ETV Bharat / state

ಸ್ತನ ಕ್ಯಾನ್ಸರ್​​ ರೋಗಿಗಳಿಗೆ ಗುಡ್​ ನ್ಯೂಸ್​.. ಮೈಸೂರು ವಿವಿ ಪ್ರಾಧ್ಯಾಪಕರಿಂದ ಹೊಸ ಔಷಧ ಆವಿಷ್ಕಾರ

author img

By

Published : Jan 18, 2022, 5:51 PM IST

ಸ್ತನ ಕ್ಯಾನ್ಸರ್​​ಗೆ ಹೊಸ ಔಷಧ ಅಭಿವೃದ್ಧಿ ಪಡಿಸಿದ ಮೈಸೂರು ವಿವಿ ಪ್ರಾಧ್ಯಾಪಕ
ಸ್ತನ ಕ್ಯಾನ್ಸರ್​​ಗೆ ಹೊಸ ಔಷಧ ಅಭಿವೃದ್ಧಿ ಪಡಿಸಿದ ಮೈಸೂರು ವಿವಿ ಪ್ರಾಧ್ಯಾಪಕ

ಸ್ತನ ಕ್ಯಾನ್ಸರ್​​ಗೆ ಪ್ರಸ್ತುತ ಬಳಕೆಯಲ್ಲಿರುವ ಚಿಕಿತ್ಸೆಯ ವಿಧಾನಗಳೆಂದರೆ ಶಸ್ತ್ರಚಿಕಿತ್ಸೆ (ಮ್ಯಾಸ್ಟೆಕ್ಟಮಿ), ಕಿಮೋಥೆರಪಿ, ವಿಕಿರಣ ಮತ್ತು ಹಾರ್ಮೋನ್ ಥೆರಪಿ. ಹಾಗಾಗಿ ಮೈಸೂರು ವಿವಿಯ ಪ್ರಾಧ್ಯಾಪಕ ಡಾ. ಬಸಪ್ಪ ಅವರು ಹಲವು ವರ್ಷಗಳಿಂದ ಲ್ಯಾಬ್​ನಲ್ಲಿ ಪ್ರಯೋಗ ನಡೆಸಿ ಆಕ್ಸಾಡಿಯಾ ಜೋಲ್ ಆಧಾರಿತ ಪಿಎಆರ್​ಪಿ ಎಂಬ ಪ್ರತಿಬಂಧಕವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಬಸಪ್ಪ ಸ್ತನ ಕ್ಯಾನ್ಸರ್ ಹೊಸ ಔಷಧಿಯನ್ನು ಆವಿಷ್ಕಾರ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಇದಕ್ಕೆ ಪರಿಹಾರವಾಗಿ ಮೈಸೂರು ವಿವಿಯ ರಸಾಯನ ಶಾಸ್ತ್ರ ವಿಜ್ಞಾನ ವಿಭಾಗದ ಬೋಧಕರಾದ ಬಸಪ್ಪ ಅವರು ಹೊಸ ಔಷಧಿಯನ್ನು(ಡ್ರಗ್ ಲೈಕ್ ಕಾಂಪೌಂಡ್) ಅಭಿವೃದ್ಧಿ ಪಡಿಸಿದ್ದಾರೆ. ಸ್ತನ ಕ್ಯಾನ್ಸರ್‌ನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ದಶಲಕ್ಷಕ್ಕೆ ತಲುಪಿದೆ. ಈ ಭಯಾನಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 19 ದಶಲಕ್ಷದ ಗಡಿ ದಾಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.

ಈ ಕಾಯಿಲೆಗೆ ಬಳಕೆಯಲ್ಲಿರುವ ಪ್ರಸ್ತುತ ಚಿಕಿತ್ಸೆಯ ವಿಧಾನಗಳೆಂದರೆ ಶಸ್ತ್ರಚಿಕಿತ್ಸೆ (ಮ್ಯಾಸ್ಟೆಕ್ಟಮಿ), ಕಿಮೋಥೆರಪಿ, ವಿಕಿರಣ ಮತ್ತು ಹಾರ್ಮೋನ್ ಥೆರಪಿ. ಹಾಗಾಗಿ ಡಾ. ಬಸಪ್ಪ ಅವರು ಹಲವು ವರ್ಷಗಳಿಂದ ತಮ್ಮ ಪ್ರಯೋಗಲಾದಲ್ಲಿ ಪ್ರಯೋಗ ನಡೆಸಿ ಆಕ್ಸಾಡಿಯಾ ಜೋಲ್ ಆಧಾರಿತ ಪಿಎಆರ್​ಪಿ ಎಂಬ ಪ್ರತಿಬಂಧಕವನ್ನ ಅಭಿವೃದ್ಧಿ ಪಡಿಸಿದ್ದಾರೆ. ಇದು ಸ್ತನ ಕ್ಯಾನ್ಸರ್​ಗೆ ಪ್ರಸ್ತುತದಲ್ಲಿ ಇರುವ ಒಲಾಪರಿಬ್ ಔಷಧಿಗಿಂತ ಎರಡು ಪಟ್ಟು ಅಧಿಕ ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ‌ ಎಂದು ಡಾ. ಬಸಪ್ಪ ಅವರು ತಿಳಿಸಿದ್ದಾರೆ.

ಚೀನಾದ ಶಿಂಗ್ಹಾವ್ ಬರ್ಕಿ ಶೆನೈನ್ ಇನ್ಸ್ಟಿಟ್ಯೂಟ್ ನ ಪ್ರೊ. ಪೀಟರ್ ಇ ಲೋಬಿ ಅವರ ಸಹಯೋಗದಲ್ಲಿ ಮತ್ತು ಮೈಸೂರು ವಿವಿ‌ಯ ಪ್ರಯೋಗಾಲದಲ್ಲಿ ಈ ಸಂಶೋಧನೆಯನ್ನು ಪ್ರಯೋಗ ಮಾಡಿದ್ದೇವೆ. ಇದು ಸ್ತನ ಕ್ಯಾನ್ಸರ್​ಗೆ ಹೊಸ ಔಷಧ. ಅದರ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ:ಮೈಸೂರಿನ ಈ ಮಹಿಳೆ ತಾನು ಸತ್ತ ಮೇಲೂ ಬದುಕುತ್ತಿದ್ದಾಳೆ.. ಅದ್ಹೇಗೆ ಅಂತೀರಾ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.