ETV Bharat / state

ಮುಂಗಾರು ಅಬ್ಬರ ಭಾಗಮಂಡಲದ ತ್ರೀವೆಣಿ ಸಂಗಮ ಭರ್ತಿ: ರಸ್ತೆ ಸಂಚಾರ ಸ್ಥಗಿತ ಪ್ರವಾಸಿಗರ ಪರದಾಟ

author img

By

Published : Jul 4, 2022, 4:26 PM IST

due-to-heavy-rain-some-roads-are-closed-in-kodagu
ಮುಂಗಾರು ಅಬ್ಬರ ಭಾಗಮಂಡಲದ ತ್ರೀವೆಣಿ ಸಂಗಮ ಭರ್ತಿ : ರಸ್ತೆ ಸಂಚಾರ ಸ್ಥಗಿತ ಪ್ರವಾಸಿಗರ ಪರದಾಟ

ಕೊಡಗು ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ರಸ್ತೆಗಳು ಜಲಾವೃತಗೊಂಡಿದ್ದು, ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡಗು : ಜಿಲ್ಲಾದ್ಯಂತ ಬಿರುಸಿನ ಮಳೆಯಾಗುತ್ತಿದ್ದು, ಭಾಗ ಮಂಡಲ ಮತ್ತು ತಲಕಾವೇರಿ ಭಾಗದಲ್ಲಿ ಮಳೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಭಾರಿ ಮಳೆಗೆ ಭಾಗಮಂಡಲದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ತಲಕಾವೇರಿ ಭಾಗಮಂಡಲದಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನಾಪೋಕ್ಲು- ಭಾಗಮಂಡಲ ರಸ್ತೆ ಮತ್ತು ಭಾಗಮಂಡಲ - ಮಡಿಕೇರಿ ರಸ್ತೆ ಜಲಾವೃತವಾಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ‌ ಸಂಪರ್ಕ ಕಡಿತವಾಗಿದ್ದು, ಪ್ರವಾಸಿಗರು ಪರದಾಡುವಂತಾಗಿದೆ.

ಮುಂಗಾರು ಅಬ್ಬರ ಭಾಗಮಂಡಲದ ತ್ರೀವೆಣಿ ಸಂಗಮ ಭರ್ತಿ : ರಸ್ತೆ ಸಂಚಾರ ಸ್ಥಗಿತ ಪ್ರವಾಸಿಗರ ಪರದಾಟ

ಇಲ್ಲಿನ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ನೀರು ನುಗ್ಗಿದ್ದು, ಪ್ರವಾಸಿಗರಿಗೆ, ದೇವಸ್ಥಾನದ ಸಿಬ್ಬಂದಿಗೆ ದೇವಸ್ಥಾನಕ್ಕೆ ತೆರಳಲು ತೊಂದರೆಯಾಗಿದೆ. ದೇವಾಲಯದ ಆವರಣದಲ್ಲಿದ್ದ ಅಂಗಡಿಗೆ ನೀರು ನುಗ್ಗಿದ ಕಾರಣ ವ್ಯಾಪಾರ ನಿಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಓದಿ : ಎರಡು ತಿಂಗಳಲ್ಲಿ ಮುಂದಿನ ರಾಜಕೀಯದ ಬಗ್ಗೆ ತೀರ್ಮಾನ: ಶಾಸಕ ಜಿ.ಟಿ ದೇವೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.