ETV Bharat / state

ನಾನು ನಿಮ್ಮವ.. ನಿಮ್ಮ ಮನೆ ಮಗ; ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ವರುಣಾ ಜನತೆಗೆ ಸಿದ್ದರಾಮಯ್ಯ ಮನವಿ

author img

By

Published : May 4, 2023, 3:21 PM IST

Updated : May 4, 2023, 4:40 PM IST

Congress candidate Siddaramaiah campaigning in Rampur village
ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪ್ರಚಾರ

ಮಾಜಿ ಸಿಎಂ ಸಿದ್ದರಾಮಯ್ಯ ಇಂದು ವರುಣಾ ಕ್ಷೇತ್ರದ 12 ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪ್ರಚಾರ ನಡೆಸಿದರು.

ಮೈಸೂರು: ಒಂದು ಲಕ್ಷ ಮತಗಳ ಅಂತರದಿಂದ ನಿಮ್ಮ ಮನೆಯ ಮಗನನ್ನು ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.

ದಿನದಿಂದ ದಿನಕ್ಕೆ ವರುಣಾ ವಿಧಾನಸಭೆ ಚುನಾವಣೆ ಪ್ರಚಾರ ರಂಗು ಪಡೆಯುತ್ತಿದ್ದು, ಇಂದು ವರುಣಾದ ವಿಧಾನಸಭಾ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಚುನಾವಣೆ ಪ್ರಚಾರ ಆರಂಭಿಸಿದರು. ಮೊದಲು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದ ಅವರು, ಬಳಿಕ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಗ್ರಾಮದ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಚುನಾವಣಾ ಪ್ರಚಾರ ನಡೆಸಿ ಹೋಗಲು ಸಾಧ್ಯವಾಗುತ್ತಿಲ್ಲ ಕ್ಷಮಿಸಬೇಕು ಎಂದು ಹೇಳಿ, ಈ ಬಾರಿ ನನನಗೆ ವರುಣಾದಿಂದ ಸ್ಪರ್ಧೆ ಮಾಡಬೇಕೆಂದು ಹೈಕಮಾಂಡ್ ಹೇಳಿದ್ದು, ಅದರಂತೆ ವರುಣಾದಿಂದ ಸ್ಪರ್ಧೆ ಮಾಡಿರುವೆ ಎಂದು ತಿಳಿಸಿದರು.

ಇದು ನನ್ನ ಕೊನೆಯ ಚುನಾವಣೆ ಆಗಿದ್ದು, ವರುಣಾದಿಂದ 2008 ಹಾಗೂ 2013 ಸ್ಪರ್ಧೆ ಮಾಡಿದ್ದ ನನಗೆ ಗೆಲುವನ್ನು ಕೊಟ್ಟಿದ್ದೀರಿ. ಕ್ಷೇತ್ರದಲ್ಲಿ ಗೆಲ್ಲಿಸುವ ಮೂಲಕ ನನ್ನನ್ನು ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ಅದೇ ರೀತಿ ಈ ಬಾರಿ ಆಶೀರ್ವಾದ ಮಾಡಿದರೆ, ನನಗೆ ರಾಜಕೀಯ ದೊಡ್ಡ ಶಕ್ತಿ ಕೊಟ್ಟಂತೆ ಆಗುತ್ತದೆ ಎಂದು ಮತ್ತೆ ಸಿಎಂ ಆಗುತ್ತೇನೆ ಎಂಬ ಪರೋಕ್ಷ ಇಂಗಿತ ವ್ಯಕ್ತಪಡಿಸಿದರು.

ಹೊರಗಿನವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ: ವರುಣಾ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯ ಮರೆತು ಈ ಬಾರಿ ನನ್ನನ್ನು ಬೆಂಬಲಿಸಲಬೇಕು. ಹೊರಗಿನವರಿಂದ ಈ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ನಾನು ಅಥವಾ ನನ್ನ ಮಗ ಯತೀಂದ್ರ ಅವರಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ. ‌ಈ ಬಾರಿ ಎಲ್ಲ ಸಮುದಾಯದವರು ನನಗೆ ತಪ್ಪದೇ ಮೇ 10 ರಂದು ಮತಗಟ್ಟೆಗೆ ಹೋಗಿ ಮತ ಹಾಕಬೇಕೆಂದು ಕೋರಿದರು.

ನಿಮ್ಮಲ್ಲೇ ಬಂದು ಜಾತಿ ವಿಂಗಡಣೆ ಮಾಡುತ್ತಾರೆ. ಅವರ ಮಾತುಗಳನ್ನು ಕೇಳಬೇಡಿ. ನಾನು ನಿಮ್ಮವ, ನಿಮ್ಮ ಮನೆ ಮಗ, ನಿಮ್ಮ ಜೊತೆ ನಾನಿರುತ್ತೇನೆ. ಎಲ್ಲರೂ ಒಟ್ಟಾಗಿ ನನಗೆ ಮತದಾನ ಮಾಡಿ, ೧ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವರುಣಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

ಇಂದು ಸಿದ್ದರಾಮಯ್ಯ 12 ಗ್ರಾಮಗಳಲ್ಲಿ ಚುನಾವಣೆ ಪ್ರಚಾರ: ನಿನ್ನೆ ರಾತ್ರಿ ಸಿದ್ದರಾಮಯ್ಯ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ವರುಣಾ ಕ್ಷೇತ್ರದ ಪ್ರಮುಖ ನಾಯಕರು ಹಾಗೂ ಮೈಸೂರು ಜಿಲ್ಲೆಯ ಪ್ರಮುಖ ನಾಯಕರ ಸಭೆ ನಡೆಸಿದರು. ಬೆಳಗ್ಗೆ ವರುಣಾ ಕ್ಷೇತ್ರದ ರಾಂಪುರ, ಗೊದ್ದನಪುರ, ಮಳಲೂರು, ತಾಂಡವಪುರ, ಕೆಂಪಸಿದ್ದನಹುಂಡಿ, ಹುಳಿಮಾವು, ಹೊಸಕೋಟೆ, ಸುತ್ತೂರು, ಬಿಳಿಗೆರೆ, ನಗರ್ಲೆ ಹಾಗೂ ಮಲ್ಲೂಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮಧ್ಯಾಹ್ನದ ನಂತರ ಚುನಾವಣೆ ಪ್ರಚಾರದಲ್ಲಿ ಸಿನಿಮಾ ನಟರು ಭಾಗವಹಿಸಿದ್ದರು.

ಇದನ್ನೂಓದಿ:ಲಾಟರಿ ಇಲ್ಲದೇ ಬಹುಮಾನ ಕೊಡಲು ಕಾಂಗ್ರೆಸ್ ಮುಂದಾಗಿದೆ: ಬಿ.ವೈ.ವಿಜಯೇಂದ್ರ

Last Updated :May 4, 2023, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.