ETV Bharat / state

ಬಿಎಸ್​ವೈ ಶಿವಮೊಗ್ಗಕ್ಕೆ ಮಾತ್ರ ಸಿಎಂ, ಟಿಬಿ ಡ್ಯಾಂ ಸಮಸ್ಯೆ ಏಕೆ ಬಗೆಹರಿಸ್ತಿಲ್ಲ: ತಂಗಡಗಿ ಪ್ರಶ್ನೆ

author img

By

Published : Aug 16, 2019, 5:16 PM IST

ಶಿವರಾಜ್ ತಂಗಡಗಿ

ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್​ನಲ್ಲಿ ಸಮಸ್ಯೆ ಉದ್ಭವಿಸಿ ನಾಲ್ಕು ದಿನಗಳಾದ್ರೂ ಸಿಎಂ ಸಮಸ್ಯೆ ಬಗೆಹರಿಸುತ್ತಿಲ್ಲ. ಯಡಿಯೂರಪ್ಪ ಅವರು ಕೇವಲ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್​ನಲ್ಲಿ ಸಮಸ್ಯೆ ಉದ್ಭವಿಸಿ ನಾಲ್ಕು ದಿನಗಳಾದ್ರೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಲ್ಲಿಗೆ ಯಾಕೆ ಬರುತ್ತಿಲ್ಲ. ಮಾನಸಪುತ್ರ ಎಂದು ಕರೆಸಿಕೊಳ್ಳುತ್ತಿರುವವರು ಯಾಕೆ ಅವರನ್ನು ಇಲ್ಲಿಗೆ ಕರೆತರುತ್ತಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನಿಸಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ ಗೇಟ್ ಸಮಸ್ಯೆ ಕುರಿತು ಶಿವರಾಜ್ ತಂಗಡಗಿ ಪ್ರತಿಕ್ರಿಯೆ

ಮುನಿರಾಬಾದ್​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಕ್ಯಾಟ್​ ವಾಕ್​ ಮಾಡುವ ರೀತಿಯಲ್ಲಿ ಘಟನಾ ಸ್ಥಳಕ್ಕೆ ಬಂದು ಮಾತನಾಡಿ ಹೋಗುತ್ತಿದ್ದಾರೆ. ಅಧಿಕಾರವಿದ್ದವರು ಸಂಬಂಧಿಸಿದವರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಆದರೆ ಅವರು ಆ ಕೆಲಸ ಮಾಡುತ್ತಿಲ್ಲ. ಕೇವಲ 30 ಕ್ಯೂಸೆಕ್ ನೀರು ಹರಿಯುವ ಈ ನಾಲೆಯ ರಂದ್ರವನ್ನು ಇವರ ಕೈಯಿಂದ ನಾಲ್ಕು ದಿನವಾದರೂ ಬಂದ್ ಮಾಡಲಾಗುತ್ತಿಲ್ಲ. ಇದೇನು ದೊಡ್ಡ ಸಮಸ್ಯೆಯೇ?, ಸರ್ಕಾರ ಏನು ಮಾಡುತ್ತಿದೆ?, ಸುಮ್ಮನೆ ಮಂತ್ರಿಮಂಡಲ ರಚನೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಎಡದಂಡೆ ನಾಲೆಯ ರೈತರ ಸಂಕಷ್ಟ ಇವರಿಗೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಬಗ್ಗೆ ತೋರಿಸುವ ಗಂಭೀರತೆಯನ್ನು ಸರ್ಕಾರ ತುಂಗಭದ್ರೆಗೆ ತೋರಿಸುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಪ್ರವಾಹ ಹಿನ್ನೆಲೆಯಲ್ಲಿ 50 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಈ ಭಾಗಕ್ಕೆ ಏನೂ ಘೋಷಣೆ ಮಾಡಿಲ್ಲ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿ ಎಂದು ಆರೋಪಿಸಿದರು.

Intro:


Body:ಕೊಪ್ಪಳ:- ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಸಮಸ್ಯೆ ಉದ್ಭವಿಸಿ ನಾಲ್ಕು ದಿನಗಳಾದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲಿಗೆ ಯಾಕೆ ಬರುತ್ತಿಲ್ಲ. ಯಡಿಯೂರಪ್ಪ ಅವರ ಮಾನಸಪುತ್ರ ಎಂದು ಕರೆಸಿಕೊಳ್ಳುತ್ತಿರುವವರು ಯಾಕೆ ಅವರನ್ನು ಕರೆತರುತ್ತಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನಿಸಿದ್ದಾರೆ. ತಾಲೂಕಿನ ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಕ್ಯಾಟ್ವಾಕ್ ಮಾಡುವ ರೀತಿಯಲ್ಲಿ ಘಟನಾ ಸ್ಥಳಕ್ಕೆ ಬಂದು ಕೇವಲ ಬರೀ ಮಾತನಾಡಿ ಹೋಗುತ್ತಿದ್ದಾರೆ. ಅಧಿಕಾರವಿದ್ದವರು ಸಂಬಂಧಿಸಿದವರ ಸಭೆ ನಡೆಸಿ ಸಮಸ್ಯೆಯನ್ನು ಸರಿಪಡಿಸಬಹುದಿತ್ತು. ಆದರೆ ಅವರು ಆ ಕೆಲಸ ಮಾಡುತ್ತಿಲ್ಲ. ಕೇವಲ 30 ಕ್ಯೂಸೆಕ್ ನೀರು ಹರಿಯುವ ಈ ನಾಲೆಯ ಹೋಲನ್ನು ಇವರ ಕೈಯಿಂದ ನಾಲ್ಕು ದಿನವಾದರೂ ಬಂದ್ ಮಾಡಲಾಗುತ್ತಿಲ್ಲ. ಇದೇನು ದೊಡ್ಡ ಸಮಸ್ಯೆ ಸಮಸ್ಯೆಯೆ? ಸರ್ಕಾರ ಏನು ಮಾಡುತ್ತಿದೆ? ಬರೀ ಮಂತ್ರಿಮಂಡಲ ರಚನೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಎಡದಂಡೆ ನಾಲೆಯ ರೈತರ ಸಂಕಷ್ಟ ಇವರಿಗೆ ಗೊತ್ತಾಗುತ್ತಿಲ್ಲ. ಕಾವೇರಿ ಬಗ್ಗೆ ತೋರಿಸುವ ಗಂಭೀರತೆಯನ್ನು ಸರ್ಕಾರ ತುಂಗಭದ್ರೆಗೆ ತೋರಿಸುತ್ತಿಲ್ಲ. ಇಲ್ಲಾಗಿರುವ ಸಮಸ್ಯೆಯ ಬಗ್ಗೆ ಸರ್ಕಾರ ಈವರೆಗೂ ತಲೆಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಪ್ರವಾಹ ಹಿನ್ನೆಲೆಯಲ್ಲಿ 50 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಈ ಭಾಗಕ್ಕೆ ಏನೂ ಘೋಷಣೆ ಮಾಡಿಲ್ಲ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಯಡಿಯೂರಪ್ಪ ಕೇವಲ ಶಿವಮೊಗ್ಗಕ್ಕೆ ಸೀಮಿತವಾಗಿರುವ ಸಿಎಂ. ತಕ್ಷಣವೇ ಸಿಎಂ ಯಡಿಯೂರಪ್ಪ ಇಲ್ಲಿಗೆ ಬರಬೇಕು. ಇಲ್ಲಿಗೆ ಬಂದರೆ ತಂತ್ರಜ್ಞರು ತಕ್ಷಣ ಬರುತ್ತಾರೆ. ಆಗ ಸಮಸ್ಯೆ ಪರಿಹಾರ ಆಗುತ್ತದೆ. ಈ ಭಾಗದ ಶಾಸಕರು, ಸಂಸದರು ಸಿಎಂ ಅವರನ್ನು ಕರೆದುಕೊಂಡು ಬರಬೇಕು ಎಂದು ಶಿವರಾಜ ತಂಗಡಗಿ ಆಗ್ರಹಿಸಿದರು. ಇನ್ನು ಎಡದಂಡೆ ನಾಲೆಗೆ ನೀರು ಯಾವಾಗ ಬರುತ್ತದೆ ಎಂದು ರೈತರು ಕಾಯುತ್ತಾ ಕುಳಿತಿದ್ದಾರೆ. ಸಿಎಂ ಆಗಿ ಎಂದು, ಮಂತ್ರಿಮಂಡಲ ಸೇರಲು ಯಡಿಯೂರಪ್ಪ ಬಳಿ ಹೋಗಿ ವಿಶ್ ಮಾಡಲು ಬರುತ್ತದೆ. ಆದರೆ ಆಗಿರುವ ಸಮಸ್ಯೆ ಬಗ್ಗೆ ಸಿಎಂಗೆ ವಿವರಿಸಿ ಅವರನ್ನು ಕರೆದುಕೊಂಡು ಬರಲು ಇವರಿಗೆ ಆಗುತ್ತಿಲ್ಲ ಎಂದು ಟಾಂಗ್ ನೀಡಿದರು. ಎಲ್ಲಾ ಕಡೆ ಹೋಗ್ತಾರೆ, ಇಲ್ಲಿಗೆ ಯಾಕೆ ಬರುತ್ತಿಲ್ಲ. ಇಲ್ಲಿಗೆ ಬರೋಕೆ ಯಡಿಯೂರಪ್ಪ ಅವರಿಗೆ ಏನು ಸಮಸ್ಯೆ? ಈ ಧೋರಣೆ ಇದೇ ರೀತಿ ಮುಂದುವರೆದರೆ ನಾವು ಒಂದು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.

ಬೈಟ್1:- ಶಿವರಾಜ ತಂಗಡಗಿ, ಮಾಜಿ ಸಚಿವ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.