ETV Bharat / bharat

Honor Killing: ಮದುವೆ ಆಗಿ ಎರಡು ವರ್ಷದ ಬಳಿಕ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣಂದಿರು.. ಬೆಚ್ಚಿಬೀಳಿಸಿದ ಮರ್ಯಾದಾ ಹತ್ಯೆ!

author img

By

Published : Jun 29, 2023, 1:20 PM IST

ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಹೋದರಿ ಪ್ರೇಮ ವಿವಾಹ ಆಗಿದ್ದಾಳೆಂದು ಸಹೋದರ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಮುಜಾಫರ್​ನಗರ ಜಿಲ್ಲೆಯಲ್ಲಿ ನಡೆದಿದೆ.

Farhana Murder Case  Murder of Woman in Muzaffarnagar  Kotwali Budhana Muzaffarnagar  Brothers shot sister in Muzaffarnagar  ಮರ್ಯಾದ ಹತ್ಯೆ  ಎರಡು ವರ್ಷದ ಬಳಿಕ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣಂದಿರು  ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆ  ಸಹೋದರಿ ಪ್ರೇಮ ವಿವಾಹ  ಸಹೋದರ ಗುಂಡಿಟ್ಟು ಕೊಲೆ ಮಾಡಿರುವ ಘಟನೆ  ಬುಧಾನ ಗ್ರಾಮದಲ್ಲಿ ಮರ್ಯಾದ್ಯ ಹತ್ಯೆ  ಅಲಿಪುರ್ ಅಟೆರ್ನಾ ಗ್ರಾಮದ ನಿವಾಸಿ  ಮೃತದೇಹವನ್ನು ಮರಣೋತ್ತರ ಪರೀಕ್ಷೆ
ಮದುವೆ ಆಗಿ ಎರಡು ವರ್ಷದ ಬಳಿಕ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣಂದಿರು

ಮುಜಾಫರ್‌ನಗರ (ಉತ್ತರಪ್ರದೇಶ): ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಸಹೋದರಿ ಪ್ರೇಮ ವಿವಾಹವಾಗಿದ್ದಾಳೆಂದು ಅಣ್ಣನೊಬ್ಬ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಬುಧಾನ ಗ್ರಾಮದಲ್ಲಿ ನಡೆದಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮುಜಾಫರ್‌ನಗರದ ಬುಧಾನ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಸಹೋದರರೇ ತಂಗಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ತಂಗಿಯ ತಪ್ಪೇನೆಂದರೆ ಆಕೆ ತನ್ನ ಇಷ್ಟದ ಹುಡುಗನ ಜೊತೆ ಪ್ರೇಮ ವಿವಾಹ ಆಗಿದ್ದರು. ಸಿಒ ವಿನೋದ್ ಗೌತಮ್ ಮಾತನಾಡಿ, ಫರ್ಹಾನಾ ಅವರ ಪತಿ ಶಾಹಿದ್ ಈ ಪ್ರಕರಣದಲ್ಲಿ 10 ಜನರ ಮೇಲೆ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಮೂಲಕ ಆರೋಪಿಗಳ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಲಿಪುರ್ ಅಟೆರ್ನಾ ಗ್ರಾಮದ ನಿವಾಸಿ ಜಮ್‌ಶೆಡ್ ಪಠಾಣ್ ಅವರ ಮಗಳು ಫರ್ಹಾನಾ ಮತ್ತು ಶಾಹಿದ್ ನಡುವೆ ಪ್ರೇಮ ಸಂಬಂಧವಿತ್ತು. ಅವರಿಬ್ಬರ ಪ್ರೇಮಕ್ಕೆ ಫರ್ಹಾನಾ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಕುಟುಬಂಸ್ಥರು ಫರ್ಹಾನಾನ ಮನವೊಲಿಸಲು ಪ್ರಯತ್ನಿಸಿದರು. ಆದರೆ ಫರ್ಹಾನಾ ಕುಟುಂಬಸ್ಥರ ಮಾತನ್ನು ಕಡೆಗಣಿಸಿ ಶಾಹಿದ್​ ಅವರನ್ನು ಮದುವೆ ಮಾಡಿಕೊಂಡಿದ್ದರು. ಅವರ ಮದುವೆ 2021 ರ ಆಗಸ್ಟ್ 6 ರಂದು ನ್ಯಾಯಾಲಯದಲ್ಲಿ ನಡೆದಿತ್ತು.

ಇನ್ನು ಸಹೋದರಿಯ ಪ್ರೇಮ ವಿವಾಹದಿಂದ ಫರ್ಹಾನಾ ಕುಟುಂಬದ ಸದಸ್ಯರು ಅತೃಪ್ತರಾಗಿದ್ದರು. ಮದುವೆಯ ನಂತರ ಫರ್ಹಾನಾ ಮತ್ತು ಶಾಹಿದ್​ ಗ್ರಾಮವನ್ನು ತೊರೆದು ಮುಜಾಫರ್​ನಗರದಲ್ಲಿ ವಾಸಿಸುತ್ತಿದ್ದರು. ಇನ್ನು ಜೂನ್ 7 ರಂದು ಫರ್ಹಾನಾ ಪತಿ ಶಾಹಿದ್ ಜೊತೆ ಗ್ರಾಮಕ್ಕೆ ಮರಳಿದ್ದರು. ಅಂದಿನಿಂದ ಎರಡು ಕುಟುಂಬಗಳ ನಡುವೆ ವೈಮನಸ್ಸು ಹೆಚ್ಚಾಗಿತ್ತು. ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಅಂಚೆ ಕಚೇರಿ ಬಳಿ ಫರ್ಹಾನಾ ಅವರನ್ನು ಆಕೆಯ ಸಹೋದರರು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಇನ್ನು, ಈ ಕೊಲೆ ಸುದ್ದಿಯನ್ನು ಗ್ರಾಮಸ್ಥರು ಪೊಲೀಸರಿಗೆ ರವಾನಿಸಿದ್ದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಫರ್ಹಾನಾ ಮೃತ ದೇಹವನ್ನು ಶಾಹೀದ್​ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಓದಿ: Honor Killing: ಮರ್ಯಾದಾ ಹತ್ಯೆ ಆರೋಪ.. ಕೋಲಾರದಲ್ಲಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ತಂದೆ.. ನೊಂದ ಯುವಕ ಆತ್ಮಹತ್ಯೆ

ಕರ್ನಾಟಕದಲ್ಲಿ ಮರ್ಯಾದಾ ಹತ್ಯೆ: ಕೋಲಾರ ಜಿಲ್ಲೆಯಲ್ಲಿ ಮಂಗಳವಾರ ಅಂದ್ರೆ ಜೂನ್​ 27ರಂದು ಮರ್ಯಾದಾ ಹತ್ಯೆ ಆರೋಪ ಪ್ರಕರಣ ನಡೆದಿತ್ತು. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೊಬ್ಬ ಸ್ವಂತ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಈ ಘಟನೆಯಿಂದ ನೊಂದ ಮೃತಳ ಪ್ರಿಯಕರ ಸಹ ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತರನ್ನು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮದ ಕೀರ್ತಿ (20), ಹಾಗೂ ಆತ್ಮಹತ್ಯೆ ಮಾಡಿಕೊಂಡವರನ್ನು ಗಂಗಾಧರ್​(24) ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.