ETV Bharat / state

ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

author img

By ETV Bharat Karnataka Team

Published : Nov 14, 2023, 1:29 PM IST

cobra-rescued-in-raichuru
ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ನೀಡಿ ರಕ್ಷಣೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಅಪರೂಪದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನಗಣಿ ಹೊರವಲಯದಲ್ಲಿ ಬರುವ ಪಾಮನಕಲ್ಲೂರು ಕ್ರಾಸ್ ಬಳಿ ಇನ್ನೊವಾ ವಾಹನದಲ್ಲಿ ನಾಗರ ಹಾವು ಪತ್ತೆಯಾಗಿತ್ತು.

ಕಾರಿನಿಂದ ನಾಗರಹಾವನ್ನು ಹೊರ ತೆಗೆಯಲು ಸಾಕಷ್ಟು ಪ್ರಯತ್ನಪಡಲಾಯಿತು. ಬಳಿಕ ಹಟ್ಟಿ ಚಿನ್ನದಗಣಿ ಕಂಪನಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ, ಅರವಳಿಕೆ ತಜ್ಞ ಡಾ. ರವೀಂದ್ರನಾಥ್ ಅವರು ಹಾವು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಹಾವು ಹೊರಬರಲು ಫಿನಾಯಿಲ್ ಸಿಂಪಡನೆ ಮಾಡಲಾಗಿದೆ. ಇದರ ವಾಸನೆಗೆ ನಾಗರಹಾವು ಮೂರ್ಛೆ ತಪ್ಪಿದೆ. ಕೂಡಲೇ ವೈದ್ಯಾಧಿಕಾರಿ ಹಾಗೂ ಲಿಂಗಸುಗೂರು ಉರಗತಜ್ಞ ಖಾಲೀದ್ ಚಾವೂಸ್ ಅವರು ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಿದ್ದಾರೆ. ಇದರಿಂದ ಮೂರ್ಛೆ ಹೋಗಿದ್ದ ನಾಗಹಾವಿಗೆ ಮರು ಜೀವ ಬಂದಂತಾಗಿದೆ. ಬಳಿಕ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ.

cobra-rescued-in-raichuru
ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

ಈ ಬಗ್ಗೆ ಪ್ರತಿಕ್ರಿಯಿಸಿದ ಉರಗ ತಜ್ಞ ಖಾಲಿದ್ ಚಾವೂಸ್​, ಇನ್ನೊವಾ ಕಾರಿನಲ್ಲಿ ನಾಗರ ಹಾವು ಪತ್ತೆಯಾಗಿತ್ತು. ಈ ವೇಳೆ ಸ್ಥಳೀಯರು ಹಾವನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿಲ್ಲ. ಬಳಿಕ ಹಾವನ್ನು ಹೊರಗಡೆ ತೆಗೆಯುವ ಬಗ್ಗೆ ಸಲಹೆ ನೀಡಿದೆ. ಆದರೆ ಅವರಿಗೆ ಸಾಧ್ಯವಾಗಿಲ್ಲ. ಬಳಿಕ ಖುದ್ದಾಗಿ ಸ್ಥಳಕ್ಕೆ ಹೋಗಿ ಮೂರ್ಛೆ ಹೋಗಿದ್ದ ಹಾವನ್ನು ಸೆರೆ ಹಿಡಿದು ಪೈಪ್ ಸಹಾಯದಿಂದ ಗಾಳಿ ಊದಲಾಯಿತು. ಅದಕ್ಕೆ ಹಾವು ಸ್ಪಂದಿಸಲಿಲ್ಲ. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರ ಸಹಾಯದಿಂದ ಕೃತಕ ಆಮ್ಲಜನಕ ಪೂರೈಸಲಾಯಿತು. ಬಳಿಕ ಹಾವು ಚೇತರಿಸಿಕೊಂಡಿದ್ದು, ನಂತರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು ಎಂದು ವಿವರಿಸಿದರು.

ಇದನ್ನೂ ಓದಿ : ನೋಡಿ ನಂಗೆ ಒಂದೇ ಕಣ್ಣು.: ಕಾರವಾರದಲ್ಲಿ ಒಂದು ಕಣ್ಣಿನ ಅಪರೂಪದ ನಾಗರ ಹಾವು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.