ETV Bharat / state

ಕೊಡಗಿನಲ್ಲಿ ತಗ್ಗದ ವರುಣಾರ್ಭಟ : ಜನ ಜೀವನ ಅಸ್ತವ್ಯಸ್ತ

author img

By

Published : Jul 23, 2021, 10:19 PM IST

kodagu
ಕೊಡಗಿನಲ್ಲಿ ತಗ್ಗದ ವರುಣಾರ್ಭಟ

ಚೆರಿಯಪರಂಬು ಪೈಸಾರಿ ನಿವಾಸಿಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮಡಿಕೇರಿ ಸಮೀಪದ ಹೊದಕಾನ-ಆವಂಡಿ ರಸ್ತೆಗೆ ಬರೆ ಕುಸಿದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಎರಡನೇ ಮೊಣ್ಣಂಗೇರಿ ಬಳಿಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿದ್ದು, ಇನ್ನೂ ಮಳೆ ಹೆಚ್ಚಾದರೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಖಡಿತವಾಗುವ ಸಾಧ್ಯತೆ ಇದೆ..

ಕೊಡಗು : ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಭಾರಿ ಅವಾಂತರ ಸೃಷ್ಟಿಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾವೇರಿ, ಲಕ್ಷ್ಮಣತೀರ್ಥ, ಸುಜೋತಿ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಹಲವು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಕೊಡಗಿನಲ್ಲಿ ತಗ್ಗದ ವರುಣಾರ್ಭಟ..

ಕಳೆದ‌ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಜಲಪ್ರಳಯದ ಕಾರ್ಮೋಡ ಇನ್ನೂ ಮಾಸಿಲ್ಲ. ಈಗ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮತ್ತೆ ಜಲ ಪ್ರಳಯ ಸಂಭವಿಸಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ.

ಮಡಿಕೇರಿ ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಕಕ್ಕಬ್ಬೆ,ಎಡಪಾಲ,ನಾಪೋಕ್ಲು, ಮೂರ್ನಾಡು ಸಂಪರ್ಕ ಕಡಿತವಾಗಿದೆ. ಇದರಿಂದ ನಾಪೋಕ್ಲು ವ್ಯಾಪ್ತಿ ನದಿ ದಂಡೆ ನಿವಾಸಿಗಳು ಪ್ರವಾಹದ ಆತಂಕದಲ್ಲಿದ್ದಾರೆ.

ಚೆರಿಯಪರಂಬು ಪೈಸಾರಿ ನಿವಾಸಿಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮಡಿಕೇರಿ ಸಮೀಪದ ಹೊದಕಾನ-ಆವಂಡಿ ರಸ್ತೆಗೆ ಬರೆ ಕುಸಿದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಎರಡನೇ ಮೊಣ್ಣಂಗೇರಿ ಬಳಿಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿದ್ದು, ಇನ್ನೂ ಮಳೆ ಹೆಚ್ಚಾದರೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಖಡಿತವಾಗುವ ಸಾಧ್ಯತೆ ಇದೆ.

ನಾಪೋಕ್ಲು ಕೊಟ್ಟಮುಡಿ ಮಡಿಕೇರಿ ಸಂಪರ್ಕ ರಸ್ತೆ ಕಡಿತವಾಗಿದೆ. ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಕೃಷಿ ಜಮೀನು ಮುಳುಗಡೆಯಾಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ನದಿ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗೆ ಮಳೆ ಮುಂದುವರಿದರೆ ಮಡಿಕೇರಿ ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಜಿಲ್ಲೆಯ ಮೂರು ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ, ಮಡಿಕೇರಿ, ಮರಗೋಡು,ಕತ್ತಲೆಕಾಡು, 2ನೇ ಮೊಣ್ಣಂಗೇರಿ, ಕಾಲೂರು, ಗಾಳಿಬೀಡು, ಮಾದಾಪುರ, ಗರ್ವಾಲೆ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಸೇರಿ ಬಹುತೇಕ ಕಡೆ ವಿದ್ಯುತ್ ಕಡಿತಗೊಂಡಿದ್ದು, ಕಗ್ಗತ್ತಲಲ್ಲಿ ಜೀವನ ದೂಡುವ ಪರಿಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.