ETV Bharat / state

ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಸಂಪರ್ಕದಲ್ಲಿ‌ದ್ದಾರೆ : ಸಚಿವ ಶ್ರೀರಾಮುಲು

author img

By

Published : Mar 12, 2022, 2:21 PM IST

Minister B Sriramulu
ಸಚಿವ ಬಿ. ಶ್ರೀರಾಮುಲು

ಬಿಜೆಪಿಯಿಂದ ಯಾರೂ ಕಾಂಗ್ರೆಸ್​​ಗೆ ಹೋಗುವುದಿಲ್ಲ. ಕಾಂಗ್ರೆಸ್​​​ನಿಂದ ಬಿಜೆಪಿಗೆ ಬರುವ ಕೆಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದನ್ನ ಡಿ.ಕೆ.ಶಿವಕುಮಾರ್ ತಿಳಿದುಕೊಳ್ಳಲಿ..

ಮೈಸೂರು : ಪಂಚ ರಾಜ್ಯ ಚುನಾವಣೆಯ ನಂತರ ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿನ್ನೆ ಬೆಂಗಳೂರಿನಲ್ಲಿ ನನ್ನ ಜೊತೆ ಮಾತನಾಡುವಾಗ ಹೇಳುತ್ತಿದ್ದರು ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಸಂಪರ್ಕದಲ್ಲಿ‌ದ್ದಾರೆ ಅಂತಾ ಸಚಿವ ಶ್ರೀರಾಮುಲು ಹೇಳಿರುವುದು..

ಇಂದು ಮೈಸೂರು ಜಿಲ್ಲಾ ಪ್ರವಾಸದ ಹಿನ್ನೆಲೆ ನಿನ್ನೆ(ಶುಕ್ರವಾರ) ರಾತ್ರಿಯೇ ಮೈಸೂರಿಗೆ ಆಗಮಿಸಿದ ಸಚಿವರು, ಇಂದು ಬೆಳಗ್ಗೆ ಕೋಟೆ ಆಂಜನೇಯ ಸ್ವಾಮಿ ದರ್ಶನ ಪಡೆದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಯಿಂದ ಯಾರು ಕಾಂಗ್ರೆಸ್​​ಗೆ ಹೋಗುವುದಿಲ್ಲ.

ಕಾಂಗ್ರೆಸ್​​​ನಿಂದ ಬಿಜೆಪಿಗೆ ಬರುವ ಕೆಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದನ್ನ ಡಿ ಕೆ ಶಿವಕುಮಾರ್ ತಿಳಿದುಕೊಳ್ಳಲಿ. ಆಪರೇಷನ್ ಕಮಲ‌ ಮಾಡುತ್ತೇನೆ ಎಂಬುದು ಅವರ ಹಗಲುಗನಸು ಎಂದು ಟಾಂಗ್​​ ನೀಡಿದರು.

ಡಿಕೆಶಿ ಬಳ್ಳಾರಿಯಿಂದ ಆಪರೇಷನ್ ಕಮಲ‌ ಮಾಡುತ್ತೇನೆ ಎಂದು ಹೇಳುತ್ತಾರೆ. ಅವರು ನೆನಪು ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಬಿಜೆಪಿಗೆ ಬಂದಿದ್ದರಿಂದ, ಅವರ ಆಶೀರ್ವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗಲೂ ಕಾಂಗ್ರೆಸ್​​ನಿಂದ ಕೆಲವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದರು.

ಪಂಚ ರಾಜ್ಯ ಚುನಾವಣೆಯ ನಂತರ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಹಿರಿಯರಾದ ಸಂತೋಷ ಅವರು ಹೇಳಿದ ಹಾಗೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ಪಾರ್ಟ್ ಟೈಮ್ ಪಕ್ಷವಾಗಿ, ರಾಹುಲ್ ಗಾಂಧಿಯವರು ಪಾರ್ಟ್ ಟೈಮ್ ನಾಯಕರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟ ಮಾಡಿದ ಗಾಂಧೀಜಿ ಅವರು ಹೆಸರನ್ನು ಇಟ್ಟುಗೊಂಡು ಇಷ್ಟು ದಿನ ನಕಲಿ ಗಾಂಧಿಗಳು ರಾಜಕಾರಣ ಮಾಡಿದರು.

ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ಗುಜರಾತ್​​ನಲ್ಲಿಯೂ ಕಾಂಗ್ರೆಸ್ ಸೋಲುತ್ತದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಾಯಕತ್ವ ಹಾಗೂ ಸಂಪುಟ ಪುನರ್ ರಚನೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಸಿಎಂ ಆಗಿ ಬಸವರಾಜ ಬೊಮ್ಮಯಿ ಅವರೇ ಮುಂದುವರೆಯಲಿದ್ದಾರೆ. ಮುಂದಿನ ಚುನಾವಣೆಯನ್ನು ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದರು.

ಕಾಂಗ್ರೆಸ್ ನಾಯಕರಿಗೆ ನಿದ್ದೆಗೆಡಿಸುವಂತ ಬಜೆಟ್ : ಈ ಬಾರಿ ಸಿಎಂ ಬೊಮ್ಮಾಯಿ ರಾಜ್ಯಕ್ಕೆ ಒಳ್ಳೆಯ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ. ಬಡವರು, ರೈತರು, ಮಹಿಳೆಯರು, ಪರಿಶಿಷ್ಟ ಜನಾಂಗ ಹಾಗೂ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತ ಬಜೆಟ್ ಇದು. ಕಾಂಗ್ರೆಸ್ ನಾಯಕರಿಗೆ ನಿದ್ದೆಗೆಡಿಸುವಂತ ಬಜೆಟ್ ಇದು ಎಂದು ಶ್ರೀರಾಮುಲು ಹೇಳಿದರು.

ಇದನ್ನೂ ಓದಿ: ಜಿಪಂ ಚುನಾವಣೆ ಮಾಡದವರು ಅವಧಿಗೆ ಮುನ್ನವೇ ವಿಧಾನಸಭೆಗೆ ಚುನಾವಣೆ ನಡೆಸ್ತಾರಾ?: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.