ETV Bharat / state

ಚೆಂಡು ಹೂವನ್ನು ಬಾಡಿಸಿದ ಕೊರೊನಾ; ಅರಳಿ ನಗುತ್ತಿದ್ದ ಪುಷ್ಪರಾಶಿ ಮಣ್ಣುಪಾಲು

author img

By

Published : Apr 12, 2020, 4:31 PM IST

A farmer destroyed flower crop in Kolar
ಬೆಳೆ ನಾಶ ಪಡಿಸಿದ ರೈತ

ಹೀಗಿರುವಾಗ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಹೂವು ಬೆಳೆದಿದ್ದ ಚೆಂಡು ಹೂವಿನ ಬೆಳೆಯನ್ನು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೂಟೇರಿ ಗ್ರಾಮದ ರೈತ ನಾಶ ಮಾಡುತ್ತಿದ್ದಾರೆ.

ಕೋಲಾರ : ಕೊರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ. ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದ ಹೂವಿಗೆ ಬೇಡಿಕೆಯಿಲ್ಲದಂತಾಗಿದೆ. ಹಾಗಾಗಿ, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೂಟೇರಿ ಗ್ರಾಮದ ರೈತ ಅರುಣ್​ ತಮ್ಮ ಕೈಯಾರೆ ಕಷ್ಟಪಟ್ಟು ಬೆಳೆದಿದ್ದ ಚೆಂಡು ಹೂವಿನ ಬೆಳೆಯನ್ನು ನಾಶ ಮಾಡುತ್ತಿದ್ದಾರೆ.

ಬೆಳೆ ನಾಶ ಪಡಿಸಿದ ರೈತ

ಹೂವು ಮಾರಾಟ ಮಾಡಲಾಗದೆ ದನ-ಕರು, ಕುರಿ-ಮೇಕೆಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಹೀಗೆ ಕೊರೊನಾದಿಂದ ರೈತರ ಪರಿಸ್ಥಿತಿ ನಿಜಕ್ಕೂ ದಾರುಣವಾಗಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ನಾಲ್ಕುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಚೆಂಡು ಹೂವು ಇಂದು ಕೊರೊನಾದಿಂದ ಕೇಳೋರಿಲ್ಲದಂತಾಗಿದೆ.

ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೊರೊನಾ ತುರ್ತುಪರಿಸ್ಥಿತಿ ಇಲ್ಲದೆ ಹೋಗಿದ್ರೆ ನಿಜಕ್ಕೂ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದ ರೈತ ಇಂದು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿಗೆ ತಲುಪಿದ್ದಾನೆ. ಹಾಗಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂಬುದು ರೈತರ ಆಗ್ರಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.