ETV Bharat / state

ಕೊಡಗು: ಅದ್ಧೂರಿಯಾಗಿ ನಡೆದ ಹೊನ್ನಮ್ಮ ದೇವಿ ಜಾತ್ರೋತ್ಸವ

author img

By

Published : Aug 31, 2022, 9:56 PM IST

Honnamma Devi Jatra Mahotsav was held in a grand manner at kodagu
ಅದ್ಧೂರಿಯಾಗಿ ನಡೆದ ಹೊನ್ನಮ ದೇವಿ ಜಾತ್ರಾ ಮಹೋತ್ಸವ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡಮೊಳ್ತೆ ಗ್ರಾಮದಲ್ಲಿ ಹೊನ್ನಮ್ಮ ದೇವಿ ಜಾತ್ರಾ ಮಹೋತ್ಸವ ಬುಧವಾರ ನಡೆಯಿತು. ಪ್ರತಿ ವರ್ಷ ಗಣೇಶ ಹಬ್ಬದ ದಿನ ಇಲ್ಲಿ ಜಾತ್ರೆ ನೆರವೇರುತ್ತದೆ.

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡಮೊಳ್ತೆ ಗ್ರಾಮದಲ್ಲಿರುವ ತಾಯಿ ಹೊನ್ನಮ್ಮ ದೇವಿ ದೇಗುಲದಲ್ಲಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಪ್ರತಿ ವರ್ಷ ಗಣೇಶ ಹಬ್ಬದ ದಿನ ಹೊನ್ನಮ್ಮತಾಯಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತದೆ. ನವ ದಂಪತಿಗಳು ಈ ದೇವಸ್ಥಾನಕ್ಕೆ ಬಂದು ಬಾಗಿನ ಅರ್ಪಿಸುವುದು ವಾಡಿಕೆ. ಮಕ್ಕಳಾಗದವರು ಸಂತಾನ ಭಾಗ್ಯಕ್ಕಾಗಿ, ಮದುವೆಯಾಗದ ಯುವಕ-ಯುವತಿಯರು ಮದುವೆಯಾಗಲೆಂದು ಹರಕೆ ಹೊರುತ್ತಾರೆ.

ಅದ್ಧೂರಿಯಾಗಿ ನಡೆದ ಹೊನ್ನಮ ದೇವಿ ಜಾತ್ರಾ ಮಹೋತ್ಸವ

ಮೊರದಲ್ಲಿ ಹಣ್ಣು, ಹೂ, ತೆಂಗಿನಕಾಯಿ, ಬ್ಲೌಸ್ ಪೀಸ್ ಇಟ್ಟು ದಂಪತಿಗಳು ಹರಕೆ ತೀರಿಸುವರು. ಇದಕ್ಕೂ ಮೊದಲು ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ನಂತರ ಬಾಗಿನ ಹಿಡಿದುಕೊಂಡು ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಕೆರೆಗೆ ಅರ್ಪಿಸುತ್ತಾರೆ. ಈ ರೀತಿ ಹರಕೆ ತೀರಿಸಿದ್ರೆ ಕಷ್ಟ-ಕಾರ್ಪಣ್ಯಗಳು ಪರಿಹಾರವಾಗುತ್ತವೆ ಎಂಬುದು ಜನರ ನಂಬಿಕೆ.

ಇದನ್ನೂ ಓದಿ: ವಿಡಿಯೋ: 20 ಸಾವಿರ ಪ್ಲಾಸ್ಟಿಕ್​ ಬಾಟಲ್‌​ಗಳಿಂದ ತಯಾರಾದ ಗಣೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.