ETV Bharat / state

ಮೈಸೂರು : ಆತ್ಮಹತ್ಯೆಯಿಂದ ವಿಮುಖನಾದ ಅನ್ನದಾತ!

author img

By

Published : Dec 15, 2020, 4:39 PM IST

suicide-case-of-farmers-decreased-in-mysore
ಮೈಸೂರಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಇಳಿಕೆ

ಕೃಷಿಯಿಂದ ಲಾಭವಿರಲಿ, ನಷ್ಟವಿರಲಿ, ಸಮಸ್ಯೆಗಳನ್ನು ಎದುರಿಸಿ ಹೆಜ್ಜೆ ಮುಂದೆ ಹಾಕುತ್ತಿರುವುದರಿಂದ ‌ಕಳೆದ ಮೂರು ವರ್ಷಗಳಲ್ಲಿ‌ ಹೋಲಿಕೆ ಮಾಡಿದ್ರೆ, ಈ ವರ್ಷ ರೈತರ ಆತ್ಮಹತ್ಯೆ ಗಣನೀಯವಾಗಿ ಕುಸಿದಿದೆ..

ಮೈಸೂರು : ಕಳೆದ ವರ್ಷಕ್ಕಿಂತ ಈ ವರ್ಷ ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗಿವೆ. 2019-20ರ ಸಾಲಿನಲ್ಲಿ ಜಿಲ್ಲೆಯಾದ್ಯಂತ 67 ಮಂದಿ ಅನ್ನದಾತರು ಆತ್ಮಹತ್ಯೆಗೆ ಶರಣಾದ್ರೆ, 2020-21ನೇ ಸಾಲಿನಲ್ಲಿ 24 ಮಂದಿ ಕೃಷಿಕರು ಆತ್ಮಹತ್ಯೆಯ ಮೂಲಕ ಜೀವನ ಕೊನೆಗಾಣಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಇಳಿಕೆ : ಕೊರೊನಾ ಹಾವಳಿಯಿಂದ ಸಾಕಷ್ಟು ಉದ್ಯಮಗಳು ನೆಲಕಚ್ಚಿವೆ. ಆದರೆ, ಮುಂಗಾರು ಹಾಗೂ ಹಿಂಗಾರು ಋತುಮಾನ ಸರಿಯಾಗಿ ರೈತರ ಕೈ ಹಿಡಿದಿದ್ದರಿಂದ, ‌ಮಳೆ ಅಭಾವ ಎದುರಾಗದೇ ಕೃಷಿಕರು ಮಂದಹಾಸ ಬೀರಿದ್ದಾರೆ.

ಕೃಷ್ಣ ಇಲಾಖೆ ಜಂಟಿ‌ ‌ನಿರ್ದೇಶಕ ಎಂ ಮಹಂತೇಶ್ವಪ್ಪ

ಓದಿ: ಸಾರಿಗೆ ನೌಕರರ ಮುಷ್ಕರ : ಮೈಸೂರು ಕೆಎಸ್​ಆರ್​ಟಿಸಿ ವಿಭಾಗಕ್ಕೆ ಕೋಟ್ಯಂತರ ರೂ. ನಷ್ಟ

ಕೃಷಿಯಿಂದ ಲಾಭವಿರಲಿ, ನಷ್ಟವಿರಲಿ, ಸಮಸ್ಯೆಗಳನ್ನು ಎದುರಿಸಿ ಹೆಜ್ಜೆ ಮುಂದೆ ಹಾಕುತ್ತಿರುವುದರಿಂದ ‌ಕಳೆದ ಮೂರು ವರ್ಷಗಳಲ್ಲಿ‌ ಹೋಲಿಕೆ ಮಾಡಿದ್ರೆ, ಈ ವರ್ಷ ರೈತರ ಆತ್ಮಹತ್ಯೆ ಗಣನೀಯವಾಗಿ ಕುಸಿದಿದೆ.

ಡಿ.31ರೊಳಗೆ ಭತ್ತ ಹಾಗೂ ರಾಗಿ ಖರೀದಿ ಕೇಂದ್ರ ಶೀಘ್ರ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ತಾಂತ್ರಿಕ ಕಾರಣ ಕೆಲ ರೈತರ ಖಾತೆಗಳಿಗೆ ಹಣ ಹೋಗಿಲ್ಲ. ರೈತರ ಸಮಸ್ಯೆ ಇತ್ಯರ್ಥ ಮಾಡುತ್ತಿವೆ ಎಂದು ಕೃಷ್ಣ ಇಲಾಖೆ ಜಂಟಿ‌ ‌ನಿರ್ದೇಶಕ ಎಂ.ಮಹಂತೇಶ್ವಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.