ETV Bharat / state

ಜೆಡಿಎಸ್​ಗೆ ಮತ ಹಾಕಿದ್ರೆ ಕಾಂಗ್ರೆಸ್​ಗೆ, ಕಾಂಗ್ರೆಸ್​​ಗೆ ಹಾಕಿದ್ರೆ ಪಿಎಫ್​ಐಗೆ ಮತ ಹಾಕಿದಂತೆ: ನಡ್ಡಾ

author img

By

Published : May 5, 2023, 9:25 PM IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

ಕಾಂಗ್ರೆಸ್​ ಪಕ್ಷದವರು ರಾಮನ ಬಂಟ ಹನುಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

ಕೊಪ್ಪಳ: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ನೀವು ಜೆಡಿಎಸ್​ಗೆ ವೋಟು ಹಾಕಿದರೆ ಕಾಂಗ್ರೆಸ್​ಗೆ, ಕಾಂಗ್ರೆಸ್ಸಿಗೆ ವೋಟು ಹಾಕಿದರೆ ಪಿಎಫ್​ಐಗೆ ಹೋಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ. ಯಲಬುರ್ಗಾ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಕುಕನೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದವರು ಈ ಹಿಂದೆ ಶ್ರೀರಾಮನ ಬಗ್ಗೆ, ಈಗ ರಾಮನ ಬಂಟ ಹನುಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇದನ್ನ ನಾವು ಸಹಿಸುವುದಿಲ್ಲ ಎಂದರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪಿಎಫ್​ಐ ಸಂಘಟನೆಯ 175 ಜನರ ಮೇಲಿದ್ದ ಕೇಸ್ ವಾಪಸ್​ ತೆಗೆದರು. ಆದರೆ, ದೇಶ ಭಕ್ತರ ಮೇಲೆ ಪ್ರಕರಣ ದಾಖಲಾದಾಗ ವಾಪಸ್ ತೆಗೆಯುವ ಮನಸ್ಸು ಮಾಡಲಿಲ್ಲ. ಈ ಮೂಲಕ ನೀವು ತಿಳಿದುಕೊಳ್ಳಿ. ಕಾಂಗ್ರೆಸ್ ಪಕ್ಷದವರ ಮನಸ್ಥಿತಿ ಎಂತಹದ್ದು ಎಂದು. ಚುನಾವಣೆ ಬಂದಿದೆ ವಿಚಾರ ಮಾಡಿ ಮತ ನೀಡಿ ಎಂದು ತಿಳಿಸಿದರು.

ಕೊಪ್ಪಳದ ಈ ಭೂಮಿಯು ಅರ್ಜುನ ಪಾಶು ಪತಾಸ್ತ್ರ ಸ್ವೀಕರಿಸಿದ ಸ್ಥಳ. ಇಂತಹ ಸ್ಥಳದಲ್ಲಿ ಕಾಂಗ್ರೆಸ್ ಪಕ್ಷ ರಾಮ ಹಾಗೂ ಹನುಮನ ಬಗ್ಗೆ ಪ್ರಶ್ನೆ ಮಾಡುತ್ತಿದೆ. ಈ ಚುನಾವಣೆ ಕೇವಲ ಹಾಲಪ್ಪ ಆಚಾರ್​​, ಗೋವಿಂದ ಕಾರಜೋಳ ಅಥವಾ ಜೆ ಪಿ ನಡ್ಡಾ ಅವರನ್ನು ಗೆಲ್ಲಿಸುವ ಚುನಾವಣೆ ಅಲ್ಲ. ಜನರ ಭವಿಷ್ಯದ ಚುನಾವಣೆಯಾಗಿದೆ. ಈ ದೇಶದ ಭವಿಷ್ಯ ಕೂಡಾ ನೀವು ಹಾಕುವ ಮತದ ಮೇಲೆ ನಿರ್ಣಯವಾಗುತ್ತದೆ. ಹಾಗಾಗಿ ನೀವೆಲ್ಲಾ ಬಿಜೆಪಿಗೆ ಮತ ನೀಡಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಬೆಂಬಲಿಸಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

ಕಳೆದ ಹಲವು ವರ್ಷಗಳ ಹಿಂದೆ ಭಾರತ ಭ್ರಷ್ಟಾಚಾರ ದೇಶವಾಗಿತ್ತು. 9 ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಭಾರತ ಜಗತ್ತಿನಲ್ಲಿ‌ ಮುದ್ರೆ ಒತ್ತುವಂತಹ ದೇಶವಾಗಿದೆ. ಕೊರೊನಾ ಮಹಾಮಾರಿ ಒಕ್ಕರಿಸಿದ ಸಂದರ್ಭದಲ್ಲಿ ಅಮೆರಿಕ, ರಷ್ಯಾದಲ್ಲಿ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. ಆದರೆ ಭಾರತದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಭಾರತ ಈಗ ಮುಂದುವರಿದ ದೇಶವಾಗಿದೆ. ಡಬಲ್ ಇಂಜಿನ್​ ಸರ್ಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ದಿಯಾಗಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದೆ. ಅವರ ಅವಧಿಯಲ್ಲಿ ಯಾವ ಸಮುದಾಯಕ್ಕೂ ಮೀಸಲಾತಿ ನೀಡಲಿಲ್ಲ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಆದರೆ, ಧರ್ಮಾಧಾರಿತ ಮೀಸಲಾತಿ ತೆಗೆಯಲಾಗಿದೆ. ಆದರೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​ ಮೀಸಲಾತಿ ವಾಪಸ್​ ತರುತ್ತೇವೆ ಎನ್ನುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರುವುದಿಲ್ಲ. ಇನ್ನೆಲ್ಲಿ ಮೀಸಲಾತಿ ವಾಪಾಸ್ ಜಾರಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ಹಗರಣವಾಗಿದೆ. ಸ್ಟೀಲ್ ಫ್ಲೈ ಓವರ್​ನಲ್ಲಿ ಹಗರಣವಾಗಿದೆ. ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯಲ್ಲಿ ಹಗರಣವಾಗಿದೆ. ಬಿಬಿಎಂಪಿಯಲ್ಲಿ, ಕೊಳವೆ ಬಾವಿಯಲ್ಲಿ ಹಗರಣವಾಗಿದೆ. ಇಷ್ಟೆಲ್ಲ ಹಗರಣಗಳನ್ನ ಮಾಡಿ ಅವರು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಯಾವ ನೈತಿಕತೆಯೂ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರಾದ ಡಿ ಕೆ ಶಿವಕುಮಾರ್​, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೇಲ್ ಮೇಲೆ ಹೊರಗಿದ್ದಾರೆ. ಬೇಲ್ ಮೇಲೆ ಇದ್ದವರಿಗೆ ಮತ ನೀಡಬೇಡಿ ಎಂದು ಕರೆ ನೀಡಿದರು.

ಇದನ್ನೂ ಓದಿ : ನಟರಾದ ದುನಿಯಾ ವಿಜಯ್, ಯೋಗಿ ಜೊತೆಗೆ ಅಬ್ಬರದ ಪ್ರಚಾರ ನಡೆಸಿದ ಸಿದ್ದರಾಮಯ್ಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.