟನೆ ಸಹ ನಡೆದಿಲ್ಲವೆಂದು ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ನೋಟು ತೂರಿದ್ದಕ್ಕೆ ಸ್ಪಷ್ಟನೆ ನೀಡಿದ ಮಂತ್ರಾಲಯ ಮಠದ ವ್ಯವಸ್ಥಾಪಕರು

ಈ ಘಟನೆ ಸಂಬಂಧ ಮಂತ್ರಾಲಯದಲ್ಲಿ ನಡೆದ 348 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಮಹಾ ರಥೋತ್ಸವದಂದು 100 ರೂಪಾಯಿ ಮುಖಬೆಲೆಯ ನೋಟು ತೂರಿ ನೂಕು ನುಗ್ಗಲಿಗೆ ಶ್ರೀಮಠದ ಪೀಠಾಧಿಪತಿ ಕಾರಣವೆಂದು ಆರೋಪಿಸಿ ನಾರಾಯಣ ಎಂಬುವರು ಮಂತ್ರಾಲಯದಲ್ಲಿ ಪೊಲೀಸ್​ ಠಾಣೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಠದಿಂದ ಸ್ಪಷ್ಟನೆ ನೀಡಲಾಗಿದೆ.

Intro:ಮಂತ್ರಾಲಯ ಶ್ರೀಗಳ ವಿರುದ್ದ ದೂರು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೩-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ೩೪೮ನೇ ಆರಾಧನೆ ಮಹೋತ್ಸವದ ಉತ್ತರಾಧನೆ ಮಹಾರಥೋತ್ಸವದಿನದಂದು ೧೦೦ ರೂಪಾಯಿ ಮುಖ ಬೆಲೆಯ ನೋಟು ತೂರಿ ನೂಕುನುಗ್ಗಲಿಗೆ ಶ್ರೀಮಠದ ಪೀಠಧಿಪತಿ ವಿರುದ್ದ ಸ್ಥಳೀಯ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. Body:೨೦೧೯ ಆ.೧೮ರಂದು ಮಹಾರಥೋತ್ಸವದ ಮಧ್ಯಾಹ್ನ ೧ ಗಂಟೆ ವೇಳೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಥೋತ್ಸವ ಬಂದಿದ್ದ ಭಕ್ತ ಸಮೂಹ ಮಧ್ಯ ೧೦೦ ರೂಪಾಯಿ ನೋಟಗಳನ್ನ ರಥದ ಮೇಲೆ ತೂರುವ ನೂಕುನುಗ್ಗಲು ಕಾರಣವಾಗಿ, ಹೊಸ ಸಂಪ್ರದಾಯಕ್ಕೆ ನಾದಿ ಹಾಡುವ ಮೂಲಕ ಸಾವಿರಾರು ಜನಸಂಖ್ಯೆ ಇರುವ ಸ್ಥಳದಲ್ಲಿ ನೂಕುನುಗ್ಗಲಿಗೆ ಕಾರಣವಾಗಿದ್ದಾನೆಂದು ನಾರಾಯಣ ಎನ್ನುವರು ಮಂತ್ರಾಲಯ ಠಾಣೆಗೆ ದೂರು ನೀಡಿದ್ದಾರೆ. ಅಲ್ಲಿಯ ಸ್ಥಳೀಯ ಶಾಸಕ ಬಾಲನಾಗಿರೆಡ್ಡಿ ಕುಟುಂಬ ಸ್ಥಳದಲ್ಲಿದ್ದಾಗ ಕುಟುಂಬಕ್ಕೆ ನೂಕುನುಗ್ಗಲಿಗೆ ಕಾರಣವಾಗಿದ್ದಾರೆ ಎಂದು ಅಪಾದಿಸಿದ್ದಾನೆ. Conclusion: ಇನ್ನೂ ನನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದ್ರೆ ಅದಕ್ಕೆ ಶ್ರೀಗಳೆ ಕಾರಣ ಅಂತಲೂ ದೂರಿನಲ್ಲಿ ನಾರಾಯಣ ಹೇಳಿದ್ದಾನೆ. ಮಠದ ವಸತಿ ಸಮುಚ್ಚಯವೊಂದರ ನಿರ್ವಹಣೆ ಗುತ್ತಿಗೆ ಪಡೆದಿರುವ ನಾರಾಯಣ ಶ್ರೀಗಳ ವಿರುದ್ದ ದೂರು ನೀಡಿದ್ದಾನೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.