ETV Bharat / state

ಬಸನಗೌಡ ಪಾಟೀಲ್​​ ನಮಗೆ ವಿರೋಧ ಪಕ್ಷ ಆಗಿದ್ದಾರೆ : ಶಾಸಕ ಶಿವರಾಜ ಪಾಟೀಲ್

author img

By

Published : Jul 10, 2021, 7:23 PM IST

mla-shivaraj-patil
ಶಾಸಕ ಶಿವರಾಜ ಪಾಟೀಲ್

ಯಡಿಯೂರಪ್ಪ ಅವರನ್ನು ಒಬ್ಬಿಬ್ಬರು ವಿರೋಧಿಸಿದರೆ ಅವರನ್ನು ಸಿಎಂ ಸ್ಥಾನದಿಂದ ತೆಗೆಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬೆಳೆದು ಬಲಿಷ್ಠವಾಗಲು ಹಾಗೂ ಬಿಜೆಪಿ ಸರ್ಕಾರ ರಚನೆಯಾಗಲು ಯಡಿಯೂರಪ್ಪ ಕಾರಣ‌‌. ಯಾರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲವೋ ಅವರು ರಾಜೀನಾಮೆ ಕೊಡುವುದು ಒಳಿತು‌..

ಕೊಪ್ಪಳ : ನಮಗೆ ಯತ್ನಾಳ್ ಅವರೇ ಕಾಂಗ್ರೆಸ್ ಪಾರ್ಟಿಯಾಗಿ ಬಿಟ್ಟಿದ್ದಾರೆ ಎಂದು ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಹೇಳಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್​​ನವರು ಸುಮ್ಮನಿದ್ದಾರೆ. ನಮಗೆ ಯತ್ನಾಳ್ ಒಬ್ಬರೇ ಕಾಂಗ್ರೆಸ್, ಜೆಡಿಎಸ್ ಆಗಿ ಬಿಟ್ಟಿದ್ದಾರೆ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರವನ್ನು ಹೊಗಳುತ್ತಿದ್ದಾರೆ‌. ಆದರೆ, ಯತ್ನಾಳ್ ಅವರು ಮಾತ್ರ ಇಬ್ಬರು ಮೂವರಾಗಿ ವಿರೋಧ ಪಕ್ಷವಾಗಿ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲಿ‌. ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಮಾತ್ರಕ್ಕೆ ಲೀಡರ್ ಆಗುವುದಿಲ್ಲ ಎಂದರು.

ಬಸನಗೌಡ ಪಾಟೀಲ್​​ ನಮಗೆ ವಿರೋಧ ಪಕ್ಷ ಆಗಿದ್ದಾರೆ: ಶಾಸಕ ಶಿವರಾಜ ಪಾಟೀಲ್

ಯಡಿಯೂರಪ್ಪ ಅವರನ್ನು ಒಬ್ಬಿಬ್ಬರು ವಿರೋಧಿಸಿದರೆ ಅವರನ್ನು ಸಿಎಂ ಸ್ಥಾನದಿಂದ ತೆಗೆಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬೆಳೆದು ಬಲಿಷ್ಠವಾಗಲು ಹಾಗೂ ಬಿಜೆಪಿ ಸರ್ಕಾರ ರಚನೆಯಾಗಲು ಯಡಿಯೂರಪ್ಪ ಕಾರಣ‌‌. ಯಾರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲವೋ ಅವರು ರಾಜೀನಾಮೆ ಕೊಡುವುದು ಒಳಿತು‌.

ಇದನ್ನು ನಾವು ಶೀಘ್ರದಲ್ಲೇ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನೀವು ಮಾತನಾಡುವುದಿದ್ದರೆ ಸರ್ಕಾರದಿಂದ ಹೊರ ಬಂದು ಮಾತನಾಡಿ. ನೀವೆಲ್ಲ ಉಂಡ ಮನೆಗೆ ಬೆಂಕಿ ಇಡುವ ವ್ಯಕ್ತಿಗಳು ಎಂದು ಆಕ್ರೋಶ ಹೊರ ಹಾಕಿದರು.

ಓದಿ: ಅವರ ಪರ ಇವರು, ಇವರ ಪರ ಅವರು : ಹೆಚ್​ಡಿಕೆ, ಸುಮಲತಾ ಬೆಂಬಲಿಗರಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.