ETV Bharat / state

ಜಂಬೂಸವಾರಿ ಸ್ಥಬ್ದ ಚಿತ್ರದಲ್ಲಿ ಮೋದಿ ಆಕಾಂಕ್ಷೆಯ 6 ಯೋಜನೆಗಳ ಅನಾವರಣ, 'ನೆರೆ' ಹೊರೆಯ ಮೇಲೂ ಬೆಳಕು

author img

By

Published : Oct 4, 2019, 5:17 PM IST

Updated : Oct 4, 2019, 5:23 PM IST

ಜಿಲ್ಲಾವಾರು ಸ್ತಬ್ಧಚಿತ್ರದ ಮಾಹಿತಿ

ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟು 39 ಸ್ತಬ್ಧಚಿತ್ರಗಳು ಈ ಬಾರಿ ಮೆರವಣಿಗೆಯಲ್ಲಿ ಹೊರಡಲಿವೆ.

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟು 39 ಸ್ತಬ್ಧಚಿತ್ರಗಳು ಈ ಬಾರಿ ಮೆರವಣಿಗೆಯಲ್ಲಿ ಹೊರಡಲಿವೆ.

ಜಿಲ್ಲಾ ಪಂಚಾಯತ್‍ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಬ್ದಚಿತ್ರ ಉಪಸಮಿತಿಯ ಅಧ್ಯಕ್ಷ ಮುರುಳಿ, ಕಳೆದ ಬಾರಿಗಿಂತ ಈ ಬಾರಿ ವಿಶೇಷವಾದ ಸ್ತಬ್ಧಚಿತ್ರಗಳು ಮೂಡಿ ಬರಲಿವೆ. ಅಂಬಾರಿ ಮೆರವಣಿಗೆಗೆ ಯಾವುದೇ ಅಡಚಣೆಯಾಗಬಾರದು ಎಂಬ ದೃಷ್ಟಿಯಿಂದ ಈ ಬಾರಿ 39 ಸ್ಥಬ್ಧಚಿತ್ರಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.

ವಿಶೇಷವಾಗಿ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ, ಪರಿಸರ, ಅರಣ್ಯೀಕರಣ, ಅಂತರ್ಜಲ, ನೆರೆ-ಬರ, ಚಂದ್ರಯಾನ, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುವ ಸ್ಥಬ್ಧಚಿತ್ರಗಳು ನಗರದ ಎಪಿಎಂಸಿ ಆವರಣದಲ್ಲಿ ತಯಾರಾಗುತ್ತಿವೆ. ಕಲಾವಿದರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾವಾರು ಸ್ಥಬ್ಧಚಿತ್ರಗಳ ಮಾಹಿತಿ :

  1. ಬೆಳಗಾವಿ - ಪ್ರವಾಹದಿಂದ ನಲುಗಿದ ಬೆಳಗಾವಿ
  2. ಬಾಗಲಕೋಟೆ - ಅತಿವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು
  3. ಧಾರವಾಡ - ಸಾಂಸ್ಕೃತಿಕ ವೈಭವ
  4. ಹಾವೇರಿ - ಶಂಖನಾದ ಮೊಳಗಿಸುತ್ತಿರುವ ಕನಕದಾಸರು
  5. ಗದಗ - ಬೇಟಿ ಪಡಾವೋ, ಬೇಟಿ ಬಚಾವೋ
  6. ಉತ್ತರ ಕನ್ನಡ - ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ
  7. ವಿಜಯಪುರ - ವಚನ ಪಿತಾಮಹ ಫ.ಹು ಹಳಕಟ್ಟಿ
  8. ಬೆಂಗಳೂರು ನಗರ - ಚಂದ್ರಯಾನ-2
  9. ಬೆಂಗಳೂರು ಗ್ರಾಮಾಂತರ - ಸ್ವಚ್ಛತೆ ಕಡೆಗೆ ನಮ್ಮ ನಡಿಗೆ
  10. ಚಿತ್ರದುರ್ಗ - ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು
  11. ದಾವಣಗೆರೆ - ಏರ್​ಸ್ಟ್ರೈಕ್
  12. ಕೋಲಾರ - ಅಂತರಗಂಗೆ
  13. ಶಿವಮೊಗ್ಗ - ಫಿಟ್ ಇಂಡಿಯಾ
  14. ತುಮಕೂರು - ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು
  15. ರಾಮನಗರ - ಮಳೂರು ಅಂಬೆಗಾಲು ಕೃಷ್ಣ
  16. ಚಿಕ್ಕಬಳ್ಳಾಪುರ - ರೇಷ್ಮೆ ಮತ್ತು ಹೆಚ್.ನರಸಿಂಹಯ್ಯ
  17. ಕಲಬುರಗಿ - ಆಯುಷ್ಮಾನ್ ಭಾರತ್
  18. ಬಳ್ಳಾರಿ - ಹಂಪಿ ವಾಸ್ತುಶಿಲ್ಪ ಕಲಾ ವೈಭವ
  19. ಬೀದರ್ - ಫಸಲ್ ಭೀಮಾ ಯೋಜನೆ
  20. ಕೊಪ್ಪಳ - ಗವಿಸಿದ್ದೇಶ್ವರ ಬೆಟ್ಟ
  21. ರಾಯಚೂರು - ಗೂಗಲ್ ಬ್ರಿಡ್ಜ್, ಪ್ರಧಾನಮಂತ್ರಿ ಸಿಂಚಾಯಿ ಹಾಗೂ ನರೆಗಾ ಯೋಜನೆ
  22. ಯಾದಗಿರಿ - ಅಂಬಿಗರ ಚೌಡಯ್ಯ
  23. ಮೈಸೂರು - ಚಾಮರಾಜ ಒಡೆಯರ್ ಅವರ 100 ನೇ ವರ್ಷದ ಸಾಧನೆ
  24. ಚಾಮರಾಜನಗರ - ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ
  25. ಚಿಕ್ಕಮಗಳೂರು - ಶಿಶಿಲಬೆಟ್ಟ
  26. ದಕ್ಷಿಣ ಕನ್ನಡ - ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ
  27. ಹಾಸನ - ಎತ್ತಿನಹೊಳೆ ಯೋಜನೆ
  28. ಕೊಡಗು - ಗುಡ್ಡ ಕುಸಿತ ಜಾಗೃತಿ ಮೂಡಿಸುವ ಕುರಿತು
  29. ಮಂಡ್ಯ - ಶ್ರೀಆದಿ ಚುಂಚನಗಿರಿ ಮಠ, ಉಡುಪಿ ಕೃಷ್ಣ ಮಠದ ಗೋಪುರ
  30. ದಸರಾ ಉಪಸಮಿತಿ - ಆನೆ ಬಂಡಿ, ಜೆಎಸ್​ಎಸ್​ ಮಠ, ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ
  31. ವಾರ್ತಾ ಇಲಾಖೆ - ಸರ್ಕಾರದ ಸೌಲಭ್ಯಗಳ ಮಾಹಿತಿ
  32. ಕಾವೇರಿ ನೀರಾವರಿ ನಿಗಮ - ನೀರಾವರಿ ನಿಗಮದ ಕುರಿತು ಮಾಹಿತಿ
  33. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ
  34. ಪ್ರವಾಸೋದ್ಯಮ ಇಲಾಖೆ - ನಿಮ್ಮ ಸಾಹಸಗಾಥೆ ನೀವೇ ರಚಿಸಿ
  35. ಮೈಸೂರು ವಿಶ್ವವಿದ್ಯಾನಿಲಯ - ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು
Intro:ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟು 39 ಸ್ತಬ್ಧಚಿತ್ರಗಳು ಈ ಬಾರಿ ಮೆರವಣಿಗೆಯಲ್ಲಿ ಹೊರಡಲಿವೆ.
Body:


ಜಿಲ್ಲಾ ಪಂಚಾಯತ್‍ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುರುಳಿ,
ಈ ಬಾರಿ ಕಳೆದ ಬಾರಿಗಿಂತ ವಿಶೇಷವಾದ ಸ್ತಬ್ಧಚಿತ್ರಗಳು ಮೂಡಿ ಬರಲಿದ್ದು, ಅಂಬಾರಿ ಮೆರವಣಿಗೆಗೆ ಯಾವದೇ ಅಡಚಣೆಯಾಗಬಾರದು ಎಂಬ ದೃಷ್ಠಿಯಿಂದ ಈ ಬಾರಿ 39 ಸ್ಥಬ್ಧಚಿತ್ರಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ವಿಶೇಷವಾಗಿ ಐತಿಹಾಸಿಕ ಹಿನ್ನಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕøತಿ, ಪರಿಸರ, ಅರಣ್ಯೀಕರಣ, ಅಂತರ್ಜಲ, ನೆರೆ-ಬರ, ಚಂದ್ರಯಾನ, ಸಂವಿಧಾನ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುವ ಸ್ಥಬ್ಧಚಿತ್ರಗಳು ನಗರದ ಎ.ಪಿ.ಎಂ.ಸಿ ಆವರಣದಲ್ಲಿ ತಯಾರಾಗುತ್ತಿದ್ದು, ಬಂದಂತಹ ಕಲಾವಿದರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ, ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಳೆಯಿಂದ ತುಂಬಾ ಹಾನಿಯಾಗಿದ್ದು, ಅದೇ ರೀತಿ ಮಳೆ ಬಾರದೆ ಬರದಿಂದ ರೈತರು ಕಂಗೆಟ್ಟಿದ್ದು, ಅವುಗಳನ್ನು ಸಹಾ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಉತ್ತಮವಾದ ಸ್ತಬ್ಧಚಿತ್ರ ತಯಾರಿಸಲಾಗುತ್ತಿದೆ. ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಖøತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಕಾವೇರಿ ನೀರಾವರಿ ನಿಗಮದ ವತಿಯಿಂದಲೂ ಆಯಾ ಇಲಾಖೆಗಳ ಮಾಹಿತಿ ನೀಡುವ ಸ್ತಬ್ಧಚಿತ್ರಗಳು ಮೂಡಿಬರುತ್ತಿವೆ ಎಂದು ತಿಳಿಸಿದರು.
ಜಿಲ್ಲಾವಾರು ಸ್ಥಬ್ಧಚಿತ್ರಗಳ ಮಾಹಿತಿ ಇಂತಿದೆ.
ಬೆಳಗಾಂ-ಅತೀವೃಷ್ಠಿ ಪ್ರವಾಹದಿಂದ ನಲುಗಿದ ಬೆಳಗಾವಿ, ಬಾಗಲಕೋಟೆ-ಅತೀವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು, ಧಾರವಾಡ-ಸಾಂಸ್ಕøತಿಕ ವೈಭವ, ಹಾವೇರಿ-ಶಂಖನಾದ ಮೊಳಗಿಸುತ್ತಿರುವ ಕನಕದಾಸರು, ಗದಗ-ಭೇಟಿ ಪಡವೋ ಭೇಟಿ ಬಚಾವೋ, ಉತ್ತರ ಕನ್ನಡ-ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ, ವಿಜಯಪುರ-ವಚನ ಪಿತಾಮಹ ಫ.ಹು ಹಳಕಟ್ಟಿ, ಬೆಂಗಳೂರು ನಗರ-ಚಂದ್ರಯಾನ-2, ಬೆಂಗಳೂರು ಗ್ರಾಮಾಂತರ-ಸ್ವಚ್ಛತ ಕಡೆಗೆ ನಮ್ಮ ನಡಿಗೆ, ಚಿತ್ರದುರ್ಗಾ-ಹೆಣ್ಣು ಬ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು, ದಾವಣಗೆರೆ-ಏರ್‍ಸ್ಟ್ರೈಕ್, ಕೋಲಾರ-ಅಂತರಗಂಗೆ, ಶಿವಮೊಗ್ಗ-ಫಿಟ್ ಇಂಡಿಯಾ, ತುಮಕೂರು-ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು, ರಾಮನಗರ-ಮಳೂರು ಅಂಬೆಗಾಲು ಕೃಷ್ಣ, ಚಿಕ್ಕಬಳ್ಳಾಪುರ-ರೇಷ್ಮೆ ಮತ್ತು ಹೆಚ್ ನರಸಿಂಹಯ್ಯ, ಗುಲ್ಬರ್ಗಾ-ಆಯುಷ್ಮಾನ್ ಭಾರತ್, ಬಳ್ಳಾರಿ-ಹಂಪಿ ವಾಸ್ತುಶಿಲ್ಪ ಕಲಾ ವೈಭವ, ಬೀದರ್-ಫಸಲ್ ಭೀಮಾ ಯೋಜನೆ, ಕೊಪ್ಪಳ-ಗವಿಸಿದ್ದೇಶ್ವರ ಬೆಟ್ಟ, ರಾಯಚೂರು-ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾಯೋಜನೆ, ಯಾದಗಿರಿ-ಅಂಬಿಗರ ಚೌಡಯ್ಯ, ಮೈಸೂರು-ಚಾಮರಾಜ ಒಡೆಯರ್ ಅವರ 100 ನೇ ವರ್ಷದ ಸಾಧನೆ, ಚಾಮರಾಜನಗರ-ಸಮೃದ್ದಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ, ಚಿಕ್ಕಮಗಳೂರು-ಶಿಶಿಲಬೆಟ್ಟ, ದಕ್ಷಿಣ ಕನ್ನಡ-ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ, ಹಾಸನ-ಎತ್ತಿನಹೊಳೆ ಯೋಜನೆ, ಕೊಡಗು-ಗುಡ್ಡ ಕುಸಿತ ಜಾಗೃತಿ ಮೂಡಿಸುವ ಬಗ್ಗೆ, ಮಂಡ್ಯ-ಶ್ರೀ ಆದಿ ಚುಂಚನಗಿರಿ ಮಠ, ಉಡುಕೃಷ್ಣ ಮಠದ ಗೋಪುರ, ದಸರಾ ಉಪ ಸಮಿತಿ-ಆನೆ ಬಂಡಿ, ಜೆ.ಎಸ್.ಎಸ್ ಮಠ, ವಾರ್ತಾ ಇಲಾಖೆ-ಸರ್ಕಾರ ಸೌಲಭ್ಯಗಳ ಮಾಹಿತಿ, ದಸರಾ ಉಪ ಸಮಿತಿ-ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ, ಜಿಲ್ಲಾಡಳಿತ ಸಾಮಾಜಿಕ ನ್ಯಾಯ, ಕಾವೇರಿ ನೀರಾವರಿ ನಿಗಮ-ನೀರಾವರಿ ನಿಗಮ ಮಾಹಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ, ಪ್ರವಾಸೋದ್ಯಮ ಇಲಾಖೆ-ನಿಮ್ಮ ಸಾಹಸಗಾಥೆ ನೀವೇ ರಚಿಸಿ, ಮೈಸೂರು ವಿಶ್ವವಿದ್ಯಾನಿಲಯ-ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳನ್ನು ಬಿಂಬಿಸುವ ಭಾವಚಿತ್ರಗಳು ಈ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು,
ಜಿಲ್ಲಾವಾರು ಸ್ಥಬ್ಧಚಿತ್ರಗಳು ಅಂತಿಮ ಹಂತದ ತಯಾರಿ ನಡೆಸುತ್ತಿವೆ ಎಂದು ಸ್ಥಬ್ದಚಿತ್ರ ಉಪಸಮಿತಿಯ ಅಧ್ಯಕ್ಷ ಸು.ಮುರುಳಿ ಮಾಹಿತಿ ನೀಡಿದರು.Conclusion:
Last Updated :Oct 4, 2019, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.