ETV Bharat / state

ಕೊಡಗಿನಲ್ಲಿ ಗುಡ್ಡ ಕುಸಿತ: ಇಡೀ ಗ್ರಾಮವೇ ಕಣ್ಮರೆ, 12 ಮಂದಿ ನಾಪತ್ತೆ!

author img

By

Published : Aug 10, 2019, 7:02 PM IST

ಕೊಡಗಿನಲ್ಲಿ ಗುಡ್ಡ ಕುಸಿತ

ಗುಡ್ಡ ಕುಸಿತದಿಂದಾಗಿ ವಿರಾಜಪೇಟೆ ತಾಲೂಕಿನ ತೋಮಾರ ಗ್ರಾಮ ಸಂಪೂರ್ಣವಾಗಿ ಮುಚ್ಚಿಹೊಗಿದ್ದು, ಸಾವು ನೋವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಎನ್​ಡಿಆರ್​ಎಫ್​ ತಂಡ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಕ್ಕಿಳಿದಿದೆ.

ಕೊಡಗು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗಿದ್ದು, ಜಿಲ್ಲೆಯ ತೋಮಾರ ಗ್ರಾಮ ಕಣ್ಮರೆಯಾಗಿದೆ. ಸ್ಥಳಕ್ಕೆ ಎನ್​ಡಿಆರ್​ಎಫ್​ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋಮಾರ ಗ್ರಾಮದಲ್ಲಿ ನಿನ್ನೆ ಸುಮಾರು 11 ಗಂಟೆಗೆ ಗುಡ್ಡ ಕುಸಿತ ಉಂಟಾಗಿದ್ದು, ಬೃಹತ್ ಗಾತ್ರದ ಮರ, ಕಲ್ಲು ಬಂಡೆಗಳು ಇಡೀ ಗ್ರಾಮವನ್ನೆ ಆವರಿಸಿವೆ. ಗ್ರಾಮಕ್ಕೆ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ಜಿಲ್ಲಾಡಳಿತ 8 ಮಂದಿ ಕಣ್ಮರೆಯಾಗಿದ್ದಾರೆ ಎನ್ನುವ ಮಾಹಿತಿ ನೀಡಿದ್ದರೆ, ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ 12 ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಭಾರಿ ಗುಡ್ಡ ಕುಸಿತ: ಕಣ್ಮರೆಯಾದ ತೋಮಾರ ಗ್ರಾಮ

ಅಗಾಧವಾಗಿ ಬಿದ್ದಿರುವ ಮಣ್ಣಿನ ರಾಶಿಯಡಿಯಲ್ಲಿ ಮನೆಗಳು ಎಲ್ಲಿವೆ ? ಎಲ್ಲಿ ಬಗೆಯಬೇಕು ? ಎನ್ನುವ ಗೊಂದಲ ಶುರುವಾಗಿದ್ದು, ಈಗಾಗಲೇ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ತೆರವುಗೊಳಿಸುತ್ತಿದೆ. ಮಿಲಿಟರಿ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ, ಮುಂದೆ ಆಗಬೇಕಿರುವ ಕಾರ್ಯಾಚರಣೆ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.

Intro:ತೋರ ಗ್ರಾಮದಲ್ಲಿ ಗುಡ್ಡ ಕುಸಿತ: ಪ್ರಕೃತಿಯ ಮಡಿಲಲ್ಲಿ ನೀರವ ಮೌನ

ಕೊಡಗು: ಸುಂದರ ಹಸಿರು ಹೊದ್ದು ಮಲಗಿರುವ ಪ್ರಕೃತಿಯ ಮಡಿಲಲ್ಲಿ ಇದೀಗ ನೀರವ ಮೌನ.ನೂರಾರು ಎಕರೆ ಜನವಸತಿ ಪ್ರದೇಶದ ‌ಮೇಲೆ ಬಿದ್ದಿರುವ ಮಣ್ಣಿನ ರಾಶಿ.ನಮ್ಮವರು ಏನಾದರೂ ಬದುಕಿ ಉಳಿದಿರಬಹುದಾ..? ಎನ್ನುವ ಭರವಸೆಯಲ್ಲೇ ನಿರಾಶ್ರಿತ ಕೇಂದ್ರ ಸೇರಿರುವ ಕುಟುಂಬಸ್ಥರು...ಇಂತಹ ದೃಶ್ಯಗಳನ್ನು ಸೃಷ್ಟಿಸಿರುವುದು ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ವರುಣ...!

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋಮಾರ ಗ್ರಾಮದಲ್ಲಿ ಇಂತಹ ನೀರವ ಮೌನ ಆವರಿಸಿದೆ. ನೆನ್ನೆ ಕುಸಿದಿರುವ ಭಾರೀ ಗಾತ್ರದ ಗುಡ್ಡ ಜನವಸತಿ ಪ್ರದೇಶದ ಮೇಲೆಯೇ ಕುಸಿದಿದೆ. ಪರಿಣಾಮ ಹಲವು ಕುಟುಂಬಗಳು ನೆಲಸಮಾಧಿ ಆಗಿರುವ ಶಂಕೆ ವ್ಯಕ್ತವಾಗಿದೆ‌.ಇವೆಲ್ಲದಕ್ಕೂ ಕಾರಣವಾಗಿದ್ದು ವಾರದಿಂದ ಕೊಡಗಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ.

ನೆನ್ನೆ ಸುಮಾರು 11 ಗಂಟೆ ಸುಮಾರಿಗೆ ಗುಡ್ಡ ಕುಸಿದಿದೆ. ಪರಿಣಾಮ‌ ಮಣ್ಣು, ಬೃಹತ್ ಗಾತ್ರದ ಮರಗಳು, ಕಲ್ಲು, ಬಂಡೆಗಳು ಇಡೀ ಗ್ರಾಮವನ್ನೇ ಆಪೋಷನ ಮಾಡಿದೆ.ಗ್ರಾಮಕ್ಕೆ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ.ಡಾಂಬರ್ ರಸ್ತೆಗಳು ಕೊಚ್ವಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.ಹೊಳೆಗಳು ತುಂಬಿ ಹರಿಯುತ್ತಿವೆ.ವ್ಯಾಪ್ತಿಯ ಹಳ್ಳಿಗಳ ಜನರು ಘಟನಾ ಸ್ಥಳಕ್ಕೆ ಆಗಮಿಸಿ ಬಾಯಿ ಮೇಲೆ ಬೆರಳಿಟ್ಟು ಅಯ್ಯೋ ಪಾಪ ಎಂದು ಮರಗುತ್ತಿದ್ದಾರೆ. 

ಗುಡ್ಡ ಕುಸಿತ್ತಕ್ಕೆ ಸಿಲುಕಿ ಬಲಿಯಾಗಿದ್ದ ತೋರ ಗ್ರಾಮದ ಮಮತಾ ಹಾಗೂ ಆಕೆಯ ಮಗಳು ಲಿಖಿತಾ ಮೃತ ದೇಹಗಳು ಅಪ್ಪಿಕೊಂಡ ಸ್ಥಿತಿಯಲ್ಲಿ ಬೆಳಿಗ್ಗೆ ಪತ್ತೆಯಾಗಿವೆ. ಆ ದೃಶ್ಯವನ್ನು ನೋಡಿದರೆ ಎಂತಹವರ ಕಣ್ಣಾಣಿಗಳೂ ಒದ್ದೆಯಾಗದೆ ಇರವು. ಜಿಲ್ಲಾಡಳಿತ 8 ಮಂದಿ ಕಣ್ಮರೆ ಆಗಿದ್ದಾರೆ‌ ಎನ್ನುವ ಮಾಹಿತಿ ನೀಡಿದರೆ‌. ಸ್ಥಳೀಯರು ನೀಡುವ ಮಾಹಿತಿ ಪ್ರಕಾರ ಇನ್ನೂ 12 ಮಂದಿ ಇಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. 

ಜಿಲ್ಲೆಯಲ್ಲಿ ವರುಣನ ಅಬ್ಬರವೆಂತೂ ಕಡಿಮೆ ಆಗಿಲ್ಲ. ಮೊದಲೇ ಸಂಪರ್ಕ ಕಡಿತವಾಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಕಾರ್ಯಕ್ಕೂ ತೊಡಕಾಗಿದೆ. ಈಗಾಗಲೇ ನಿರಂತರ ಮಳೆ ಆಗುತ್ತಿರುವ ಪರಿಣಾಮ ಮಣ್ಣು ಕೆಸರು ಗದ್ದೆಯಂತೆ ಆಗಿದೆ.ಅಗಾಧವಾಗಿ ಬಿದ್ದಿರುವ ಮಣ್ಣಿನ ರಾಶಿಯಲ್ಲಿ ಮನೆಗಳು ಎಲ್ಲಿವೆ?. ಎಲ್ಲಿಗೆ ಹೋಗಬೇಕು?.ಎಲ್ಲಿ ಬಗೆಯಬೇಕು? ಎನ್ನುವ ಗೊಂದಲಗಳೂ ಇವೆ.

ಈಗಾಗಲೇ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ತೆರವುಗೊಳಿಸುತ್ತಿದೆ. ಮಿಲಿಟರಿ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸಾಮರ್ಥಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ, ಮುಂದೆ ಆಗಬೇಕಿರುವ ಕಾರ್ಯಚರಣೆ ಬಗ್ಗೆ ರೂಪು-ರೇಷೆಗಳನ್ನು ಸಿದ್ಧಪಡಿಸಿದ್ದಾರೆ. 

(ವಾಕ್ ಥ್ರೂ...) 


-ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.




Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.