ETV Bharat / state

ಕೋಲಾರ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

author img

By ETV Bharat Karnataka Team

Published : Aug 27, 2023, 10:00 AM IST

Updated : Aug 27, 2023, 10:19 AM IST

ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ಕೋಪಗೊಂಡ ತಂದೆ ಸ್ವಂತ ಮಗಳನ್ನೇ ಕೊಲೆಗೈದು, ಅಂತ್ಯಸಂಸ್ಕಾರ ಮಾಡಿದ್ದಾನೆ.

A father killed his own daughter in kolar
ಕೋಲಾರದಲ್ಲಿ ಮರ್ಯಾದಾ ಹತ್ಯೆ

ಯುವತಿಯ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು

ಕೋಲಾರ : ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕೊಲೆಗೈದ ಪ್ರಕರಣ ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರಮ್ಯಾ (19) ಕೊಲೆಯಾದ ಯುವತಿ. ತಂದೆ ವೆಂಕಟೇಶಗೌಡ ಕೊಲೆ ಆರೋಪಿ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಪ್ರಕರಣದ ಹಿನ್ನೆಲೆ: ಅನ್ಯಜಾತಿಯ ಯುವಕನನ್ನು ಮಗಳು ಪ್ರೀತಿಸುತ್ತಿರುವ ಮಾಹಿತಿ ಸಿಕ್ಕ ಕೂಡಲೇ ಕುಟುಂಬಸ್ಥರು ಬುದ್ಧಿ ಹೇಳಿದ್ದಾರೆ. ಆದರೆ ರಮ್ಯಾ ಹೆತ್ತವರ ಮತು ಕೇಳಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಆಗಸ್ಟ್‌ 25ರಂದು ಮಗಳನ್ನು ಹತ್ಯೆ ಮಾಡಿದ್ದಾನೆ. ಯಾರಿಗೂ ತಿಳಿಯದಂತೆ ಕುಟುಂಬಸ್ಥರು ಅಂತ್ಯಸಂಸ್ಕಾರ ಮುಗಿಸಿದ್ದರು. ಈ ಕುರಿತು ಊರಿನಲ್ಲಿ ಗುಸುಗುಸು ಮಾತು ಶುರುವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ವೆಂಕಟೇಶಗೌಡನನ್ನು ಕರೆದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ತಹಶೀಲ್ದಾರ್ ಹರ್ಷವರ್ಧನ್ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳಾದ ವೆಂಕಟೇಶಗೌಡ, ಮೋಹನ್, ಚೌಡೇಗೌಡ ಎಂಬವರನ್ನು ಬಂಧಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮರ್ಯಾದಾ ಹತ್ಯೆ : ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ

ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವತಿ ಹತ್ಯೆ: ಯುವಕನೊಂದಿಗೆ ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಯುವತಿಯನ್ನು ಕುಟುಂಬಸ್ಥರೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸರಾಯ್​ ಅಕಿಲ್ ಪ್ರದೇಶದಲ್ಲಿ ನಡೆದಿದೆ.

ನಿನ್ನೆ ಪ್ರಕರಣ ಬೆಳಕಿಗೆ ಬಂದಿದ್ದು, ಇದೊಂದು ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಕೇಸ್​ಗೆ ಸಂಬಂಧಿಸಿದಂತೆ ಹತ್ಯೆಯಾದ ಯುವತಿಯ ತಂದೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮನ್ರಾಖಾನ್ ಮತ್ತು ಇಬ್ಬರು ಸಹೋದರರಾದ ಘನಶ್ಯಾಮ್ ಮತ್ತು ರಾಧೇಶ್ಯಾಮ್ ಬಂಧಿತರು.

ಇದನ್ನೂ ಓದಿ : Honor Killing : ಮದುವೆ ಆಗಿ ಎರಡು ವರ್ಷದ ಬಳಿಕ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣಂದಿರು.. ಬೆಚ್ಚಿಬೀಳಿಸಿದ ಮರ್ಯಾದಾ ಹತ್ಯೆ!

ಸರಾಯ್‌ ಅಕಿಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ತಮ್ಮದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಮೊಬೈಲ್​ನಲ್ಲಿ ಮಾತನಾಡುತ್ತಿದ್ದರು. ಆದರೆ, ಯುವಕ ಬೇರೆ ಸಮುದಾಯಕ್ಕೆ ಸೇರಿದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹಾಗೆಯೇ, ಉತ್ತರಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಧಾನ ಗ್ರಾಮದಲ್ಲಿ ಇಂತಹದೇ ಘಟನೆಯೊಂದು ಕಳೆದ ಜೂನ್​ ತಿಂಗಳಿನಲ್ಲಿ ನಡೆದಿತ್ತು. ಪ್ರೇಮ ವಿವಾಹವಾದಳೆಂದು ಅಣ್ಣನೇ ಸಹೋದರಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ಅಲಿಪುರ್ ಅಟೆರ್ನಾ ಗ್ರಾಮದ ನಿವಾಸಿ ಜಮ್‌ಶೆಡ್ ಪಠಾಣ್ ಅವರ ಮಗಳು ಫರ್ಹಾನಾ ಮೃತ ಯುವತಿ.

ಇದನ್ನೂ ಓದಿ : Honor Killing : ಪ್ರಿಯಕರನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವತಿ.. ಕುಟುಂಬಸ್ಥರಿಂದ ಮರ್ಯಾದಾ ಹತ್ಯೆ

Last Updated : Aug 27, 2023, 10:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.