ETV Bharat / state

Tomato: ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಕುಸಿತ

author img

By

Published : Aug 4, 2023, 9:25 PM IST

ಕೋಲಾರ ಎಪಿಎಂಸಿ ಮಾರುಕಟ್ಟೆ
ಕೋಲಾರ ಎಪಿಎಂಸಿ ಮಾರುಕಟ್ಟೆ

Tomato: ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿಢೀರ್ ಕುಸಿತ ಕಂಡಿದೆ.

ಟೊಮೆಟೊ ಬೆಲೆ ಕುಸಿತ

ಕೋಲಾರ : ಟೊಮೆಟೊ ಜಿಲ್ಲೆಯ ರೈತರ ಪಾಲಿಗೆ ಜೂಜಾಟದ ಬೆಳೆಯಾಗಿದೆ. ಯಾಕೆಂದರೆ ಇಲ್ಲಿ ಬೆಳೆ ಇದ್ದಾಗ ಬೆಲೆ ಇರಲ್ಲ, ಬೆಲೆ ಬಂದಾಗ ಬೆಳೆಯೇ ಬರಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಮೊನ್ನೆ ಇದ್ದ ಟೊಮೆಟೊ ಬೆಲೆ ಇದೀಗ ಕುಸಿತವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕಳೆದೊಂದು ತಿಂಗಳಿನಿಂದ ಎಪಿಎಂಸಿ ಮಾರುಕಟ್ಟೆ ಷೇರು ಮಾರುಕಟ್ಟೆಯಂತಾಗಿತ್ತು. ರೈತರು, ವ್ಯಾಪಾರಿಗಳಿಗೆ ಹೂಡಿಕೆಯ ಕೇಂದ್ರವಾಗಿ ಪರಿಣಮಿಸಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ.

ಸದ್ಯ 15 ಕೆಜಿಯ ಟೊಮೆಟೊ ಬಾಕ್ಸ್ ಬೆಲೆ ಕೇವಲ 1,500 ರೂಪಾಯಿಗೆ ಮಾರಾಟವಾಗುತ್ತಿದೆ. ಟೊಮೆಟೊ ಬೆಳೆಯನ್ನು ಇತ್ತೀಚಿನ ದಿನಗಳ ಬೆಲೆಗೆ ಹೋಲಿಕೆ ಮಾಡಿದ್ರೆ 800ರಿಂದ 900 ರೂಪಾಯಿ ಕಡಿಮೆಯಾಗಿದೆ. ಸದ್ಯ ಎಪಿಎಂಸಿಗೆ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಚಿತ್ರದುರ್ಗ, ಚಳ್ಳಕೆರೆ ಕೆಲ ಜಿಲ್ಲೆಗಳಿಂದಲೂ ಟೊಮೆಟೊ ಬರುತ್ತಿದೆ. ಹೀಗಾಗಿ ಬೆಲೆಯೂ ಇಳಿಮುಖವಾಗುತ್ತಿದೆ.

ಉತ್ತರ ಭಾರತದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿದ್ದ ಕಾರಣ ಕೋಲಾರದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊಗೆ ಭಾರಿ ಬೇಡಿಕೆ ಬಂದಿತ್ತು‌. ಆಗ ಹೊರ ರಾಜ್ಯದಿಂದಲೂ ವ್ಯಾಪಾರಸ್ಥರು ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಬಂದು ಖರೀದಿಸುತ್ತಿದ್ದರು. ಆದರೆ, ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ನಾಸಿಕ್‌ನಲ್ಲೂ ಟೊಮೆಟೊ ಹೆಚ್ಚಾಗಿ ಆವಕವಾಗಿದೆ. ಹೊರ ರಾಜ್ಯದ ಖರೀದಿದಾರರ ಸಂಖ್ಯೆಯೂ ಕುಸಿಯುತ್ತಿದೆ. ಇದರ ಪರಿಣಾಮ ಟೊಮೆಟೊ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಇವೆಲ್ಲದರ ಮಧ್ಯೆ ಕೋಲಾರ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಟೊಮೆಟೊ ಬೆಳೆಯಲು ಮುಂದಾಗಿರುವುದರಿಂದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ಪೂರೈಕೆಯಾಗುತ್ತಿದೆ. ಬೆಲೆ ಕುಸಿಯಲು ದೂ ಕರಣವಾಗಿದೆ.

ಇದೀಗ ವ್ಯಾಪಾರಿಗಳು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಇತ್ತೀಚಿನವರೆಗೂ ತನ್ನ ಹವಾ ಮುಂದುವರೆಸಿದ್ದ 'ಕಿಚನ್ ಕ್ವೀನ್'ಗೆ ಆಟಕ್ಕೀಗ ಬ್ರೇಕ್ ಬಿದ್ದಂತಾಗಿದೆ. ರೈತರು ಬೆಲೆ ನೋಡಿಕೊಂಡು ಟೊಮೆಟೊ ಜೊತೆಗೆ ಪರ್ಯಾಯ ಬೆಳೆಗಳನ್ನು ಹಾಕಿಕೊಂಡಾಗ ಬೆಲೆ ಕಡಿಮೆಯಾದ್ರೂ ಕೊಂಚ ಸುಧಾರಿಸಿಕೊಳ್ಳಬಹುದು. ಇಲ್ಲವಾದಲ್ಲಿ ನಷ್ಟದ ಹಾದಿ ತುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ರೈತರ ಮಾತು.

ಸ್ಥಳೀಯ ಚಾಂದ್ ಪಾಷಾ ಮಾತನಾಡಿ, ''ಉತ್ತರ ಭಾರತದ ನಾಸಿಕ್ ಕಡೆ ಕಡಿಮೆ ಮಳೆಯಾಗಿದೆ. ಹೀಗಾಗಿ ಅಲ್ಲಿಂದಲೂ ಟೊಮೊಟೊ ಬರುತ್ತಿದೆ. ಹೀಗಾಗಿ ಬೆಲೆ ಕುಸಿತವಾಗಿದೆ. 800 ರೂ. ರಿಂದ 900 ಕ್ಕೆ ಕಡಿತವಾಗಿದೆ. ಇವತ್ತು 800 ರೂ. ಯಿಂದ 1400 ವರೆಗೂ ಹೋಗಿದೆ. ಇದಕ್ಕೂ ಮುನ್ನ 2,400ವರೆಗೂ ಬೆಲೆ ಇತ್ತು. ಇನ್ನು ಮುಂದೆ ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ಸುಮಾರು 25 ದಿನ ಉತ್ತಮ ಬೆಲೆ ಇತ್ತು" ಎಂದರು.

ಇದನ್ನೂ ಓದಿ: ಗಗನಕ್ಕೇರಿದ ಟೊಮೆಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು.. ನಿಂಬೆಗೂ ಭಾರೀ ಡಿಮ್ಯಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.