ETV Bharat / state

ಮಡಿಕೇರಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

author img

By

Published : May 6, 2020, 10:34 PM IST

ಇಲ್ಲಿನ ಮಹಾದೇವಪೇಟೆಯಲ್ಲಿ ವಾಸವಿದ್ದ ಗೃಹಿಣಿ ಭಾಗ್ಯಶ್ರೀ ಎಂಬುವರು ಬುಧವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತದೇಹ ಹಾಸಿಗೆ ಮೇಲೆ ಇದ್ದದ್ದು ಇನ್ನಷ್ಟು ಅನುಮಾನಕ್ಕೆ ‌ಕಾರಣವಾಗಿದೆ.

Suspected death of a housewife in Madikeri
ಮಡಿಕೇರಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು..!

ಮಡಿಕೇರಿ (ಕೊಡಗು): ನಗರದ‌‌ ಮಹಾದೇವಪೇಟೆಯಲ್ಲಿ ವಾಸವಿದ್ದ ಗೃಹಿಣಿಯೊಬ್ಬರು ಬುಧವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಭಾಗ್ಯಶ್ರೀ (18) ಮೃತಪಟ್ಟ ‌ಗೃಹಿಣಿಯಾಗಿದ್ದು, ನಗರ ಠಾಣೆ ಪೊಲೀಸರು ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಭಾಗ್ಯಶ್ರೀ ತಾಯಿ ನಗರದ ಸಂಪಿಗೆಕಟ್ಟೆಯಲ್ಲಿ ವಾಸ ಮಾಡುತ್ತಿದ್ದರು. ಪುತ್ರಿಯ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹ ಹಾಸಿಗೆ ಮೇಲೆ ಇದ್ದದ್ದು ಅನುಮಾನಕ್ಕೆ ‌ಕಾರಣವಾಗಿದೆ.‌ ನಗರ ಪೊಲೀಸರು ಭೇಟಿ ನೀಡಿ ‌ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.