ETV Bharat / state

ಕರಾರು ಪತ್ರದೊಂದಿಗೆ ಚುನಾವಣಾ ​ಬೆಟ್ಟಿಂಗ್: 5 ಲಕ್ಷ ರೂಪಾಯಿ ಪೊಲೀಸ್​ ವಶಕ್ಕೆ

author img

By

Published : May 12, 2023, 8:39 PM IST

Election Betting Contract on Document Sheet in Mysuru
ಡಾಕ್ಯುಮೆಂಟ್ ಶೀಟ್‌ನಲ್ಲಿ ಎಲೆಕ್ಷನ್​ ಬೆಟ್ಟಿಂಗ್: 5 ಲಕ್ಷ ರೂಪಾಯಿ ಪೊಲೀಸ್​ ವಶಕ್ಕೆ

ಮೈಸೂರಿನ ಹೆಚ್​ಡಿ ಕೋಟೆಯಲ್ಲಿ ಎಲೆಕ್ಷನ್ ಬೆಟ್ಟಿಂಗ್ ಕಟ್ಟಿದ್ದ ಐದು ಲಕ್ಷ ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದೆ. ಕಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. ಮತ್ತೊಂದೆಡೆ, ಸೋಲು ಗೆಲುವಿನ ಬಗ್ಗೆ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಕೂಡ ಹೆಚ್ಚಾಗಿದೆ. ಇದರ ನಡುವೆ ಮೈಸೂರಿನ ಹೆಚ್​ಡಿ ಕೋಟೆಯಲ್ಲಿ ಬೆಟ್ಟಿಂಗ್ ಕಟ್ಟಿದ್ದ ಐದು ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಹೆಚ್​ಡಿ ಕೋಟೆಯಲ್ಲಿ ಇಬ್ಬರು ವ್ಯಕ್ತಿಗಳು ತಲಾ ಐದು ಲಕ್ಷ ರೂಪಾಯಿ ಬೆಟ್ಟಿಂಗ್​ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್, ''ಎಂತಹ ದಿಟ್ಟತನ!! ಡಾಕ್ಯುಮೆಂಟ್ ಶೀಟ್‌ನಲ್ಲಿ ಚುನಾವಣಾ ಬೆಟ್ಟಿಂಗ್ ಒಪ್ಪಂದ ಮಾಡಿಕೊಳ್ಳಲಾಗಿದೆ'' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ''ಈ ಪ್ರಕರಣದಲ್ಲಿ 5 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಬೆಟ್ಟಿಂಗ್​ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಎಚ್ಚರಿಸಿದ್ದಾರೆ.

  • What an audacity!!

    Election Betting Contract on Document Sheet

    Rs 5 lakh seized

    Beware!!

    Stringent action will be taken against such elements pic.twitter.com/oDmwLB4cB5

    — alok kumar (@alokkumar6994) May 12, 2023 " class="align-text-top noRightClick twitterSection" data=" ">

ಕರಾರು ಪತ್ರದಲ್ಲಿ ಏನಿದೆ ? : ತಮ್ಮ ಟ್ವೀಟ್​ನಲ್ಲಿ ಬೆಟ್ಟಿಂಗ್​ ಕುರಿತ ಜಪ್ತಿ ಮಾಡಿದ ಹಣ ಹಾಗೂ ಡಾಕ್ಯುಮೆಂಟ್ ಶೀಟ್​​ನ್ನು ಅಲೋಕ್ ಕುಮಾರ್ ಹಂಚಿಕೊಂಡಿದ್ದಾರೆ. ''ಹೆಗ್ಗಡದೇವನಕೋಟೆ ತಾಲೂಕಿನ ಕಸಬಾ ಹೋಬಳಿಯ ಜಯರಾಮ ನಾಯಕ ಮತ್ತು ಬಿಕೆ ಶಿವರಾಜು, ಅಂತರಸಂತೆ ಹೋಬಳಿಯ ಪ್ರಕಾಶ ಸೇರಿಕೊಂಡು ಎಲೆಕ್ಷನ್​ ಬೆಟ್ಟಿಂಗ್​ ಕಟ್ಟಿಕೊಂಡಿದ್ದರು. ಜಯರಾಮ ನಾಯಕ ಕಾಂಗ್ರೆಸ್​ ಪರವಾಗಿ ಐದು ಲಕ್ಷ ಹಾಗೂ ಪ್ರಕಾಶ, ಶಿವರಾಜು ಇಬ್ಬರು ಸೇರಿಕೊಂಡು ಜೆಡಿಎಸ್​ ಪರವಾಗಿ 5 ಲಕ್ಷ ರೂಪಾಯಿ ಬಾಜಿ ಕಟ್ಟಿದ್ದಾರೆ. ಈ ಹಣವನ್ನು ಎಲೆಕ್ಟ್ರಿಕಲ್​ ಅಂಗಡಿಯೊಂದರ ಮಾಲೀಕರ ಹತ್ತಿರ ಇಟ್ಟಿದ್ದು, ಗೆದ್ದ ವ್ಯಕ್ತಿಗಳು ಆ ಹಣವನ್ನು ಪಡೆಯಬಹುದಾಗಿದೆ. ಒಂದು ವೇಳೆ ಬಿಜೆಪಿ ಗೆಲುವು ಸಾಧಿಸಿದರೆ, ಅವರವರ ಹಣವನ್ನೇ ಅವರುಗಳೇ ಪಡೆಯಲು ಒಪ್ಪಿರುತ್ತಾರೆ'' ಎಂದು ಕರಾರು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಹೊನ್ನಾಳಿಯಲ್ಲಿ ಗೆಲುವಿನ ಬಗ್ಗೆ 2 ಎಕರೆ ಜಮೀನು ಬಾಜಿ... ತಮಟೆ ಬಾರಿಸಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.