ETV Bharat / state

ಕೋಲಾರ: ಕದ್ದು ಮುಚ್ಚು ಕೋಳಿ ಪಂದ್ಯ.. 200ಕ್ಕೂ ಹೆಚ್ಚು ಮಂದಿ ಭಾಗಿ

author img

By

Published : Nov 10, 2022, 5:25 PM IST

Steal and hide chicken match gambling
ಕದ್ದು ಮುಚ್ಚು ಕೋಳಿ ಪಂದ್ಯ ಜೂಜಾಟ

ಮಾಲೂರು ತಾಲೂಕಿನ ಕುಂತೂರು ಗ್ರಾಮದ ನೀಲಗಿರಿ ತೋಪಿನಲ್ಲಿ ಕದ್ದು ಮುಚ್ಚು ಕೋಳಿ ಪಂದ್ಯ ಜೂಜಾಟ ಆಯೋಜಿಸಿ ಪಂದ್ಯ ಆಡಲು ಬರುವಂತಹವರಿಗೆ 300 ರೂಪಾಯಿ ಶುಲ್ಕವನ್ನು ಸಹ ನಿಗದಿಪಡಿಸಲಾಗಿದೆ.

ಕೋಲಾರ: ಮಾಲೂರು ಭಾಗವು ಕೋಳಿ ಪಂದ್ಯದ ಜೂಜಿಗೆ ಹೆಸರುವಾಸಿಯಾಗಿದೆ. ಇದಕ್ಕೆ ಕಡಿವಾಣ ಹಾಕಲಾಗಿದ್ದರೂ ಕದ್ದು ಮುಚ್ಚಿ ಮತ್ತೆ ಕೋಳಿ ಪಂದ್ಯ ಶುರುವಾಗಿದೆ. ಮಾಲೂರು ತಾಲೂಕಿನ ಕುಂತೂರು ಗ್ರಾಮದ ನೀಲಗಿರಿ ತೋಪಿನಲ್ಲಿ ಪಂದ್ಯವನ್ನ ಆಯೋಜನೆ ಮಾಡಲಾಗಿತ್ತು ಎನ್ನಲಾಗ್ತಿದೆ.

ಕೋಳಿ ಪಂದ್ಯ ಆಡಲು ಬರುವಂತಹವರಿಗೆ 300 ರೂಪಾಯಿ ಶುಲ್ಕವನ್ನು ಸಹ ನಿಗದಿಪಡಿಸಲಾಗಿದ್ದು, ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ಮತ್ತು ಬೆಟ್ಟಿಂಗ್ ದಂಧೆಯೂ ಸಹ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.

ಕದ್ದು ಮುಚ್ಚು ಕೋಳಿ ಪಂದ್ಯ ಜೂಜಾಟ

ಈ ಕೋಳಿ ಪಂದ್ಯದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಜನರು ಕೋಳಿ ಪಂದ್ಯ ಜೂಜಾಟದಲ್ಲಿ ತೊಡಗಿದ್ದು, ಪಂದ್ಯ ನಡೆಯುವ ಸ್ಥಳದ ಬಗ್ಗೆ ಪಂದ್ಯ ಆಡಿಸುವ ಕಿಂಗ್ ಪಿನ್ ಮೊಬೈಲ್ ನಿಂದ ಪಂದ್ಯದಲ್ಲಿ ಭಾಗಿಯಾಗುವವರಿಗೆ ಮೆಸ್ಸೇಜ್​ ಬರುತಿತ್ತು. ಇನ್ನು, ಮಾಲೂರು ಪೋಲೀಸ್ ಠಾಣಾ ವ್ಯಾಪ್ತಿಯ ಕೂಗಳತೆ ದೂರದಲ್ಲಿ ಕೋಳಿ ಪಂದ್ಯದ ಜೂಜಾಟ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜೂಜಾಟ ಆಡುತ್ತಿದ್ದಾಗಲೇ ಸಿಕ್ಕಿಬಿದ್ದ ಸಿಬ್ಬಂದಿ.. ನಾಲ್ವರು ಪೊಲೀಸರು ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.