ETV Bharat / state

ಹಿಂದುತ್ವ ವಿರೋಧಿ ಆಡಳಿತ ವಿರೋಧಿಸಿ ಶಿಂಧೆ ಹೊರ ಬಂದಿರುವುದು : ಸಚಿವ ಪ್ರಭು ಚೌಹಾಣ್

author img

By

Published : Jun 28, 2022, 5:36 PM IST

Maharashtra Political Crisis
ಸಚಿವ ಪ್ರಭು ಚಹ್ವಾಣ್

ಉದ್ದವ್ ಠಾಕ್ರೆ ಅವರ ಕುರ್ಚಿಯ ಆಸೆಯಿಂದಾಗಿ ಇಂದು ಮಹಾರಾಷ್ಟ್ರದಲ್ಲಿ ರಾಜಕೀಯ ಸಮಸ್ಯೆ ಉದ್ಭವವಾಗಿದೆ. ಬಿಜೆಪಿ ಮೈತ್ರಿ ಮಾಡದ ಕಾರಣ ಹಿಂದುತ್ವ ವಿರೋಧಿ ನೆಲೆ ಖಂಡಿಸಿ ಶಿಂಧೆ ಹೊರ ಬಂದಿದ್ದಾರೆ ಎಂದು ಸಚಿವ ಚೌಹಾಣ್​ ಹೇಳಿದರು..

ಕೊಡಗು : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಕುರಿತು ಕೊಡಗಿನಲ್ಲಿ ಸಚಿವ ಪ್ರಭು ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮಹಾರಾಷ್ಟ್ರದಲ್ಲಿ 30 ವರ್ಷದಿಂದ ಬಿಜೆಪಿ, ಶಿವಸೇನೆ ಮೈತ್ರಿಯಲ್ಲಿದ್ದವು.

ಆದರೆ, ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡರು. ಸರ್ಕಾರದಲ್ಲಿನ ಹಿಂದುತ್ವ ವಿರೋಧಿ ವಿಚಾರಗಳಿಂದಾಗಿ ಎಂಎಲ್​ಎಗಳು ಏಕನಾಥ ಶಿಂಧೆ ಜೊತೆ ಹೊರಗೆ ಬಂದಿದ್ದಾರೆ ಎಂದರು.

ಹಿಂದುತ್ವ ವಿರೋಧಿ ಆಡಳಿತವನ್ನ ವಿರೋಧಿಸಿ ಶಿಂಧೆ ಹೊರಬಂದಿರುವುದು ಅಂತಾ ಸಚಿವ ಪ್ರಭು ಚೌಹಾಣ್‌ ಹೇಳಿರುವುದು..

ಕರ್ನಾಟಕದಲ್ಲಿ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಇದ್ದಾಗ ಹೇಗೆ ಕೆಲಸಗಳು ಆಗುತ್ತಿರಲಿಲ್ಲವೋ ಹಾಗೆ ಅಲ್ಲಿಯೂ ಆಗಿದೆ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದರು. ಇದೇ ವೇಳೆ ಕೊಡಗಿನ ಪಶುಸಂಗೋಪನಾ, ಜಾನುವಾರು, ಹಂದಿ ಮತ್ತು ಕೋಳಿ ಸಾಕಾಣಿಕಾ ಕೇಂದ್ರಗಳನ್ನು ಪರಿಶೀಲಿಸಿದರು.

ಇದನ್ನೂ ಓದಿ : 50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.