ETV Bharat / state

5 ಕೆಜಿ ಅಕ್ಕಿಯೊಂದಿಗೆ 340 ರೂ. ಜನರ ಅಕೌಂಟ್​ಗಳಿಗೆ ಹಾಕಬೇಕು: ಸಂಸದ ಎಸ್ ಮುನಿಸ್ವಾಮಿ

author img

By

Published : Jun 29, 2023, 5:42 PM IST

ಸಂಸದ ಎಸ್ ಮುನಿಸ್ವಾಮಿ
ಸಂಸದ ಎಸ್ ಮುನಿಸ್ವಾಮಿ

ಸಿದ್ದರಾಮಯ್ಯ ಅವರು ಬಿಟ್ಟಿ ಭಾಗ್ಯಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಂಸದ ಎಸ್ ಮುನಿಸ್ವಾಮಿ ಅವರು ಆರೋಪಿಸಿದ್ದಾರೆ.

ಸಂಸದ ಎಸ್ ಮುನಿಸ್ವಾಮಿ

ಕೋಲಾರ: 5 ಕೆಜಿ ಅಕ್ಕಿಯೊಂದಿಗೆ 170 ರೂಪಾಯಿ ಕೊಡುವುದಲ್ಲ, 5 ಕೆಜಿ ಅಕ್ಕಿಯೊಂದಿಗೆ 340 ರೂಪಾಯಿ ಜನರ ಅಕೌಂಟ್​ಗಳಿಗೆ ಹಾಕಬೇಕೆಂದು ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈ‌ ಹಿಂದೆಯೂ ಮುಖ್ಯಮಂತ್ರಿಗಳಾಗಿದ್ರು, ಈಗಲೂ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ತುಂಬಾ ಬುದ್ಧಿವಂತರು ಎಂದು ನಾನು ತಿಳಿದಿದ್ದೆ. ಆದರೆ ಕಾಂಗ್ರೆಸ್​ನ ಪ್ರಣಾಳಿಕೆಗಳನ್ನ ಕಾಂಗ್ರೆಸ್​ ಪಕ್ಷ ಜಾರಿ ಮಾಡಬೇಕು. ಅದು ಬಿಟ್ಟು ಬಿಜೆಪಿ ಅವರು ಮಾಡಲು ಆಗುವುದಿಲ್ಲ ಎಂದರು. ಅಲ್ಲದೆ ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲಾ ಅವರನ್ನ ಕೇಳಿ ನೀವು ನಿರ್ಧಾರ ಮಾಡಿರುವುದು. ಮೋದಿ ಅವರನ್ನ ಕೇಳಿ ನಿರ್ಧಾರ ಮಾಡಿಲ್ಲ. ಮೋದಿ ಅವರು ನಿಮಗೆ ಮಾತು ಕೊಟ್ಟಿಲ್ಲ ಎಂದರು.

ಇನ್ನು ಸಿದ್ದರಾಮಯ್ಯ ಅವರು ಬಿಟ್ಟಿ ಭಾಗ್ಯಗಳನ್ನು ಹೇಳಿ‌ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಅವರ ಮೇಲೆ ಗೂಬೆ ಕೂರಿಸಿ ಇವರ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇನ್ನು ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಕೆಲ ಸರ್ಕಾರಗಳು ಉಚಿತ ಎಂದು ಕೊಟ್ಟು ಅಧೋಗತಿಗೆ ಹೋಗಿವೆ. ನಿಮ್ಮ ಆಸ್ತಿ ಎಷ್ಟಿತ್ತೊ ಅಷ್ಟೇ ಕಾಲು ಚಾಚಬೇಕಿತ್ತು ಎಂದು ಹೇಳಿದ್ರು.

ಭ್ರಷ್ಟಾಚಾರದ ಪಿತಾಮಹ ಎಂದರೆ ಅದು ಕಾಂಗ್ರೆಸ್: ಬಿಜೆಪಿಯವರ 40% ಕಮಿಷನ್ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ತನಿಖೆಯೊಂದಿಗೆ ಕಾಂಗ್ರೆಸ್​​ ಸರ್ಕಾರ ಇದ್ದಾಗ ವಾಚ್ ಕೊಟ್ಟದ್ದು, ವಿಧಾನಸೌಧದಲ್ಲಿ ಹಣ ಸಿಕ್ಕಿದ್ದು, ಅರ್ಕಾವತಿ ಹಗರಣ ಎಲ್ಲವನ್ನ ತನಿಖೆ ಮಾಡಲಿ, ಭ್ರಷ್ಟಾಚಾರದ ಪಿತಾಮಹ ಎಂದರೆ ಅದು ಕಾಂಗ್ರೆಸ್​ ಎಂದು ಹೇಳಿದ್ರು. ಅಲ್ಲದೆ 40% ಕಮಿಷನ್ ಎಂದು ಬಿಜೆಪಿಯವರ ಮೇಲೆ ಕಾಂಗ್ರೆಸ್​ನವರು ಆರೋಪಿಸುತ್ತಿದ್ದರು. ಆದರೆ 60% ಕಮಿಷನ್ ಕಾಂಗ್ರೆಸ್​ ಆಗಿದೆ ಎಂದು ಕೆಲ ಕಾಂಟ್ರಾಕ್ಟರ್​ಗಳೇ ಹೇಳುತ್ತಿದ್ದಾರೆ ಎಂದರು. ಜೊತೆಗೆ 60% ಕಮಿಷನ್ ತೆಗೆದುಕೊಳ್ಳೋದಕ್ಕೆ ಸುರ್ಜೇವಾಲ ಕರೆದು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ನೀವು ಸತ್ಯ ಹರಿಶ್ಚಂದ್ರರ ತುಂಡಲ್ಲ ಎಂದು ಹೇಳಿದ್ರು.

ಕಾಂಗ್ರೆಸ್​ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಕ್ಕೆ ಕೋಲಾರದಲ್ಲಿ ನಿಷ್ಟಾವಂತರಾಗಿ ಡಿಸಿ, ಸಿಇಓ ಕೆಲಸ ಮಾಡ್ತಿದ್ರು. ಅವರೆಲ್ಲರನ್ನ ವರ್ಗಾವಣೆ ಮಾಡಿದ್ದಾರೆ. ಒಂದು ಸ್ಥಾನಕ್ಕೆ‌ ನಾಲ್ಕು ಜನರ ಹೆಸರನ್ನ ಪ್ರಸ್ತಾಪಿಸುವ ಮೂಲಕ ಪೋಸ್ಟಿಂಗ್​ಗೆ ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್​ ಸರ್ಕಾರಕ್ಕೆ ಆಯುಷ್ಯ ಇಲ್ಲ: ಇನ್ನು ಪ್ರತಿಯೊಂದು ಇಲಾಖೆಯಲ್ಲೂ ವರ್ಗಾವಣೆ ಮಾಡಿ ಅವರಿಂದ ದುಡ್ಡು ಮಾಡಿಕೊಳ್ಳಲು ಕಾಂಗ್ರೆಸ್​ ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​ ಸರ್ಕಾರಕ್ಕೆ ಆಯುಷ್ಯ ಇಲ್ಲ. ಜನ ಕಾಂಗ್ರೆಸ್​ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ರು. ಇನ್ನು ಒಂದು ದೇಶ ಒಂದು ಕಾನೂನು ವಿಚಾರಕ್ಕೆ ಸಂಬಂಧಿಸಿದಂತೆ, ಇಸ್ಲಾಮಿಕ್ ಸಂಘಟನೆಯನ್ನು ಹಾಗೂ ಕಾಂಗ್ರೆಸ್​ ಪಕ್ಷವನ್ನು ಕೇಳಿಕೊಂಡು ಕಾನೂನು ತರುವ ಸ್ಥಿತಿಯಲ್ಲಿ ನಾವಿಲ್ಲ. ದೇಶಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಅವರವರ ಪ್ರತಿಕ್ರಿಯೆ ತಿಳಿಸಿ ಎಂದು ಮೋದಿ ಹೇಳಿದ್ದಾರೆ ಎಂದರು.

ಇನ್ನು ಅವರವರ ಅನಿಸಿಕೆಗಳನ್ನ ತಿಳಿಸುವುದಕ್ಕೆ ಮೋದಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಸಲಹೆಗಳನ್ನ ನೋಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ರು. ಜೊತೆಗೆ ಕಾಂಗ್ರೆಸ್​ ಪಕ್ಷ, ಇಸ್ಲಾಮಿಕ್ ಸಂಘಟನೆಗಳನ್ನ ಕೇಳುವಂತಹ ಪರಿಸ್ಥಿತಿ ನಮಗೆ ಇಲ್ಲ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ಇದನ್ನೂ ಓದಿ: Guarantee scheme: ಗೃಹಜ್ಯೋತಿ, ಗೃಹಲಕ್ಷ್ಮಿ ಹೆಸರಲ್ಲಿ ಜನರಿಗೆ ಮೋಸದ ಆರೋಪ.. ಬಳ್ಳಾರಿಯಲ್ಲಿ ಓರ್ವ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.